ಶ್ರೀ ಕೃಷ್ಣಮೆನನ್ರ ಪ್ರಚಂಡ ವಿಜಯ
ಮುಂಬೈ, ಮಾ. 1 - ಉತ್ತರ ಮುಂಬೈ ಲೋಕ ಸಭಾ ಕ್ಷೇತ್ರದ ಮತಗಳ ಎಣಿಕೆಯು ಇಂದು ಸಂಜೆ ಇಲ್ಲಿ ಮುಕ್ತಾಯವಾದಾಗ ಕೇಂದ್ರ ರಕ್ಷಣಾ ಸಚಿವ ಕೃಷ್ಣಮೆನನ್ ಅವರು ತಮ್ಮ ಅತಿ ಸಮೀಪದ ಪ್ರತಿಸ್ಪರ್ಧಿಯಾದ ಶ್ರೀ ಜೆ. ಬಿ. ಕೃಪಲಾನಿಯವರಿಗಿಂತ (ಸ್ವತಂತ್ರ) 1,45,426 ಮತಗಳಿಂದ ಮುಂದಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.

ರೆಡ್ಡಿ, ದಾತಾರ್, ಕೃಷ್ಣಪ್ಪ, ಮಹಿಷಿ ಆಯ್ಕೆ
ಬೆಂಗಳೂರು, ಮಾ. 1 - ಕೇಂದ್ರದ ಸಚಿವರಾದ ಸರ್ವಶ್ರೀ ಕೆ. ಸಿ. ರೆಡ್ಡಿ, ಬಿ. ಎನ್. ದಾತಾರ್, ಉಪಸಚಿವ ಶ್ರೀ ಎಂ. ವಿ. ಕೃಷ್ಣಪ್ಪ, ರಾಜ್ಯ ಸಭೆಯ ಉಪಸಭಾಪತಿ ಶ್ರೀ ಎಸ್. ವಿ. ಕೃಷ್ಣಮೂರ್ತಿರಾವ್ ಅವರ ಆಯ್ಕೆಯೊಡನೆ ಕಾಂಗ್ರೆಸ್ ಪಕ್ಷ ರಾಜ್ಯದ 26 ಲೋಕ ಸಭೆ ಸ್ಥಾನಗಳಲ್ಲಿ 25 ಸ್ಥಾನಗಳನ್ನು ಪಡೆದು ಜಯಗಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.