ಮಂಗಳವಾರ, ಮೇ 18, 2021
24 °C

ಸಂಚಾರಿ ಕೌಶಲ್ಯ ತರಬೇತಿ ವಾಹನ ಸೇವೆಗೆ ಸಮರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಬಡ ವಿದ್ಯಾರ್ಥಿಗಳಿಗೂ ತಂತ್ರ ಜ್ಞಾನದ ಅರಿವು ಮೂಡಿಸುವ ಸಲು ವಾಗಿ ಐಟಿಐ ಕಾಲೇಜು ವತಿಯಿಂದ ಅತ್ಯಾಧುನಿಕ ಸೌಲಭ್ಯವುಳ್ಳ ಸಂಚಾರಿ ಕೌಶಲ್ಯ ತರಬೇತಿ ವಾಹನ ಸೇವೆಗೆ ಭಾನುವಾರ ಚಾಲನೆ ನೀಡಲಾ ಯಿತು.ನಗರದ ಐಟಿಐ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಬಡವರ ಮನೆ ಬಾಗಿಲಿಗೂ ತಂತ್ರಜ್ಞಾನ ನೀಡುವ ವಿನೂತನ ಸೇವೆಗೆ ಗ್ರಾಮೀಣಾಭಿವೃದ್ಧಿ ಮತ್ತು ಮತ್ತು ಪಂಚಾಯತ ರಾಜ್ ಸಚಿವ ಎಚ್.ಕೆ.ಪಾಟೀಲ ಚಾಲನೆ ನೀಡಿ, ಅಲ್ಪಸಂಖ್ಯಾತರು, ಬಡವರು ತರಬೇತಿ ವಾಹನ ಸೇವೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.2007-08ನೇ ಸಾಲಿನಲ್ಲಿ  ಕೇಂದ್ರ ಸರ್ಕಾರ ಸಾರ್ವಜನಿಕ ಸಹಭಾಗಿತ್ವದಲ್ಲಿ ಸರ್ಕಾರಿ ಕಾಲೇಜು ಐಟಿಐಗಳನ್ನು ಉನ್ನತೀಕರಿಸಲು ದೇಶದ 1396 ಐಟಿಐ ಕಾಲೇಜುಗಳನ್ನು ಆಯ್ಕೆ ಮಾಡಿತು. ಅದರಲ್ಲಿ ಗದಗ ಐಟಿಐ ಕಾಲೇಜು ಸಹ ಸೇರ್ಪಡೆಯಾಗಿತ್ತು. 2013ರಲ್ಲಿ ಅಧಿಕೃತವಾಗಿ ಕಾಲೇಜು ವತಿಯಿಂದ ತಂತ್ರಜ್ಞಾನ ಅರಿವು ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.ಸಂಚಾರಿ ಕೌಶಲ್ಯ ನಿರ್ವಹಣೆಗಾಗಿ ಕೆಎಸ್‌ಆರ್‌ಟಿಸಿಯಿಂದ ರೂ. 3.5 ಲಕ್ಷ ವೆಚ್ಚದಲ್ಲಿ ಹಳೆಯ ಬಸ್ ಖರೀದಿಸಲಾಗಿದ್ದು, ಈ ಬಸ್‌ನಲ್ಲಿ ಅತ್ಯಾಧುನಿಕ ವ್ಯವಸ್ಥೆ ಕಲ್ಪಿಸಲಾಗಿದೆ. 16 ಕಂಪ್ಯೂಟರ್‌ಗಳು, ಯುಪಿಎಸ್ ಬ್ಯಾಟರಿಗಳು, ಹವಾನಿಯಂತ್ರಣ, ಜನರೇಟರ್ ಅಳ ವಡಿಸಲಾಗಿದ್ದು, ಏಕಕಾಲಕ್ಕೆ 16 ಮಂದಿಗೆ ತರಬೇತಿ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.`ಕಂಪ್ಯೂಟರ್ ಬೇಸಿಕ್ ಕೋರ್ಸ್ ಗಳು, ಐಟಿ ಕೋರ್ಸ್‌ಗಳು, ಕಂಪ್ಯೂ ಟರ್ ಹಾರ್ಡ್‌ವೇರ್ ಅಂಡ್ ನೆಟ್ ವರ್ಕಿಂಗ್ ಕೋಸ್‌ಗಳನ್ನು ಕಲಿಸ ಲಾಗು ತ್ತದೆ.  ಒಂದರಿಂದ ಎರಡು ತಿಂಗಳುಗಳ ತರಬೇತಿ ಇದಾಗಿದೆ. ಐಟಿಐ ವಿದ್ಯಾರ್ಥಿ  ಗಳಿಗೆ ಆದ್ಯತೆ ನೀಡುವುದರ ಜತೆಗೆ ಆಸಕ್ತ ಸಾರ್ವಜನಿಕರಿಗೂ ತರಬೇತಿ ನೀಡಲಾಗುವುದು.ಒಂದೊಂದು ಕೋರ್ಸ್‌ಗಳಿಗೆ ಕನಿಷ್ಟ ರೂ. 500ರಿಂದ ಗರಿಷ್ಠ ರೂ. 1000 ಶುಲ್ಕ ನಿಗದಿ ಪಡಿಸಲಾಗಿದೆ. ಜಿಲ್ಲೆಯ ಯಾವ  ಸ್ಥಳಕ್ಕಾದರೂ ವಾಹನ ತೆರಳಿ ತರಬೇತಿ ನೀಡಲಿದೆ. ವಾರದಲ್ಲಿ ಮೂರು ದಿನ ಮಾತ್ರ ಗ್ರಾಮೀಣ ಪ್ರದೇಶದಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಬೆಳಗಾವಿ ವಿಭಾಗದ ಉದ್ಯಮ ಮತ್ತು ತರಬೇತಿ ವಿಭಾಗದ ಜಂಟಿ ನಿರ್ದೇಶಕ ರಮೇಶ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.