ಭಾನುವಾರ, ಜನವರಿ 19, 2020
25 °C

ಸಂಕ್ಷಿಪ್ತ ಸುದ್ದಿ- ರಾಷ್ಟ್ರೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪದ್ಮಶ್ರೀ ವಾಪಸ್‌ಗೆ ಸೂಚನೆ

ಹೈದರಾಬಾದ್‌: ದೆನಿಕೈನಾ ರೆಡಿ ತೆಲುಗು ಚಿತ್ರದ ಆರಂಭ ಫಲಕದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ತಪ್ಪಾಗಿ ಪ್ರದರ್ಶಿಸಿರುವುದರಿಂದ ಈ ಪ್ರಶಸ್ತಿಯನ್ನು ಕೇಂದ್ರ ಸರ್ಕಾರಕ್ಕೆ ವಾಪಸ್‌ ಮಾಡುವಂತೆ ಆಂಧ್ರಪ್ರದೇಶ ಹೈಕೋರ್ಟ್,  ಟಾಲಿವುಡ್ ನಟರಾದ ಮೋಹನ್‌­ಬಾಬು ಮತ್ತು ಬ್ರಹ್ಮಾನಂದನ್‌ ಅವರಿಗೆ ಆದೇಶಿಸಿದೆ.ಪ್ರಶಸ್ತಿಯನ್ನು ದುರ್ಬಳಕೆ ಮಾಡಿಕೊಂಡಿರುವು­ದ­ರಿಂದ ಪ್ರಶಸ್ತಿಯನ್ನು ಕೇಂದಕ್ಕೆ ವಾಪಸ್‌ ಮಾಡಿದರೆ ಅರ್ಜಿಗೆ ಸಂಬಂಧಿಸಿದ ಅಂತಿಮ ತೀರ್ಪು ನೀಡುವಾಗ ಮೃದು ಧೋರಣೆ ತಾಳಲಾಗುತ್ತದೆ ಎಂದು ಹೈಕೋರ್ಟ್‌ ಹೇಳಿದೆ.ಸುಡಾನ್: ನೌಕರರು ವಾಪಸ್‌

ನವದೆಹಲಿ (ಪಿಟಿಐ): ಸುಡಾನ್‌ನಲ್ಲಿ ಗಲಭೆ ಉಲ್ಬಣ­ಗೊಂಡಿರುವುದರಿಂದ ತೈಲ ಮತ್ತು ನೈಸರ್ಗಿಕ ಅನಿಲ ಆಯೋಗವು (ಒಎನ್‌ಜಿಸಿ) ದಕ್ಷಿಣ ಸುಡಾನ್‌ನಲ್ಲಿ ತೈಲ ತೆಗೆಯುವ ಕಾರ್ಯವನ್ನು ಸ್ಥಗಿತಗೊಳಿಸಿ ಅಲ್ಲಿರುವ ನೌಕರರನ್ನು ಭಾರತಕ್ಕೆ ವಾಪಸ್‌ ಕರೆಸಿಕೊಂಡಿದೆ.ನ್ಯಾಯಾಂಗ ಬಂಧನ ವಿಸ್ತರಣೆ

ಪಣಜಿ (ಪಿಟಿಐ): ಕಿರಿಯ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿರುವ ಆಪಾದನೆ ಎದುರಿಸುತ್ತಿರುವ ತೆಹಲ್ಕಾ ಪತ್ರಿಕೆಯ ಸ್ಥಾಪಕ ಸಂಪಾದಕ ತರುಣ್‌ ತೇಜ್‌ಪಾಲ್‌ ನ್ಯಾಯಾಂಗ ಬಂಧನವನ್ನು ಇಲ್ಲಿಯ ನ್ಯಾಯಾಲಯ ಮತ್ತೆ 12 ದಿನಗಳ ಕಾಲ ವಿಸ್ತರಿಸಿದೆ.ಬಾಲಕಿ ಮೇಲೆ ಅತ್ಯಾಚಾರ

ಕೋಲ್ಕತ್ತ (ಪಿಟಿಐ): ಟ್ಯಾಕ್ಸಿಯೊಂದರಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಇಲ್ಲಿನ ಪಾರ್ಕ್‌ ಸ್ಟ್ರೀಟ್‌ ಪ್ರದೇಶದಲ್ಲಿ ಸೋಮವಾರ ನಡೆದಿದೆ.

ಬಾಲಕಿಯು(13) ಪಾದ­ಚಾರಿ ಮಾರ್ಗ­ದಲ್ಲಿ ನಡೆದು­ಕೊಂಡು ಹೋಗು­ತ್ತಿ­ರುವಾಗ, ಆಕೆಯನ್ನು ಟ್ಯಾಕ್ಸಿ­ಯೊಳಗೆ ಬಲವಂತವಾಗಿ ಎಳೆದು­ಕೊಂಡು ಅತ್ಯಾ­ಚಾರ ಮಾಡಲಾಗಿದೆ ಎಂದು ತಿಳಿದು­ಬಂದಿದೆ. ಆರೋಪಿ ಮಹಮದ್‌ ಅನ್ವರ್‌­ನನ್ನು ಬಂಧಿಸಲಾಗಿದೆ.

ಪ್ರತಿಕ್ರಿಯಿಸಿ (+)