ದಾವಣಗೆರೆ: ~ಪಕ್ಷದಲ್ಲಿ ಸ್ವಲ್ಪಮಟ್ಟಿನ ಭಿನ್ನಾಭಿಪ್ರಾಯಗಳಿವೆ. ಅವುಗಳನ್ನು ಸರಿಮಾಡಿಕೊಳ್ಳುತ್ತೇವೆ. ಪಕ್ಷದಲ್ಲಿ ಕೆಲವರು ಶಿಸ್ತು ಮೀರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದಕ್ಕೆ ಪ್ರಮುಖರ ಸಮಿತಿ ಕರೆದು ತಡೆ ಹಾಕಲಾಗುವುದು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ತಿಳಿಸಿದರು.

ನಗರದ ಶಿವಾಜಿ ನಗರದ ದುರ್ಗಾಂಬಿಕಾ ವೃತ್ತದಲ್ಲಿ ನಿರ್ಮಿಸಿರುವ ಅಶ್ವಾರೂಢ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

~ಸದ್ಯ ಬಜೆಟ್ ಕುರಿತು ಚಿಂತನೆ ನಡೆಸಲಾಗುತ್ತಿದ್ದು, ಕಳೆದ ವರ್ಷಕ್ಕಿಂಥ ಈ ವರ್ಷ ಬಜೆಟ್ ಮೊತ್ತ ಶೇ. 10 ರಿಂದ 15ರಷ್ಟು ಹೆಚ್ಚಿಸಲಾಗುದು. ಪ್ರತ್ಯೇಕ ಯುವ ಬಜೆಟ್ ಮಂಡಿಸುವ ಕುರಿತು ಚಿಂತಿಸಿಲ್ಲ. ಆದರೆ, ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಲಾಗುವುದು~ ಎಂದರು.

ಬಿಎಸ್ವೈ ವೈಯಕ್ತಿಕ ಪ್ರವಾಸ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಪಕ್ಷದಲ್ಲಿ ಯಾವುದೇ ಭಿನ್ನ ಮತವಿಲ್ಲ. ವೈಯಕ್ತಿಕ ಇಚ್ಚೆಯಂತೆ ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ. ಇದಕ್ಕೆ ಈಶ್ವರಪ್ಪ, ಸದಾನಂದಗೌಡರು ಸೇರಿಕೊಂಡರೆ ಅಭ್ಯಂತರವಿಲ್ಲ. ಸಮಾವೇಶ, ಸಭೆಗಳ ಮೂಲಕ ಪಕ್ಷವನ್ನು ಸಂಘಟಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.