ಮಂಗಳವಾರ, ಮೇ 24, 2022
30 °C

ಶೈಕ್ಷಣಿಕ ಉದ್ಯಾನ ಸ್ಥಾಪನೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಜಯಂತಿ ಅಂಗವಾಗಿ ನಗರದ ಬಚಪನ್ ಶಾಲೆಯ ವಿದ್ಯಾರ್ಥಿ ಗಳು ಗಾಂಧೀಜಿ ಅವರ ವೇಷಧರಿಸಿ ಭಾನುವಾರ ಗಾಂಧಿ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರಲ್ಲದೆ, ಶೈಕ್ಷಣಿಕ ಉದ್ಯಾನ ಸ್ಥಾಪಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಶಾಲೆಯ 3ರಿಂದ 5 ವರ್ಷ ದೊಳಗಿನ ನೂರಾರು ವಿದ್ಯಾರ್ಥಿಗಳು, ಶ್ವೇತ ವಸ್ತ್ರಧಾರಿಗಳಾಗಿ, ತಲೆಗೆ ಟೊಪ್ಪಿ, ಮೈಮೇಲೆ ಟವಲ್ ಧರಿಸಿ, ಪಂಚೆ ತೊಟ್ಟು.  ಕನ್ನಡಕ ಹಾಕಿಕೊಂಡು ಕೈಯಲ್ಲಿ ಕೋಲು ಹಿಡಿದು ಗಾಂಧೀಜಿ ವೇಷದಲ್ಲಿ ಕಂಗೊಳಿಸಿದರು.ಶಿಕ್ಷಕರೊಂದಿಗೆ, ಅತ್ಯಂತ ಶಿಸ್ತಿನಿಂದ ಮೆರವಣಿಗೆಯಲ್ಲಿ ಭಾಗವಹಿಸಿ, ಸಾರ್ವ ಜನಿಕರನ್ನು ಆಕರ್ಷಿಸಿದ ವಿದ್ಯಾರ್ಥಿಗಳು, ಜಿಲ್ಲಾಧಿಕಾರಿ ಕಚೇರಿ ತಲುಪಿ ಶಾಲೆಯ ಮುಖ್ಯಸ್ಥರು ಸಿದ್ದಪಡಿಸಿದ್ದ ಮನವಿ ಯನ್ನು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಅವರಿಗೆ ನೀಡಿದರು.ಮಕ್ಕಳಿಂದ ಮನವಿ ಸ್ವೀಕರಿಸಿದ ಬಿಸ್ವಾಸ್, ಶೀಘ್ರವೇ ಶೈಕ್ಷಣಿಕ ಉದ್ಯಾನ ಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದರು.ಮಕ್ಕಳಿಗೆ ಚಿಕ್ಕಂದಿನಲ್ಲೇ ದೇಶಭಕ್ತಿ, ಅಹಿಂಸೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಮೆರವಣಿಗೆ ಏರ್ಪಡಿಸ ಲಾಗಿದ್ದು, ನಗರದಲ್ಲಿರುವ ಅನೇಕ ಶಾಲೆಗಳ ವಿದ್ಯಾರ್ಥಿಗಳಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಶೈಕ್ಷಣಿಕ ಉದ್ಯಾನ ಅಗತ್ಯವಿದೆ ಎಂದು ಶಿಕ್ಷಕರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.