ಭಾನುವಾರ, ಜೂನ್ 13, 2021
22 °C

ಶ್ರೀಲಂಕಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ನಿರ್ಣಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲಂಬೊ (ಪಿಟಿಐ): ಎಲ್‌ಟಿಟಿಇ ವಿರುದ್ಧ ಶ್ರೀಲಂಕಾ ನಡೆಸಿದೆ ಎನ್ನಲಾದ ಯುದ್ಧಾಪರಾಧ ಮತ್ತು  ಮಾನವ ಹಕ್ಕು­ಗಳ ಉಲ್ಲಂಘನೆ  ಆರೋಪಗಳ ಬಗ್ಗೆ ಅಂತರರಾಷ್ಟ್ರೀಯ ಮಟ್ಟದ ಸ್ವತಂತ್ರ ಸಂಸ್ಥೆಯಿಂದ ತನಿಖೆ  ನಡೆಸುವಂತೆ ಅಮೆರಿಕ ಒತ್ತಾಯಿಸಿದೆ.ಜಿನಿವಾದಲ್ಲಿ ಸೋಮವಾರ ಆರಂಭ­ವಾದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡ­ಳಿ ಸಭೆಯಲ್ಲಿ  ಶ್ರೀಲಂಕಾ ವಿರುದ್ಧ ಯುದ್ಧಾಪರಾಧಗಳ ತನಿಖೆಗೆ ಒತ್ತಾ­ಯಿ­ಸಿದ ನಿರ್ಣಯವನ್ನು ಅಮೆರಿಕ ಹಾಗೂ ಮಿತ್ರ ರಾಷ್ಟ್ರಗಳು ಮಂಡಿಸಿದವು. ಮಾರ್ಚ್‌ ಕೊನೆಯಲ್ಲಿ ನಿರ್ಣಯ­ವನ್ನು ಮತಕ್ಕೆ ಹಾಕುವ ಸಾಧ್ಯತೆ ಇದೆ.ಅಲ್ಪಸಂಖ್ಯಾತ ತಮಿಳು ಸಮು­ದಾ­ಯದ ವಿರುದ್ಧ ಶ್ರೀಲಂಕಾ ನಡೆಸಿದ ದೌರ್ಜನ್ಯ ಕುರಿತು ತನಿಖೆ ನಡೆ­ಸು­ವಂತೆ ಒತ್ತಾ­ಯಿಸಿ ಮಂಡಿಸುತ್ತಿರುವ ಮೂರನೇ ನಿರ್ಣಯ ಇದಾಗಿದೆ.ಅಮೆರಿಕ ಬೆಂಬಲಿತ ನಿರ್ಣಯದ ವಿರುದ್ಧ ಕೊಲಂಬೊ ಕೂಡ ಜಾಗತಿಕ ಮಟ್ಟ­ದಲ್ಲಿ ವ್ಯವಸ್ಥಿತ ಲಾಬಿ ನಡೆಸಿದೆ. ಶ್ರೀಲಂಕಾವನ್ನು ಗುರಿಯಾಗಿಸಿ­ಕೊಂಡಿ­ರುವ ಅಮೆರಿಕ ಮತ್ತು ಬ್ರಿಟನ್‌, ಎಲ್‌ಟಿಟಿಇ ಪರ ವಕಾಲತು ನಡೆಸಿವೆ ಎಂದು ಅದು ಆರೋಪಿಸಿದೆ.30 ವರ್ಷಗಳಷ್ಟು ಹಳೆಯದಾದ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಸಮಯಾವಕಾಶ ನೀಡುವಂತೆ  ಅಂತರ­ರಾಷ್ಟ್ರೀಯ ಸಮುದಾಯವನ್ನು ಕೋರಿದೆ.2009ರಲ್ಲಿ ಎಲ್‌ಟಿಟಿಇ ವಿರುದ್ಧ ಶ್ರೀಲಂಕಾ ನಡೆಸಿದ ಕಾರ್ಯಾಚರಣೆ ಸಂದರ್ಭದಲ್ಲಿ ಸುಮಾರು 40 ಸಾವಿರ ತಮಿಳು ನಾಗರಿಕರನ್ನು ಹತ್ಯೆ ಮಾಡಲಾಗಿದೆ ಎಂದು ಮಾನವ ಹಕ್ಕುಗಳ  ಹೋರಾಟಗಾರರು ಮತ್ತು ತಜ್ಞರು ಆರೋಪಿಸಿದ್ದರು.ಭಾರತದ ನಿಲುವು: ಆಶ್ವಾಸನೆ ನೀಡದ ಸಿಂಗ್‌

ಮ್ಯಾನ್ಮಾರ್‌ನ ನೇ ಪಿ ತಾವ್‌ ನಗರದಲ್ಲಿ ನಡೆಯುತ್ತಿರುವ ಬಿಮ್‌­ಸ್ಟೆಕ್‌ ಶೃಂಗ­ಸಭೆಯ ಸಂದರ್ಭದಲ್ಲಿ ಪ್ರಧಾನಿ ಮನಮೋಹನ್‌ ಸಿಂಗ್‌ ಮತ್ತು ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜ­ಪಕ್ಸೆ ಮಂಗಳವಾರ ಪರಸ್ಪರ ಭೇಟಿಯಾದರು.

ಡಿಎಂಕೆ ಸೇರಿದಂತೆ ತಮಿಳು­ನಾಡಿನ ಬಹುತೇಕ ರಾಜ­ಕೀಯ ಪಕ್ಷ­ಗಳ ವಿರೋಧದ ನಡು­ವೆಯೂ ಸಿಂಗ್‌, ರಾಜಪಕ್ಸೆ ಜತೆ 25 ನಿಮಿಷ ಚರ್ಚೆ ನಡೆಸಿದರು. ಆದರೆ, ಈ ಸಂದರ್ಭದಲ್ಲಿ  ಅವರು ಶ್ರೀಲಂಕಾ ವಿರುದ್ಧ ವಿಶ್ವ­ಸಂಸ್ಥೆ­ಯಲ್ಲಿ ಮಂಡಿಸಲಾದ ನಿರ್ಣ­ಯಕ್ಕೆ ಸಂಬಂಧಿಸಿದಂತೆ ಭಾರತದ ನಿಲುವನ್ನು ಸ್ಪಷ್ಟಪಡಿಸಲಿಲ್ಲ ಹಾಗೂ ಈ ಕುರಿತು ಯಾವುದೇ ಆಶ್ವಾಸನೆಯನ್ನೂ  ನೀಡಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.