ನವದೆಹಲಿ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ 7 ವಿಕೆಟ್ ಅಂತರದ ಜಯ ಗಳಿಸಿದೆ. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಇದರ ಜೊತೆಗೆ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಹಲವು ದಾಖಲೆಗಳನ್ನು ಬರೆದಿದೆ.

ಸತತ ಸರಣಿ ಗೆಲುವು

ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ 2002 ರಿಂದ 2025ರ ಅವಧಿಯಲ್ಲಿ ನಿರಂತರವಾಗಿ 10 ಸರಣಿಗಳನ್ನು ಗೆಲ್ಲುವ ಮೂಲಕ ತಂಡವೊಂದರ ಯಾವುದೇ ಸರಣಿ ಸೋಲದೆ ಅತೀ ಹೆಚ್ಚು ಸರಣಿ ಗೆದ್ದ ಸಾಧನೆ ಮಾಡಿದೆ. ಇದಕ್ಕೂ ಮೊದಲು 1998 ರಿಂದ 2024ರ ಅವಧಿಯಲ್ಲಿ ದಕ್ಷಿಣ ಆಫ್ರಿಕಾ ಕೂಡ ವೆಸ್ಟ್ ಇಂಡೀಸ್ ವಿರುದ್ಧವೇ ಸತತ 10 ಸರಣಿ ಗೆದ್ದು ದಾಖಲೆ ಮಾಡಿತ್ತು.

ಆಸ್ಟ್ರೇಲಿಯಾ ತಂಡ ಕೂಡ ವೆಸ್ಟ್ ಇಂಡೀಸ್ ವಿರುದ್ಧವೇ 2000 ದಿಂದ 2022ರ ಅವಧಿಯಲ್ಲಿ ಸತತ 9 ಸರಣಿಗಳಲ್ಲಿ ಗೆಲುವು ಸಾಧಿಸಿ ಸತತ ಸರಣಿ ಗೆದ್ದ ತಂಡಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ 1989 ರಿಂದ 2003ರ ಅವಧಿಯಲ್ಲಿ ಸತತ 8 ಸರಣಿಗಳಲ್ಲಿ ಗೆಲುವು ಸಾಧಿಸಿತ್ತು. 5ನೇ ಸ್ಥಾನದಲ್ಲಿ ಶ್ರೀಲಂಕಾ ಇದ್ದು, ಅವರು ಜಿಂಬಾಂಬ್ವೆ ವಿರುದ್ಧ 1996 ರಿಂದ 2020ರ ಅವಧಿಯಲ್ಲಿ ಸತತ 8 ಸರಣಿಯಲ್ಲಿ ಗೆಲುವು ಸಾಧಿಸಿದ್ದಾರೆ.

ಭಾರತದಲ್ಲಿ ಸತತವಾಗಿ ಅತೀ ಹೆಚ್ಚು ಸೋಲು ಕಂಡ ತಂಡ

ಈ ಲಿಸ್ಟ್ನಲ್ಲಿ ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾ ಇದೆ. ಅವರು 2008 ರಿಂದ 2013ರ ಅವಧಿಯಲ್ಲಿ ಸತತವಾಗಿ 7 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದರು. ಈ ಸಾಲಿನಲ್ಲಿ ಶ್ರೀಲಂಕಾ, ನ್ಯೂಜಿಲ್ಯಾಂಡ್ ಕೂಡ ಇದ್ದು, ತಲಾ 6 ಪಂದ್ಯಗಳನ್ನು ಸೋತಿವೆ. ಇದೀಗ ಈ ಲಿಸ್ಟ್ನಲ್ಲಿ ವಿಂಡೀಸ್ ಕೂಡ ಸೇರಿಕೊಂಡಿದ್ದು, ಅವರು 2013 ರಿಂದ 2025ರ ಅವಧಿಯಲ್ಲಿ ಸತತವಾಗಿ 6 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.