ಸೋಮವಾರ, ಮೇ 10, 2021
25 °C

ಶ್ರೀರಾಮ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶ್ರೀರಾಮ್ ಸರ್ಜಾ ಬೆಂಗಳೂರು ಜಿಲ್ಲಾ ಚೆಸ್ ಸಂಸ್ಥೆ ಆಶ್ರಯದಲ್ಲಿ ನಡೆದ ಬ್ಲಿಟ್ಜ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು.ನೃಪತುಂಗ ರಸ್ತೆಯಲ್ಲಿರುವ ಯುವ ಕೇಂದ್ರದಲ್ಲಿ ನಡೆದ ಸ್ಪರ್ಧೆಯಲ್ಲಿ ಶ್ರೀರಾಮ್ 9.5 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ಪಡೆದರು. ಇದು ಒಟ್ಟು  11 ಸುತ್ತಿನ ಸ್ಪರ್ಧೆಯಾಗಿತ್ತು. ಬೆಂಗಳೂರಿನ ಎಸ್. ರಾಹುಲ್ (ಎರಡನೆ), ಎ. ಬಾಲಕಿಶನ್ (ಮೂರನೆ) ಹಾಗೂ ಅರ್ಜುನ್ ಭರತ್ (ನಾಲ್ಕನೇ) ಸ್ಥಾನ ಗಳಿಸಿದರು. ಮೂವರು ಆಟಗಾರರು ತಲಾ ಒಂಬತ್ತು ಪಾಯಿಂಟ್ ಕಲೆ ಹಾಕಿದ್ದರು. ಟೈ ಬ್ರೇಕ್‌ನಲ್ಲಿ ಗಳಿಸಿದ ಪಾಯಿಂಟ್‌ಗಳ ಆಧಾರದ ಮೇಲೆ ಸ್ಥಾನಗಳನ್ನು ನಿರ್ಧರಿಸಲಾಯಿತು.ಎನ್. ಸಂಜಯ್ (8.5), ವೈ.ಜಿ. ವಿಜೇಂದ್ರ (8.5), ಆದಿತ್ಯ ಚಕ್ರವರ್ತಿ (8.5), ಗೋಸ್ವಾಮಿ ವೇದಾಂತ್, ವಿ.ಪಿ.ಎಸ್. ದರ್ಶನ್ ಹಾಗೂ ಕೆ.ಎಸ್. ರಘುನಂದನ (ಮೂವರು ಆಟಗಾರರು ತಲಾ 8 ಪಾಯಿಂಟ್) ಪಡೆದು ನಂತರದ ಸ್ಥಾನಗಳನ್ನು ತಮ್ಮದಾಗಿಸಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.