ಭಾನುವಾರ, ಮೇ 16, 2021
22 °C

ಸಂಕ್ಷಿಪ್ತ ಸುದ್ದಿ: ವಿದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಫ್ಘನ್: 7 ಉಗ್ರರ ಸಾವು

ಕಾಬೂಲ್ (ಐಎಎನ್‌ಎಸ್): ಆಫ್ಘಾನಿಸ್ತಾನದ ಪೂರ್ವ ಭಾಗದಲ್ಲಿ ಆಫ್ಘನ್ ಮತ್ತು ನ್ಯಾಟೊ ನೇತೃತ್ವದ ಮಿತ್ರ ಪಡೆಗಳು ಸೋಮವಾರ ನಡೆಸಿದ ಕಾರ್ಯಾಚರಣೆಯಲ್ಲಿ 7 ಉಗ್ರರು ಹತರಾಗಿದ್ದು, ಇದೇ ವೇಳೆ 32 ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ಎರಡು ಯುದ್ಧ ಟ್ಯಾಂಕರ್, ರಾಕೆಟ್ ಸೇರಿದಂತೆ ಭಾರಿ ಪ್ರಮಾಣದಲ್ಲಿ ಸ್ಫೋಟಕಗಳನ್ನು ಭದ್ರತಾ ಪಡೆ ವಶಪಡಿಸಿಕೊಂಡಿದೆ.ಚಂಡಮಾರುತ: ಶಾಲೆಗಳಿಗೆ ರಜೆ

ಮನಿಲಾ (ಎಪಿ): ಚಂಡಮಾರುತದಿಂದ ಭಾರಿ ಮಳೆ ಮತ್ತು ಬಿರುಗಾಳಿ ಬೀಸುತ್ತಿರುವುದರಿಂದ ಮುಂಜಾಗರೂಕತಾ ಕ್ರಮವಾಗಿ ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಹಲವು ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ. ನೆಸಾತ್ ಪಟ್ಟಣದಿಂದ ಮುನ್ನುಗ್ಗುತ್ತಿರುವ ಚಂಡಮಾರುತದಿಂದ ಹಲವೆಡೆ ಭಾರಿ ಮಳೆಯಾಗುತ್ತಿದೆ. ಹಾಗೂ ಭೂಕುಸಿತ ಉಂಟಾಗಿದೆ. ಪ್ರತಿ ಗಂಟೆಗೆ 215 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ದುಬೈನಲ್ಲಿ ಭಾರತೀಯ ವಸ್ತುಗಳ ಪ್ರದರ್ಶನ

ದುಬೈ (ಪಿಟಿಐ): ಭಾರತದಲ್ಲಿ ಉತ್ಪಾದಿಸಿರುವ ವಸ್ತುಗಳ ಪ್ರದರ್ಶನವು ಸೆಪ್ಟೆಂಬರ್ 28ರಿಂದ ಅಕ್ಟೋಬರ್ 1ರ ವರೆಗೆ ಇಲ್ಲಿನ ಭಾರತೀಯ ವಾಣಿಜ್ಯ ಮತ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿದೆ.ಭಾರತದ 40 ಕಂಪೆನಿಗಳ ಆಹಾರ, ಗಿಡಮೂಲಿಕೆ ಮತ್ತು ಸ್ಥಳೀಯ ಉತ್ಪನ್ನಗಳನ್ನು ಪ್ರದರ್ಶನದಲ್ಲಿ ಇಡಲಾಗುವುದು. ಸಂಸದ ಮನೋಹರ್ ಗಜಾನನ ಪ್ರದರ್ಶನ ಉದ್ಘಾಟಿಸುವರು.`ಭಾರತೀಯರ ಪಾತ್ರ ಮಹತ್ವದ್ದು~


ಹೇಗ್ (ಐಎಎನ್‌ಎಸ್): ಭಾರತ ಮತ್ತು ನೆದರ್‌ಲ್ಯಾಂಡ್ ಮಧ್ಯೆ ಸಾಂಸ್ಕೃತಿಕ ಮತ್ತು ಆರ್ಥಿಕ ಸಂಬಂಧ ವೃದ್ಧಿಯಲ್ಲಿ ಭಾರತೀಯ ಸಮುದಾಯದವರ ಪಾತ್ರ ಮಹತ್ವದ್ದಾಗಿದೆ ಎಂದು ಸಾಗರೋತ್ತರ ವ್ಯವಹಾರಗಳ ಸಚಿವ ವಯಲಾರ್ ರವಿ ತಿಳಿಸಿದ್ದಾರೆ.ಇಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ದೇಶಿಸಿ ಮಾತನಾಡಿದ ಅವರು, ಎರಡು ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧ ಬಲಗೊಳ್ಳಲು ಇಲ್ಲಿ ನೆಲೆಸಿರುವ ಭಾರತೀಯರ ಕೊಡುಗೆ ಅಪಾರವಾದದ್ದು ಎಂದು  ಮುಕ್ತ ಕಂಠದಿಂದ ಪ್ರಶಂಶಿಸಿದರು.ನೇಪಾಳ ವಿಮಾನ ದುರಂತ: ಶವಪರೀಕ್ಷೆ ವಿಳಂಬ

ಕಠ್ಮಂಡು (ಐಎಎನ್‌ಎಸ್): ನೇಪಾಳದ ಕಠ್ಮಂಡು ಕಣಿವೆಯಲ್ಲಿ ಭಾನುವಾರ ವಿಮಾನ ಅಪಘಾತದಲ್ಲಿ ಮರಣ ಹೊಂದಿದ 19 ಜನರ ಶವಪರೀಕ್ಷೆ ವಿಳಂಬವಾಗಲಿದೆ ಎಂದು ಇಲ್ಲಿನ ತ್ರಿಭುವನ ಆಸ್ಪತ್ರೆಯ ಮೂಲಗಳು ತಿಳಿಸಿವೆ.ಇದರಿಂದಾಗಿ ಮೃತರ ಕುಟುಂಬಗಳು ತಮ್ಮ ಬಂಧುಗಳ ಶವಗಳನ್ನು ಪಡೆಯಲು ಸೋಮವಾರ ತಡ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.