ಭಾನುವಾರ, ಏಪ್ರಿಲ್ 11, 2021
33 °C

ಶ್ರಿಯಾ ರಸನಿಮಿಷಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ನಲ್ಲಿ ಒಂದರ ಹಿಂದೊಂದು ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ಶ್ರಿಯಾ ಶರಣ್ ಇದೀಗ ದೀಪಾ ಮೆಹ್ತಾ ಅವರ ಚಿತ್ರವೊಂದಕ್ಕೆ ಸಹಿ ಮಾಡಿದ್ದಾರೆ. ಅದು ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಅವರ `ಮಿಡ್‌ನೈಟ್ ಚಿಲ್ಡ್ರನ್~ ಕಾದಂಬರಿ ಆಧರಿಸಿದ ಸಿನಿಮಾ. ಕಾದಂಬರಿಯ ಹೆಸರನ್ನೇ ಸಿನಿಮಾಗೂ ಇಡಲಾಗಿದೆ. ಅದು ಇಂಗ್ಲಿಷ್ ಭಾಷೆಯಲ್ಲಿ ತಯಾರಾಗುತ್ತಿದೆ.`ತುಜೆ ಮೇರಿ ಕಸಮ್~, `ಮಿಷನ್ ಇಸ್ತಾನ್‌ಬುಲ್~, `ಗಲಿ ಗಲಿ ಮೇ ಚೋರ್ ಹೈ~ ಹೀಗೆ ಅವಕಾಶಗಳನ್ನು ಪಡೆಯುತ್ತಿರುವ ಶ್ರಿಯಾ ಇತ್ತೀಚೆಗೆ `ಜಿಲಾ ಘಜಿಯಾಬಾದ್~ ಚಿತ್ರದ ಐಟಂ ಹಾಡೊಂದರಲ್ಲಿ ನರ್ತಿಸಿದ್ದಾರೆ.`ಇದು ಹಾಸ್ಯಮಯ ಹಾಡು. ಇದರಲ್ಲಿ ನರ್ತಿಸಿದ ನಂತರ ನನ್ನನ್ನು ಕಂಡರೆ ನನಗೆ ನಗು ಬರುವಂತಾಗಿದೆ. ದಕ್ಷಿಣ ಭಾರತದ ಚಿತ್ರಗಳಲ್ಲಿ ಈಗಾಗಲೇ ಸಾಕಷ್ಟು ಐಟಂ ಹಾಡುಗಳಲ್ಲಿ ನರ್ತಿಸಿದ್ದೇನೆ. ಹಿಂದಿಯಲ್ಲಿ ಇದು ನನ್ನ ಮೊದಲ ಐಟಂ ನರ್ತನ~ ಎಂದು ಹೇಳಿಕೊಂಡಿದ್ದಾರೆ.ಈ ನಡುವೆ ಅವರು ಕನ್ನಡದಲ್ಲಿ `ಚಂದ್ರ~ ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ. ಅದರಲ್ಲಿ ಅವರಿಗೆ ರಾಜಕುಮಾರಿಯ ಪಾತ್ರ. ತೆಲುಗು, ತಮಿಳು, ಕನ್ನಡ, ಹಿಂದಿ ಚಿತ್ರಗಳಲ್ಲಿ ಒಟ್ಟಿಗೆ ತೊಡಗಿಸಿಕೊಂಡಿರುವ ಶ್ರಿಯಾ, ತಮ್ಮ ಈ ಎಲ್ಲಾ ಯಶಸ್ಸಿಗೆ ಸೂಪರ್ ಸ್ಟಾರ್ ರಜನೀಕಾಂತ್ ಅವರೊಂದಿಗೆ ನಟಿಸಿದ ಶಿವಾಜಿ ಚಿತ್ರವೇ ಕಾರಣ ಎನ್ನುತ್ತಾರೆ. `ನಾನು `ಶಿವಾಜಿ~ ಚಿತ್ರದಲ್ಲಿ ನಟಿಸದಿದ್ದರೆ ನನಗೆ ಈ ಮಟ್ಟಿನ ಜನಪ್ರಿಯತೆ ದಕ್ಕುತ್ತಿರಲಿಲ್ಲ~ ಎಂದು ನುಡಿಯುವ ಅವರು ಮತ್ತೊಮ್ಮೆ ಅಂಥ ಅವಕಾಶಕ್ಕಾಗಿ ಕಾಯುತ್ತಿದ್ದಾರಂತೆ.

ಇದೆಲ್ಲದರ ನಡುವೆ ಅವರಿಗೆ ತೆಲುಗು ಮತ್ತು ತಮಿಳಿನಲ್ಲಿ ಹೆಚ್ಚಾಗಿ ಅತಿಥಿ ಪಾತ್ರಗಳಿಗೆ ಕರೆ ಬರುತ್ತಿರುವುದು ಬೇಸರದ ಸಂಗತಿಯಾಗಿದೆ.`ಕೇವಲ ಒಂದು ಹಾಡಿಗೆ ಅಥವಾ ಕೆಲವು ದೃಶ್ಯಗಳಲ್ಲಿ ಬಂದು ಹೋಗುವ ಪಾತ್ರಗಳಿಗೆ ನನ್ನನ್ನು ಕರೆಯಲಾಗುತ್ತಿದೆ. ಆದರೆ ಬಾಲಿವುಡ್‌ನಲ್ಲಿ ಪೂರ್ಣ ಪ್ರಮಾಣದ ಪಾತ್ರಗಳು ಸಿಕ್ಕುತ್ತಿವೆ~ ಎನ್ನುತ್ತಾರೆ ಈ ಚೆಲುವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.