ಗುರುವಾರ , ಜನವರಿ 23, 2020
26 °C

ಶಿಷ್ಯನಿಗೆ ಅಣ್ಣಾ ತಿರು­ಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಷ್ಯನಿಗೆ ಅಣ್ಣಾ ತಿರು­ಗೇಟು

​ರಾಳೆಗಣಸಿದ್ದಿ (ಪಿಟಿಐ): ಪ್ರಸ್ತುತ ಲೋಕಪಾಲ ಮಸೂದೆ ಇಲಿಯನ್ನು ಕೂಡ ಜೈಲಿಗೆ ಕಳುಹಿಸುವ ಸಾಮರ್ಥ್ಯ ಹೊಂದಿ­ಲ್ಲ ಎಂಬ ಅರವಿಂದ್ ಕೇಜ್ರಿವಾಲ್‌ ಟೀಕೆಗೆ ಅಣ್ಣಾ ಹಜಾರೆ ತಿರು­ಗೇಟು ನೀಡಿದ್ದಾರೆ.

‘ನೀವು ಇಲಿಯ ಬಗ್ಗೆ ಮಾತನಾಡು­ತ್ತಿದ್ದೀರಿ. ಆದರೆ ಈ ಮಸೂ­ದೆ ಸಿಂಹವನ್ನು ಕೂಡ ಬಲೆಗೆ ಕೆಡ­ಹುವ ಶಕ್ತಿ ಹೊಂದಿದೆ’ ಎಂದು ಅವರು ಹೇಳಿದ್ದಾರೆ. ತಿದ್ದುಪಡಿ ನಂತರ ರಾಜ್ಯಸಭೆಯಲ್ಲಿ ಮಂಡನೆಯಾಗಿರುವ ಮಸೂದೆಯನ್ನು ಹಜಾರೆ ಶ್ಲಾಘಿಸಿದ್ದಾರೆ.ಮಸೂದೆಯನ್ನು ಬೆಂಬಲಿಸುವಂತೆ,  ಸಮಾಜವಾದಿ ಪಕ್ಷವವನ್ನು ಹಜಾರೆ ವಿನಂತಿಸಿಕೊಂಡಿದ್ದಾರೆ.  ಜನ ಲೋಕ­ಪಾಲ್‌ ಮಸೂದೆ ಜಾರಿಗೆ ಒತ್ತಾ­­ಯಿಸಿ ಸಾಮಾಜಿಕ ಕಾರ್ಯ­ಕರ್ತ ಅಣ್ಣಾ ಹಜಾರೆ ನಡೆ­ಸು­ತ್ತಿ­ರುವ  ಅನಿರ್ದಿಷ್ಟಾವಧಿ ಉಪ­ವಾಸ ಸತ್ಯಾಗ್ರಹ  7ನೇ ದಿನಕ್ಕೆ ಕಾಲಿಟ್ಟಿದೆ.

ಪ್ರತಿಕ್ರಿಯಿಸಿ (+)