ಶನಿವಾರ, ಮೇ 28, 2022
27 °C

ಸಂಗೀತ ದಿಗ್ಗಜನಿಗೆ ಗಾನ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಡಿಫ್ (ಇಂಗ್ಲೆಂಡ್) (ಎಎಫ್‌ಪಿ): ಪಾಪ್ ಸಂಗೀತ ಲೋಕದ ಸಾಮ್ರಾಟ ಮೈಕಲ್ ಜಾಕ್ಸನ್ ಅವರಿಗೆ ಗೌರವ ಅರ್ಪಿಸಲು ವೇಲ್ಸ್‌ನಲ್ಲಿ ಗುರುವಾರ ಆಯೋಜಿಸಲಾಗಿದ್ದ `ಮೈಕಲ್ ಫಾರ್‌ಎವರ್~ ಸಂಗೀತ ಸಂಜೆಯಲ್ಲಿ ಅವರ ಮೂವರು ಮಕ್ಕಳು ಸೇರಿದಂತೆ ಕುಟುಂಬದ ಇತರ ಸದಸ್ಯರು ಭಾಗವಹಿಸಿದ್ದರು.ಕಾರ್ಡಿಫ್‌ನ ಮಿಲೆನಿಯಂ ಕ್ರೀಡಾಂಗಣದ ಒಂದೇ ವೇದಿಕೆಯಲ್ಲಿ ಜಾಕ್ಸನ್ ಕುಟುಂಬದ ಕುಡಿಗಳ ಜತೆಗೆ ಜಗತ್ತಿನ ಅತಿರಥ, ಮಹಾರಥ ಸಂಗೀತಗಾರರನ್ನು ಕಾಣುವ ಅವಕಾಶ ಇಲ್ಲಿಯ ಸಂಗೀತ ಪ್ರೇಮಿಗಳಿಗೆ ದೊರೆಯಿತು.ಸಂಗೀತ ದಿಗ್ಗಜನಿಗೆ ಗೌರವ ಸೂಚಿಸಲು ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮ ಆರಂಭದಿಂದಲೂ ಒಂದಲ್ಲ ಒಂದು ವಿವಾದಕ್ಕೆ ಈಡಾಗುತ್ತಲೇ ಬಂದಿತ್ತು. ಕೊನೆಯ ಕ್ಷಣದವರೆಗೂ ಕಾರ್ಯಕ್ರಮ ನಡೆಯುವ ಬಗ್ಗೆ ಸಂಶಯಗಳಿದ್ದವು. ಮತ್ತೆ ಂದೂಡಲಾಗುತ್ತದೆ ಎಂಬ ಗಾಳಿ ಸುದ್ದಿಯ ಮಧ್ಯೆಯೇ ಕಾರ್ಯಕ್ರಮ ನಡೆಯಿತು.ತಮ್ಮ ತಂದೆಯ ಬಟ್ಟೆಗಳ ರೀತಿಯಲ್ಲೆ ವಿಶೇಷ ದಿರಿಸುಗಳನ್ನು ತೊಟ್ಟ ಅವರ ಮಕ್ಕಳಾದ ಪ್ರಿನ್ಸ್ (14), ಪ್ಯಾರಿಸ್ (13) ಹಾಗೂ 9 ವರ್ಷದ ಪುತ್ರಿ ಬ್ಲಾಂಕೆಟ್ ಪ್ರೇಕ್ಷಕರ ಗಮನ ಸೆಳೆದರು. ಜಾಕ್ಸನ್ ಒಡಹುಟ್ಟಿದವರೂ ಕುಣಿದು ಕುಪ್ಪಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.