ಬೆಂಗಳೂರು: ರಾಜ್ಯದಲ್ಲಿ ಬಾಣಂತಿ ಹಾಗೂ ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಸಿಂಗಪುರದ ತಜ್ಞ ವೈದ್ಯರು ರಾಜ್ಯದ ವೈದ್ಯಕೀಯ ವೃತ್ತಿನಿರತರಿಗೆ ತರಬೇತಿ ನೀಡಲಿದ್ದಾರೆ. ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ಹಾಗೂ ಸಿಂಗಪುರ ಆರೋಗ್ಯ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ.

ವಿಕಾಸಸೌಧದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಈ ವಿಷಯ ತಿಳಿಸಿದರು.

ಸಿಂಗಪುರದ ಪ್ರಸೂತಿ ತಜ್ಞರು, ನವಜಾತ ಶಿಶು ತಜ್ಞರು ಹಾಗೂ ಶುಶ್ರೂಷಕಿಯರು ರಾಜ್ಯದ ಆರೋಗ್ಯ ವೃತ್ತಿನಿರತರಿಗೆ ತರಬೇತಿ ನೀಡಲಿದ್ದಾರೆ. ಶಿಶುಮರಣ–ತಾಯಿ ಮರಣದ ಪ್ರಮಾಣ ಹೆಚ್ಚಿರುವ ಬೀದರ್, ರಾಯಚೂರು, ಕಲಬುರಗಿಯ ವೈದ್ಯರು ಮತ್ತು ದಾದಿಯರಿಗೆ ಮೊದಲ ಹಂತದಲ್ಲಿ ತರಬೇತಿ ನೀಡಲಾಗುವುದು. ವರ್ಷಕ್ಕೆ 200 ಜನರಂತೆ ಮುಂದಿನ ಮೂರು ವರ್ಷಗಳಲ್ಲಿ 600 ಮಂದಿಗೆ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.

ಇಡೀ ಜಗತ್ತಿನ ಒಟ್ಟು ತಾಯಂದಿರ ಮರಣ ಪ್ರಮಾಣದ ಪೈಕಿ ಶೇ 20ರಷ್ಟು ತಾಯಂದಿರು ಭಾರತದವರಾಗಿದ್ದಾರೆ. ಸಿಂಗಪುರದಲ್ಲಿ ಈ ಪ್ರಮಾಣ ಅತ್ಯಂತ ಕಡಿಮೆ ಇದೆ.

ಹೀಗಾಗಿ ಅಲ್ಲಿನ ವೈದ್ಯರ ಸಹಭಾಗಿತ್ವದಲ್ಲಿ ಕರ್ನಾಟಕದ ವೈದ್ಯರಿಗೆ ತರಬೇತಿ ನೀಡಿ, ತಾಯಂದಿರು, ಶಿಶುಮರಣ ಪ್ರಮಾಣವನ್ನು ಕಡಿಮೆ ಮಾಡುವುದು ಸರ್ಕಾರದ ಉದ್ದೇಶ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.