ಬುಧವಾರ, ಜನವರಿ 22, 2020
21 °C

ಶ್ರವಣ ಸಾಧನ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರವಣ ಸಾಧನ ವಿತರಣೆ

ಬಿಎಂಎಸ್ ಎಂಜಿನಿಯರಿಂಗ್‌ ಕಾಲೇಜಿನ ವ್ಯವಹಾರ ನಿರ್ವಹಣೆ ಹಾಗೂ ಸಂಶೋಧನಾ ಕೇಂದ್ರ ವಿಭಾಗವು ರೋಟರಿ ವಿಜಯಪುರದ ಸಹಯೋಗದೊಂದಿದೆ ಅರುಣ ಚೇತನ ಶಾಲೆಯ ಶ್ರವಣದೋಷವಿರುವ ಮಕ್ಕಳಿಗೆ ಶ್ರವಣ ಸಾಧನಗಳನ್ನು ವಿತರಿಸಿತು.ಬಿಎಂಎಸ್ ಕಾಲೇಜು ಆವರಣದಲ್ಲಿ ನಡೆದ ‘ಸಿಟಿಜನ್ ಫಸ್ಟ್; ಮ್ಯಾನೇಜರ್‌ ನೆಕ್ಟ್ಸ್‌’ ಎಂಬ ಈ ಕಾರ್ಯ್ರಕಮಕ್ಕೆ ಕಾಲೇಜಿನ ಎಂಬಿಎ ವಿಭಾಗದ ಮುಖ್ಯಸ್ಥ ಡಾ. ಎಸ್.ನಾಗೇಂದ್ರ ಅವರ ಮಾರ್ಗದರ್ಶನವಿತ್ತು. ಈ ಸಂದರ್ಭದಲ್ಲಿ ವಿವಿಧ ಬಗೆಯ ಶ್ರವಣ ಸಮಸ್ಯೆಗಳಿಂದ ಬಳಲುತ್ತಿರುವ ವಿಶಿಷ್ಟ ಸಾಮರ್ಥ್ಯದ ಮಕ್ಕಳಿಗೆ ಶ್ರವಣ ಸಾಧನಗಳನ್ನು ವಿತರಿಸಲಾಯಿತು. ಬಿಎಂಎಸ್‌ಸಿಇ- ಕಾಲೇಜಿನ ಈ ಚಟುವಟಿಕೆಯು ‘ಅರುಣ ಚೇತನ’ ಶಾಲೆಯ ಮಕ್ಕಳ ಬಾಳಿನಲ್ಲಿ ಹೊಸ ಭರವಸೆ ಮೂಡಿಸಿತು. ಬಿಎಂಎಸ್‌ಸಿಇಯ ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಬಾಬು ಹಾಗೂ ರೋಟರಿ ವಿಜಯಪುರ ಟ್ರಸ್ಟ್‌ನ ಅಧ್ಯಕ್ಷ ಸತ್ಯಜೋತಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.  

ಪ್ರತಿಕ್ರಿಯಿಸಿ (+)