ಸೋಮವಾರ, ಜನವರಿ 20, 2020
22 °C

ಶೇ 6 `ಜಿಡಿಪಿ' ಪ್ರಗತಿ ಅಂದಾಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಪ್ರಗತಿಯು (ಜಿಡಿಪಿ) ಶೇ 6ರಿಂದ ಶೇ 6.5ರಷ್ಟು ಇರಲಿದೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಅಂದಾಜು ಮಾಡಿದೆ.



2012-13ನೇ ಸಾಲಿನಲ್ಲಿ `ಜಿಡಿಪಿ' ದಶಕದ ಹಿಂದಿನ ಮಟ್ಟವಾದ ಶೇ 5ಕ್ಕೆ ಜಾರಿದೆ. ಆದರೆ, ಸರ್ಕಾರ ಇತ್ತೀಚೆಗೆ ಕೈಗೊಂಡ ಆರ್ಥಿಕ ಸುಧಾರಣಾ ಕ್ರಮಗಳಿಂದ ಬಂಡವಾಳ ಹರಿವು ಹೆಚ್ಚಿದೆ. ಹಣದುಬ್ಬರ ತಗ್ಗಿರುವುದರಿಂದ ಮಾರುಕಟ್ಟೆಯಲ್ಲಿ ನಗದು ಲಭ್ಯತೆ ಹೆಚ್ಚಿದೆ. ಈ ಎಲ್ಲ ಸಕಾರಾತ್ಮಕ ಅಂಶಗಳಿಂದ `ಜಿಡಿಪಿ' ಗಣನೀಯ ಚೇತರಿಕೆ ಕಾಣಲಿದೆ ಎಂದು `ಸಿಐಐ'ನ ಉದ್ಯಮ ಮುನ್ನೋಟ  ವರದಿ ಹೇಳಿದೆ.

ಪ್ರತಿಕ್ರಿಯಿಸಿ (+)