ಸೋಮವಾರ, ಮೇ 23, 2022
20 °C

ಸಂಜೀವ್ ಭಟ್ ಬಂಧನಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್, (ಪಿಟಿಐ): ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಬಂಧಿಸಿರುವ ಗುಜರಾತ್ ಸರ್ಕಾರದ ಕ್ರಮವನ್ನು ಖಂಡಿಸಿರುವ ಅಮೆರಿಕದಲ್ಲಿಯ ಭಾರತೀಯರು, ಭಟ್ ಅವರು ಮಾಡಿರುವ ಆಪಾದನೆಗಳ ಬಗ್ಗೆ ವಿವರವಾದ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.ಮುಖ್ಯಮಂತ್ರಿ ಮೋದಿ ಮತ್ತು ಸರ್ಕಾರದ ವಿರುದ್ಧ ಭಟ್  ಮಾಡಿರುವ ಆಪಾದನೆಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಅಮೆರಿಕದ ಭಾರತೀಯ ಮುಸ್ಲಿಂ ಮಂಡಲಿಯು ಆಗ್ರಹಪಡಿಸಿದೆ.ಬಂಧನಕ್ಕೆ ವಿರೋಧ: ಜಾತ್ಯತೀತ ಮತ್ತು ಸೌಹಾರ್ದ ಭಾರತ ಸಂಘಟನೆಯು ಸಂಜೀವ್ ಭಟ್ ಅವರ ಬಂಧನವನ್ನು ಬಲವಾಗಿ ಖಂಡಿಸಿದ್ದು, ಕೂಡಲೆ ಅವರ ವಿರುದ್ಧ ಮಾಡಲಾಗಿರುವ ಆಪಾದನೆಗಳನ್ನು ರದ್ದುಪಡಿಸಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.