ಆ ಮೂವರು...
ಕುಲದೀಪ್ ದಂತೆವಾಡಿಯ ಕಣ್ಣಲ್ಲಿ ಕನಸಿತ್ತು. ಸಾಧಿಸುವ ಛಲ ಮತ್ತು ತಾಳ್ಮೆ ಇತ್ತು. ಹಾಗಾಗಿ ಯಾರ ನೆರವೂ ಇಲ್ಲದೆ ಗುರಿಯತ್ತ ಮುನ್ನುಗ್ಗಿದರು. ಕುಲದೀಪ್ನ ಏಕಾಂಗಿ ಹೋರಾಟಕ್ಕೆ ಮತ್ತಿಬ್ಬರು ಗೆಳೆಯರು ಹೆಗಲು ಕೊಟ್ಟರು. ಕೆಲವೇ ದಿನಗಳಲ್ಲಿ ಅಂದುಕೊಂಡಿದ್ದನ್ನು ಸಾಧಿಸುವ ಯಶಸ್ವಿ ಯುವ ಸಾಧಕರಾದರು.

ಇದು ಬೆಂಗಳೂರು ಹುಡುಗರಾದ ಕುಲದೀಪ್, ಕಮಲ್ ರಾಜ್ ಮತ್ತು ಗೌತಮ್ ಪ್ರಕಾಶ್ ಅವರ ಸಾಧನೆಯ ಕಥೆ. ಮೂವರೂ ಎಂಜಿನಿಯರಿಂಗ್ ಪದವೀಧರರು. ಪರಿಸರದ ಮೇಲಿನ ಕಾಳಜಿಯಿಂದ ‘ರೀಪ್ ಬೆನಿಫಿಟ್’ ಎಂಬ ಸ್ವಯಂ ಸೇವಾ ಸಂಸ್ಥೆ ಕಟ್ಟಿದ್ದಾರೆ. ಆ ಮೂಲಕ ನೀರು, ವಿದ್ಯುತ್ ಉಳಿತಾಯದ ಬಗ್ಗೆ ಪ್ರಾತ್ಯಕ್ಷಿಕೆಗಳ ಮುಖಾಂತರ ಜನರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಕುಲದೀಪ್ ತನ್ನ ಗೆಳೆಯರೊಂದಿಗೆ ಸೇರಿ ಆರು ತಿಂಗಳು 150ಕ್ಕೂ ಹೆಚ್ಚು ಮನೆಗಳಿಂದ ಹಸಿ ಮತ್ತು ಒಣ ತ್ಯಾಜ್ಯವನ್ನು ಸಂಗ್ರಹಿಸಿ ನಗರದ ಹೊರ ವಲಯದಲ್ಲಿ ಹಾಕುತ್ತಿದ್ದರು. ಅದು ಕಳಿತು ಸಾವಯವ ಗೊಬ್ಬರವಾದ ಮೇಲೆ ರೈತರಿಗೆ ನೀಡುತ್ತಿದ್ದರು. ಈ ಹಂತದಲ್ಲಿ ಕುಲದೀಪ್ಗೆ ನೆರವಾದವರು ಕಮಲ್ ಮತ್ತು ಗೌತಮ್.

ಮನೆಯ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಕೆ ಸೇರಿದಂತೆ ನೀರು ಮತ್ತು ವಿದ್ಯುತ್ ಉಳಿತಾಯದ ಬಗ್ಗೆ ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿ ನೀಡುವ ರೀಪ್ ಬೆನಿಫಿಟ್ ಯೋಜನೆ ತಯಾರಿಸಿದರು. ಇಂದು ಸುಮಾರು 85 ವಿದ್ಯಾಸಂಸ್ಥೆಗಳು ಮತ್ತು 25 ಸ್ವಯಂ ಸೇವಾ ಸಂಸ್ಥೆಗಳಲ್ಲಿ ಈ ಯೋಜನೆ ಚಾಲ್ತಿಯಲ್ಲಿದೆ. ಇದು ಅನುಷ್ಠಾನಗೊಂಡ ದಿನದಿಂದ ಈವರೆಗೂ 21 ಲಕ್ಷ ಲೀಟರ್ ನೀರು ಮತ್ತು 2 ಲಕ್ಷ ಯುನಿಟ್ ವಿದ್ಯುತ್ ಉಳಿತಾಯ ಮಾಡಲಾಗಿದೆ.

ಸುಮಾರು 200 ಟನ್ ತ್ಯಾಜ್ಯವನ್ನು ಮರು ಬಳಕೆ ಮಾಡಲಾಗಿದೆ. ರೀಪ್ ಬೆನಿಫಿಟ್ನಲ್ಲಿ ಸುಮಾರು 15000 ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ ಎನ್ನುತ್ತಾರೆ ಕುಲದೀಪ್. ಈ ಮೂವರು ಯುವಕರ ಸಾಧನೆಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ತಂತ್ರಜ್ಞಾನ ಸಂಸ್ಥೆಗಳು ಸನ್ಮಾನಿಸಿವೆ.
ವೆಬ್ ವಿಳಾಸ: www.ReapBenefit.com

ಕುಂದಾನ್ ಕುನಾಲ್

ಕಷ್ಟಪಟ್ಟು ಹಣ ಸಂಪಾದನೆ ಮಾಡಬಹುದು! ಆದರೆ ಅದನ್ನು ಉಳಿಸಿಕೊಳ್ಳುವುದೇ ಅನೇಕರಿಗೆ ಬಹುದೊಡ್ಡ ಸವಾಲು!
ಹೌದು. ಕಷ್ಟಪಟ್ಟು ಹಣ ಸಂಪಾದನೆ ಮಾಡುವ ಶ್ರಮ ಜೀವಿಗಳು ಯಾವುದೇ ಮುಂದಾಲೋಚನೆ ಇಲ್ಲದೇ ಅಧಿಕ ಬಡ್ಡಿಯ ಆಸೆಯಿಂದ ಮೋಸದ ಕಂಪೆನಿಗಳಲ್ಲಿ ಹೂಡಿಕೆ ಮಾಡಿ ಬರಿಗೈ ಮಾಡಿಕೊಂಡು ಪಶ್ಚಾತ್ತಾಪ ಪಡುತ್ತಾರೆ.

ಹೀಗೆ ಮೋಸದ ಕಂಪೆನಿ ಬಲೆಗೆ ಬಿದ್ದ ಕುಟುಂಬವೊಂದರ ಯುವಕನ ಕಥೆ ಇದು. ಮುಂಬೈನ ಕುಂದಾನ್ ಕುಲಾಲ್ ಎಂಬ ಯುವಕನ ಪೋಷಕರು ಮೋಸದ ಕಂಪೆನಿ ಯೊಂದಕ್ಕೆ ಲಕ್ಷಾಂತರ ರೂಪಾಯಿ ಕಟ್ಟಿ ನಷ್ಟ ಅನುಭವಿಸುತ್ತಾರೆ. ತಾವು ಮೋಸ ಹೋದಂತೆ ಬೇರೆಯವರು ಮೋಸ ಹೋಗಬಾರದು ಎಂಬ ಕಾರಣಕ್ಕೆ ‘ಇತೋಸ್’ ಎಂಬ ಹಣಕಾಸು ಸಲಹೆ ಮತ್ತು ಹೂಡಿಕೆ ಕಂಪೆನಿಯನ್ನು ಕುನಾಲ್ ಹುಟ್ಟುಹಾಕುತ್ತಾರೆ.

ಅಪ್ಪ ಹಣ ಕಳೆದುಕೊಂಡಾಗ ಕಾಲೇಜು ವಿದ್ಯಾರ್ಥಿಯಾಗಿದ್ದ ಕುನಾಲ್, ಮುಂದೆ ಹಣಕಾಸು ವಿಷಯದಲ್ಲಿ ಎಂಬಿಎ ಪದವಿ ಪಡೆದು ಇತೋಸ್ ಕಂಪೆನಿಯನ್ನು ಆರಂಭಿಸುತ್ತಾರೆ. ಕುನಾಲ್ ಜೊತೆ ರಕ್ಷಿತ್ ಮತ್ತು ಧೀರಜ್ ಸೇರಿಕೊಂಡು ಕಂಪೆನಿಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸುತ್ತಾರೆ.
ಇಂದು ಅಂತರರಾಷ್ಟ್ರೀಯ ಮಟ್ಟದ ಗ್ರಾಹಕರನ್ನು ಹೊಂದಿರುವ ಇತೋಸ್ ವಾರ್ಷಿಕ ನೂರಾರು ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ.

ಗ್ರಾಹಕರಿಂದ ಅತಿ ಕಡಿಮೆ ಕಮಿಷನ್ ತೆಗೆದುಕೊಳ್ಳುವುದು ಇತೋಸ್ನ ಹೆಗ್ಗಳಿಕೆ. ಲಾಭದಾಯಕ ಮತ್ತು ಆರ್ಥಿಕ ಸ್ಥಿರತೆ ಇರುವ ಕಂಪೆನಿಗಳಿಗೆ ಮಾತ್ರ ಗ್ರಾಹಕರಿಂದ ಹೂಡಿಕೆ ಮಾಡಿಸಲಾಗುತ್ತಿದೆ ಎನ್ನುತ್ತಾರೆ ಕುನಾಲ್. ಕ್ರಿಕೆಟಿಗ ರಾಬಿನ್ ಉತ್ತಪ್ಪ ಸೇರಿದಂತೆ ಬಾಲಿವುಡ್ ನಟ ನಟಿಯರು ಇತೋಸ್ನಲ್ಲಿ ಹಣಕಾಸು ಸಲಹೆ ಪಡೆಯುತ್ತಿದ್ದಾರೆ.
ವೆಬ್ಸೈಟ್ www.EthosWealthManagement.com

ಮಾಯಿಗೌಡ

ಎಂಜಿನಿಯರ್ ಆಗಬೇಕೆಂದು ಕನಸು ಕಟ್ಟಿಕೊಂಡು ಬೆಂಗಳೂರಿಗೆ ಬಂದ ಮೈಸೂರಿನ ಯುವಕ ಮಾಯಿಗೌಡ ಖ್ಯಾತ ಪುಸ್ತಕ ಮಾರಾಟಗಾರನಾದ ಸಾಧನೆ ಕಥೆ ಇದು.

ಮೈಸೂರು ಜಿಲ್ಲೆಯ ರಂಗಸಮುದ್ರ ಗ್ರಾಮದ ಮಾಯಿಗೌಡನಿಗೆ ಎಂಜಿನಿಯರ್ ಆಗಬೇಕೆಂಬ ಕನಸು. ಕನಸಿನ ಬೆನ್ಹತ್ತಿ 1995ರಲ್ಲಿ ಬೆಂಗಳೂರಿಗೆ ಬಂದ ಮಾಯಿಗೌಡ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಕೋರ್ಸ್ಗೆ ಸೇರಿದರು. ಬೆಂಗಳೂರಿನ ಪೀಣ್ಯದಲ್ಲಿದ್ದ ಸ್ನೇಹಿತನ ರೂಮಿನಲ್ಲಿ ವಾಸ. ಬಿಡುವಿನ ಸಮಯದಲ್ಲಿ ಅವೆನ್ಯೂ ಮತ್ತು ಎಂ.ಜಿ ರಸ್ತೆಯಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕ ಮಾರುತ್ತಿದ್ದರು.

ಅನಿವಾರ್ಯ ಕಾರಣಗಳಿಂದ ಪೀಣ್ಯದಲ್ಲಿದ್ದ ಸ್ನೇಹಿತ ರೂಮು ಖಾಲಿ ಮಾಡಿ ತನ್ನೂರಿಗೆ ಹೊರಟು ಹೋದರು. ಆಗ ಮಾಯಿಗೌಡ ಹಾಸ್ಟೆಲ್ ಸೇರಬೇಕಾಯಿತು. ಹಣಕಾಸು ಸಮಸ್ಯೆಯಿಂದ ಮಾಯಿಗೌಡ ತಮ್ಮ ಕನಸಿನ ಎಂಜಿನಿಯರಿಂಗ್ ಪದವಿಯನ್ನು ಅರ್ಧಕ್ಕೆ ನಿಲ್ಲಿಸಿದರು. ನಂತರ ಪುಸ್ತಕ ಮಾರುವುದರಲ್ಲೇ ಸಂಪೂರ್ಣವಾಗಿ ತೊಡಗಿಕೊಂಡರು. ಇದರಿಂದ ನಿತ್ಯ 200 ರಿಂದ 300 ರೂಪಾಯಿ ಸಂಪಾದನೆಯಾಗುತ್ತಿತ್ತು.

ಈ ವೇಳೆ ಮಾಯಿಗೌಡನ ಮತ್ತೊಬ್ಬ ಗೆಳೆಯ ಮಹೇಶ್ ಎಂಬುವರು ಎಂಜಿನಿಯರಿಂಗ್ ಮಾಡಲು ಬೆಂಗಳೂರಿಗೆ ಬಂದರು. ಆಗ ಮಾಯಿಗೌಡನಿಗೆ ಅರ್ಧಕ್ಕೆ ನಿಲ್ಲಿಸಿದ್ದ ಪದವಿಯನ್ನು ಪೂರ್ಣಗೊಳಿಸುವ ಕನಸು ಮತ್ತೆ ಗರಿಗೆದರಿತು. ಹಗಲಿನಲ್ಲಿ ಕಾಲೇಜಿಗೆ ಹೋಗುತ್ತ ಸಂಜೆ ವೇಳೆಯಲ್ಲಿ ಪುಸ್ತಕ ಮಾರುವುದನ್ನು ಮಾಯಿಗೌಡ ಮುಂದುವರೆಸಿದರು.

ಪದವಿ ಮುಗಿದ ಬಳಿಕ ಜನರಲ್ ಎಲೆಕ್ಟ್ರಿಕಲ್ ಕಂಪೆನಿಯಲ್ಲಿ ಕೆಲಸ ಸಿಕ್ಕಿತು. ಅಲ್ಲಿ 15 ದಿನಗಳಷ್ಟೆ ಕೆಲಸ ಮಾಡಿ ತನ್ನ ಹುದ್ದೆಗೆ ರಾಜೀನಾಮೆ ನೀಡಿ ಮತ್ತೆ ಪುಸ್ತಕ ಮಾರಾಟದಲ್ಲಿ ತೊಡಗಿದರು.

ಆರಂಭದಲ್ಲಿ ಫುಟ್ಪಾತ್ ಮೇಲೆ ಸೆಕೆಂಡ್ಹ್ಯಾಂಡ್ ಪುಸ್ತಕಗಳನ್ನು ಮಾರುತ್ತಿದ್ದ ಮಾಯಿಗೌಡ ಇಂದು ಮೂರು ಅಂತಸ್ತಿನ ಬ್ಲಾಸಮ್ ಬುಕ್ಹೌಸ್ ಎಂಬ ಪುಸ್ತಕ ಮಳಿಗೆ ಮಾಲೀಕರಾಗಿದ್ದಾರೆ. ಸುಮಾರು ಎರಡು ಲಕ್ಷಕ್ಕೂ ಅಧಿಕ ಪುಸ್ತಕಗಳ ಸಂಗ್ರಹವಿದೆ. ಇ–ಕಾಮರ್ಸ್ ಮತ್ತು ಆನ್ಲೈನ್ ಮೂಲಕವು ಮಾರಾಟ ಮಾಡುತ್ತಿದ್ದಾರೆ.ನನ್ನ ಯಶಸ್ಸಿನ ಗುಟ್ಟು ‘ಆತ್ಮವಿಶ್ವಾಸ’ ಎನ್ನುವ ಮಾಯಿಗೌಡ ಅವರ ಸಾಧನೆ ಯುವಕರಿಗೆ ಮಾದರಿ.
www.blossombookhouse.com

ಅಮೃತಾ ಮತ್ತು ಬಿಂದು
ಮುಂಬೈನ ಅಮೃತಾ ಮತ್ತು ಬಿಂದು ಆತ್ಮೀಯ ಗೆಳತಿಯರು. ಅಮೃತಾ ಬಿ.ಕಾಂ ಪದವೀಧರೆ. ಖಾಸಗಿ ಬ್ಯಾಂಕ್ನಲ್ಲಿ ಉದ್ಯೋಗಿ. ಬಿಂದು ಕೆಮಿಕಲ್ ಎಂಜಿನಿಯರ್. ಖಾಸಗಿ ಕಂಪೆನಿಯೊಂದರಲ್ಲಿ ಇವರಿಗೆ ಕೆಲಸ.

ಇವರ ಗೆಳೆತನದ ವಿಶೇಷ ಎಂದರೆ ಒಂದೇ ವರ್ಷದಲ್ಲಿ ಮದುವೆಯಾಗಿದ್ದು! ಹಾಗೆ ಒಂದೇ ವರ್ಷದಲ್ಲಿ ಮಕ್ಕಳನ್ನು ಹೆತ್ತಿದ್ದು. ಆರು ತಿಂಗಳ ಹೆರಿಗೆ ರಜೆಯ ಬಳಿಕ ಕೆಲಸಕ್ಕೆ ಹಾಜರದ ಅಮೃತಾ ಮತ್ತು ಬಿಂದು ಸ್ಥಳೀಯ ಡೇ ಕೇರ್ ಸೆಂಟರ್ನಲ್ಲಿ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದರು. ಅಲ್ಲಿನ ಅವ್ಯವಸ್ಥೆ ಕಂಡು ವ್ಯವಸ್ಥಾಪಕ ಮಂಡಳಿಗೆ ದೂರು ನೀಡಿದಾಗ ಇಷ್ಟವಿದ್ದರೆ ಮಕ್ಕಳನ್ನು ಬಿಡಿ, ಇಲ್ಲ ಕರೆದುಕೊಂಡು ಹೋಗಿ ಎಂಬ ಉತ್ತರ! ಮುಂದೆ ಏನು ಮಾಡುವುದು ಎಂದು ಯೋಚಿಸುತ್ತಿದ್ದಾಗ ಹೊಳೆದದ್ದೇ ಡೇ ಕೇರ್ ಸೆಂಟರ್ ತೆರೆಯುವ ಯೋಚನೆ.

ಕೂಡಲೇ ತಮ್ಮ ಕೆಲಸಗಳಿಗೆ ರಾಜೀನಾಮೆ ನೀಡಿ, ಕೂಡಿಟ್ಟಿದ್ದ ತಲಾ ಮೂರು ಲಕ್ಷ ರೂಪಾಯಿ ಹಣದಲ್ಲಿ ‘ದಿ ಲಿಟಲ್ ಕಂಪೆನಿ’ (ಟಿಎಲ್ಸಿ) ಎಂಬ ಡೇ ಕೇರ್ ಸಂಸ್ಥೆಯನ್ನು 2001ರಲ್ಲಿ ಪ್ರಾರಂಭಿಸಿದರು. ಇದು 2013ರ ಅಂತ್ಯದ ವೇಳೆಗೆ ಸುಮಾರು 3 ಕೋಟಿ ರೂಪಾಯಿ ವಹಿವಾಟು ನಡೆಸಿದೆ.

ಮುಂಬೈನಲ್ಲಿ ಬಹುರಾಷ್ಟ್ರೀಯ ಕಂಪೆನಿಗಳ ಡೇ ಕೇರ್ ಸೆಂಟರ್ಗಳಿಗಿಂತಲೂ ಟಿಎಲ್ಸಿ ಬಹು ಜನಪ್ರಿಯ. ಮನೆಯಂಥ ವಾತಾವರಣ. ಹತ್ತಾರು ಜನ ಆಯಾಗಳು, ಮಕ್ಕಳ ತಜ್ಞೆಯರು ಸೇರಿದಂತೆ ದಾದಿಯರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳನ್ನು ಕರೆತರುವುದು ಮತ್ತು ಕಳುಹಿಸಿಕೊಡುವ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ.

ತಾವೇ ಮುತುವರ್ಜಿ ವಹಿಸಿ ಡೇ ಕೇರ್ ಸೆಂಟರ್ ಅನ್ನು ನೋಡಿಕೊಳ್ಳುತ್ತಿರುವುದರಿಂದ ಈವರೆಗೂ ಪಾಲಕರಿಂದ ಯಾವುದೇ ದೂರುಗಳು ಬಂದಿಲ್ಲ ಎನ್ನುತ್ತಾರೆ ಅಮೃತಾ ಮತ್ತು ಬಿಂದು. ಬದುಕು ಕಲಿಸಿದ ಪಾಠದಿಂದ ಇಂದು ನಾವು ಯಶಸ್ಸನ್ನು ಕಾಣುತ್ತಿದ್ದೇವೆ ಎನ್ನುತ್ತಾರೆ 35ರ ಹರೆಯದ ಅಮೃತಾ ಮತ್ತು ಬಿಂದು.
ವೆಬ್ಸೈಟ್–www.TheLittle Company.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.