ಬೆಂಗಳೂರು: ತಂದೆಯಿಂದ ಹಲ್ಲೆಗೊಳಗಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಮಗು ನೇಹಾ ಆಫ್ರಿನ್ಳ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

`ಮಗುವಿನ ಮೆದುಳಿನ ಪದರದಲ್ಲಿ ರಕ್ತಸ್ರಾವ ಉಂಟಾಗಿದ್ದು, ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯರು ಸ್ಕ್ಯಾನಿಂಗ್ ಮಾಡಿದ್ದಾರೆ. ಶಸ್ತ್ರಚಿಕಿತ್ಸೆಯ ಬದಲಾಗಿ ಔಷಧದಿಂದಲೇ ಸಹಜ ಸ್ಥಿತಿಗೆ ತರುವುದು ಸೂಕ್ತ~ ಎಂದು ವಾಣಿ ವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸೊಮೇಗೌಡ ಅವರು ತಮ್ಮ ಅಭಿಪ್ರಾಯವನ್ನು `ಪ್ರಜಾವಾಣಿ~ಗೆ ಹೇಳಿದರು.

`ಮಗುವಿನ ನಾಡಿಮಿಡಿತ ಹಾಗೂ ರಕ್ತದೊತ್ತಡ ಸಹಜ ಸ್ಥಿತಿಗೆ ಮರಳಿದೆ. ಆದರೆ, ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿರುವುದರಿಂದ ಉಸಿರಾಟದ ತೊಂದರೆ ಇದೆ. ಕೃತಕ ಉಸಿರಾಟದ ಮೂಲಕ ಮಗುವಿಗೆ ಆಮ್ಲಜನಕ ನೀಡಲಾಗುತ್ತಿದೆ~ ಎಂದು ಅವರು ತಿಳಿಸಿದರು.

`ಮಗು ನೇಹಾ ಇಂದು ಎರಡು ಮೂರು ಬಾರಿ ಕೈಕಾಲುಗಳನ್ನು ಆಡಿಸಿದ್ದು ಗುಣಮುಖಳಾಗುವ ಸೂಚನೆ ತೋರಿಸುತಿದ್ದಾಳೆ. ಆದರೆ, ಎರಡು ಬಾರಿ ಮೂರ್ಛೆಯ ಲಕ್ಷಣಗಳು ಕಾಣಿಸಿಕೊಂಡಿರುವುದು ಆತಂಕವನ್ನು ಹೆಚ್ಚಿಸಿದೆ. ಆರೋಪಿ ತಂದೆ ಕಚ್ಚಿರುವ ಹಾಗೂ ಸಿಗರೇಟಿನಿಂದ ಸುಟ್ಟಿರುವ ಗಾಯಗಳು ಮಗುವಿನ ನೋವನ್ನು ಹೆಚ್ಚಿಸಿದೆ. ಇನ್ನೂ ಮೂರು ವಾರಗಳ ಕಾಲ ಮಗುವಿಗೆ ತೀವ್ರ ನಿಗಾದಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುವುದು~ ಎಂದು ವೈದ್ಯರು ತಿಳಿಸಿದರು.

ಆರೋಪಿ ಪೋಷಕರಿಗೆ ನೋಟಿಸ್: ಘಟನೆ ಸಂಬಂಧ ಶುಕ್ರವಾರ ಸಮಿತಿ ಸದಸ್ಯರ ಎದುರು ಹಾಜರಾಗಬೇಕು ಎಂದು ಮಕ್ಕಳ ಕಲ್ಯಾಣ ಸಮಿತಿಆರೋಪಿ ಫಾರುಕ್ನ ಪೋಷಕರಿಗೆ ನೋಟಿಸ್ ನೀಡಿದೆ.

ಮಂಗಳವಾರ ಸಮಿತಿ ಎದುರು ಹಾಜರಾಗಿದ್ದ ಮಗುವಿನ ತಾಯಿ ರೇಷ್ಮಾ ಬಾನು `ನನಗೆ ಹೆಣ್ಣು ಮಗುವಾಗಿರುವುದು ಇಬ್ಬರ ಪೋಷಕರಿಗೂ ಇಷ್ಟವಿರಲಿಲ್ಲ. ತನ್ನ ಪತಿ ಉಮರ್ನ ಕಿರುಕುಳ ತಾಳಲಾರದೇ ಮೊದಲ ಪತ್ನಿ ಇವರಿಗೆ ವಿಚ್ಛೇಧನೆ ನೀಡಿದ್ದರು. ನಂತರ ಇವರು ನನ್ನನ್ನು ವಿವಾಹವಾದರು~ ಎಂದು ಹೇಳಿದ್ದಾಗಿ ಸಿಡಬ್ಲ್ಯುಸಿಯ ಮುಖ್ಯಸ್ಥರಾದ ಮೀನಾ ಜೈನ್ ತಿಳಿಸಿದರು.

ತನಗೆ ನ್ಯಾಯ ಬೇಕು ಎಂದು ರೇಷ್ಮಾ ಬಾನು ಸಮಿತಿ ಮುಂದೆ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರ(ಕೆಎಸ್ಎಲ್ಎಸ್ಎ) ರೇಷ್ಮಾ ಪರ ಹೋರಾಟಕ್ಕೆ ಮುಂದೆ ಬಂದಿದೆ.

`ಫಾರೂಕ್ ಗಾಂಜಾ ಹಾಗೂ ಮದ್ಯವ್ಯಸನಿಯಾಗಿದ್ದು, ತಾನು ಗರ್ಭಿಣಿಯಾಗಿದ್ದಾಗ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ. ಹೆಣ್ಣು ಮಗು ಹುಟ್ಟಿತು ಎಂಬ ಕಾರಣಕ್ಕೆ ಮಗುವನ್ನು ಕೊಲ್ಲಲು ಯತ್ನಿಸಿದ್ದಾರೆ. ಇಬ್ಬರ ವಯಸ್ಸಿನಲ್ಲಿ ಭಾರಿ ಅಂತರವಿದ್ದರೂ ಪೋಷಕರ ಒತ್ತಡಕ್ಕೆ ಮಣಿದು ವಿವಾಹವಾದೆ. ಈಗ ಕಾನೂನು ರೀತಿಯಲ್ಲಿ ಹೋರಾಟ ಮಾಡಿ ಅವರಿಗೆ ಪಾಠ ಕಲಿಸುತ್ತೇನೆ~ ಎಂದು ರೇಷ್ಮಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.