ನವದೆಹಲಿ (ಪಿಟಿಐ): ಹವಾಮಾನ ಬದಲಾವಣೆಗೆ ಸಂಬಂಧಿಸಿದ ನಾಲ್ಕು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಿರುವ ಡರ್ಬಾನ್ ಶೃಂಗಸಭೆಯಲ್ಲಿ ಯಾವುದೇ ನಿರ್ದಿಷ್ಟ ಅಥವಾ ಅಂತಿಮ ಘೋಷಣೆ ಹೊರಬೀಳುವ ನಿರೀಕ್ಷೆ ಭಾರತಕ್ಕೆ ಇಲ್ಲ.

‘ಹಾಗೆಂದ ಮಾತ್ರಕ್ಕೆ ಈ ವಿಷಯದಲ್ಲಿ ನಾವು ಯಾವುದೇ ಸಂಧಾನ, ಚರ್ಚೆ ನಡೆಸಿಲ್ಲ ಅಥವಾ ನಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿಲ್ಲ ಎಂದರ್ಥವಲ್ಲ. ಆದರೆ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಡರ್ಬಾನ್ ಶೃಂಗಸಭೆಯ ಬಳಿಕವೂ ಈ ಎಲ್ಲ ವಿಷಯಗಳು ಕಾರ್ಯಸೂಚಿಯಲ್ಲೇ ಉಳಿಯಲಿವೆ’ ಎಂದು ಕೇಂದ್ರ ಪರಿಸರ ಸಚಿವ ಜೈರಾಮ್ ರಮೇಶ್ ಹೇಳಿದರು. ‘ಈ ಸಮ್ಮೇಳನವನ್ನು ನಾವು ವಾಸ್ತವದ ನೆಲೆಗಟ್ಟಿನಿಂದ ನೋಡಬೇಕು. ಅದು ಬಿಟ್ಟು ಉತ್ಪ್ರೇಕ್ಷೆಯಿಂದ ನೋಡಿದರೆ ನಿರಾಶೆ ಕಟ್ಟಿಟ್ಟಬುತ್ತಿ’ ಎಂದು ಎಚ್ಚರಿಸಿದರು.

ದೆಹಲಿ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯ ಅಧಿವೇಶನದಲ್ಲಿ ಶುಕ್ರವಾರ ಮಾತನಾಡಿದ ಅವರು, ಪ್ರತಿಯೊಬ್ಬರೂ ಕಳೆದ ವರ್ಷದ ಕ್ಯಾನ್ಕನ್ ಸಮ್ಮೇಳನವನ್ನು ವ್ಯಾಖ್ಯಾನಿಸುವುದನ್ನು ಮೊದಲು ಬಿಡಬೇಕು. ಕೋಪನ್ಹೆಗನ್ ಶೃಂಗಸಭೆ ವೈಫಲ್ಯದ ಹಿನ್ನೆಲೆಯಲ್ಲಿ ಸೇರಿದ್ದ ಕ್ಯಾನ್ಕನ್ ಸಮ್ಮೇಳನಕ್ಕೂ ಡರ್ಬಾನ್ ಸಮ್ಮೇಳನಕ್ಕೂ ವ್ಯತ್ಯಾಸವಿದೆ. ಕಳೆದ ಅಕ್ಟೋಬರ್ನಲ್ಲಿ ನಗೋಯದಲ್ಲಿ ನಡೆದ ಸಮ್ಮೇಳನದ ಎರಡು ಬೃಹತ್ ಸಾಧನೆಗಳ ಹಿನ್ನೆಲೆಯಲ್ಲಿ ರಾಷ್ಟ್ರಗಳು ಡರ್ಬಾನ್ ಶೃಂಗಸಭೆಯಲ್ಲಿ ಸೇರುತ್ತಿವೆ. ಪರಿಸರದ ದೃಷ್ಟಿಯಿಂದ ನೋಡಿದರೆ ಕ್ಯಾನ್ಕನ್ ಸಮ್ಮೇಳನ ವಿಫಲವಾಗಿದೆ. ಆದರೆ ರಾಜಕೀಯ ದೃಷ್ಟಿಯಿಂದ ಅದೊಂದು ಸಾಧನೆ ಎಂದರು.

ಬೇಸಿಕ್ ರಾಷ್ಟ್ರಗಳು (ಬ್ರೆಜಿಲ್, ದಕ್ಷಿಣ ಆಫ್ರಿಕಾ, ಭಾರತ, ಚೀನಾ) ಅಂಗೀಕರಿಸಿದ ಕರಡು ಅಂಶಗಳನ್ನು ಖಂಡಿಸಿದ ಬೊಲಿವಿಯಾವನ್ನ ಕ್ಯಾನ್ಕನ್ ಸಮ್ಮೇಳನದಲ್ಲಿ ಬೆಂಬಲಿಸಿದ್ದ ತಮ್ಮ ನಿಲುವನ್ನು ಪುನರುಚ್ಚರಿಸಿದ ಸಚಿವರು, ‘ನನ್ನ ಹೃದಯ ಬೊಲಿವಿಯಾದ ಜೊತೆ ಇದೆ. ಆದರೆ ನನ್ನ ತಲೆ ಮಾತ್ರ ಇಲ್ಲ’ ಎಂದರು.ಕ್ಯೋಟೊ ಒಪ್ಪಂದ ಹಾಗೂ ಹವಾಮಾನ ಬದಲಾವಣೆ ಕುರಿತು ಹೋರಾಡುವ ದೀರ್ಘಾವಧಿ ಕ್ರಿಯಾ ಯೋಜನೆಗಾಗಿ 200 ರಾಷ್ಟ್ರಗಳ ಹವಾಮಾನ ಸಂಧಾನಕಾರರು ಸಿದ್ಧಪಡಿಸಿದ್ದ ಎರಡು ಕರಡು ಅಂಶಗಳ ಬಗ್ಗೆ ‘ಅತ್ಯಂತ ಸಂತಸ’ಗೊಂಡಿರುವುದಾಗಿ ಬೇಸಿಕ್ ರಾಷ್ಟ್ರಗಳು ಹೇಳಿದ್ದವು.

ಆದರೆ ಈ ಕರಡು ಅತ್ಯಂತ ದುರ್ಬಲವಾಗಿದೆ ಎಂದು ಹೇಳಿದ್ದ ಬೊಲಿವಿಯಾ, ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಸಮ್ಮೇಳನದಲ್ಲಿ ಇತರ ರಾಷ್ಟ್ರಗಳು ಅದನ್ನು ಪ್ರತ್ಯೇಕಿಸಲು ಯತ್ನಿಸುತ್ತಿವೆ ಎಂದು ಟೀಕಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.