ನಿರ್ದೇಶಕ ಎಸ್.ನಾರಾಯಣ್ ಪ್ರಚಾರ ತಂತ್ರದಲ್ಲಿ ನಿಸ್ಸೀಮರು. ಈ ಸಲ ಅವರು `ಶೈಲು~ ಚಿತ್ರದ ಸೀಡಿ ಇನ್ಲೇ ಕವರನ್ನು `3 ಡಿ~ಯಲ್ಲಿ ತರಲು ಯೋಚಿಸಿದ್ದಾರೆ. ಇದಕ್ಕೆಂದೇ ಮುಂಬೈನ ಇನ್ಲೇ ಕಾರ್ಡ್ ವಿನ್ಯಾಸಕರಿಗೆ ವಿಶೇಷ ಆರ್ಡರನ್ನು ಕೊಟ್ಟಿದ್ದು, ಇದೇ 22ರಂದು ಆ ಕಾರ್ಡ್ಗಳು ಲಭ್ಯವಾಗಲಿವೆ. 24ರಂದು ತುಮಕೂರಿನಲ್ಲಿ ಭರ್ಜರಿ ಆಡಿಯೋ ಬಿಡುಗಡೆ ಸಮಾರಂಭ.

`ಮೈನಾ~ ತಮಿಳು ಚಿತ್ರದ ರೀಮೇಕ್ ಆದ `ಶೈಲು~ ಚಿತ್ರದ ಗೀತೆಗಳಿಗೆ ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದು, ಪುನೀತ್ ರಾಜ್ಕುಮಾರ್ ಅದರಲ್ಲಿ ಒಂದನ್ನು ಹಾಡಿದ್ದಾರೆ. ಆನಂದ್ ಆಡಿಯೋದ ಮಾಲೀಕ ಮೋಹನ್ ಆಡಿಯೋ ಹಕ್ಕು ಖರೀದಿಸಲು ಪುನೀತ್ ಹಾಡಿರುವುದು ಕೂಡ ಮುಖ್ಯ ಕಾರಣ.

ಹತ್ತು ದಿನ ಅಭ್ಯಾಸ ಮಾಡಿ `ಪದ ಪದ~ ಎಂಬ ಹಾಡು ಹಾಡಿರುವ ಪುನೀತ್ ಅದಕ್ಕಾಗಿ ನಯಾಪೈಸೆ ಸಂಭಾವನೆಯನ್ನೂ ಪಡೆದಿಲ್ಲ ಎಂಬ ಸಂಗತಿಯನ್ನು ನಿರ್ಮಾಪಕ ಕೆ.ಮಂಜು ಹೆಮ್ಮೆಯಿಂದ ಹೇಳಿಕೊಂಡರು.

ನಾಯಕನಟ ಗಣೇಶ್ ಮಾತಿನಲ್ಲಿ ಸಿಂಹಪಾಲು ನಾರಾಯಣ್ ಹೊಗಳಿಕೆಯೇ ಇತ್ತು. ಕೆಲಸದಲ್ಲಿನ ಅವರ ಶಿಸ್ತು, ಆಡಿಯೋ ಮಾರುಕಟ್ಟೆಯಲ್ಲಿ ಹೊಸತನ ತರಲು `3ಡಿ~ ಮಾಡಹೊರಟಿರುವ ಯೋಚನೆ ಎಲ್ಲವನ್ನೂ ಅವರು ಕೊಂಡಾಡಿದರು.

`3 ಡಿ~ ಇನ್ಲೇ ಕಾರ್ಡ್ ಇರುವ ಸೀಡಿ ಬೆಲೆ 100 ರೂಪಾಯಿ ಇರಲಿದೆ. ಅದಲ್ಲದೆ ಸಾದಾ ಕಾರ್ಡಿನಿಂದ ಮುಚ್ಚಿದ ಸೀಡಿಗಳೂ ಸಿಗಲಿವೆ ಎಂಬುದು ಮೋಹನ್ ಸ್ಪಷ್ಟನೆ.

ತಮ್ಮ ಸ್ವಂತ ಊರೆಂಬ ಕಾರಣಕ್ಕೆ ತುಮಕೂರಿನಲ್ಲಿ ಆಡಿಯೋ ಬಿಡುಗಡೆ ಸಮಾರಂಭ ಆಯೋಜಿಸಲು ಯೋಚಿಸಿದ್ದಾಗಿ ಮಂಜು ಹೇಳಿದ್ದೇ ಅಲ್ಲದೆ, ಅದು ರಾಜಕೀಯ ಪ್ರಚಾರದ ತಂತ್ರವಲ್ಲ ಎಂಬ ಸ್ಪಷ್ಟನೆಯನ್ನೂ ಸೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.