ಶುಕ್ರವಾರ, ಸೆಪ್ಟೆಂಬರ್ 20, 2019
25 °C

ಸಂತರ ಉಪದೇಶ ದಾರಿದೀಪ: ರಂಭಾಪುರಿ ಶ್ರೀ

Published:
Updated:

ಇಂಡಿ: ಇಂದಿನ ಕಲುಷಿತ ವಾತಾವರಣ ದಲ್ಲಿ ಸಂತರ ಉಪದೇಶಗಳು ದಾರಿ ದೀಪವಾಗಲಿವೆ ಎಂದು ಬಾಳೆ ಹೊನ್ನೂರಿನ ರಂಭಾಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು. ಅವರು ತಾಲ್ಲೂಕಿನ ಸಾಲೋಟಗಿ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಇಷ್ಟಲಿಂಗ ಮಹಾಪೂಜೆ, ನೂತನ ಪಾದಗಟ್ಟಿ ಪೂಜೆ ಹಾಗೂ ಪುರಾಣ ಮಹಾಮಂಗಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಜೀವನದ ಮೌಲ್ಯಗಳನ್ನು ಸಾಲೋ ಟಗಿ ಶಿವಯೋಗಿಗಳು ರಚಿಸಿದ ಸಿದ್ದಾಂತ ಶಿಖಾಮಣಿಯಲ್ಲಿ ನಿರೂಪಿಸಲಾಗಿದೆ. 12ನೇ ಶತಮಾನದ ಶರಣರು ಈ ಸೂತ್ರಗಳನ್ನು ಪರಿಪಾಲಿಸಿ, ಪಾವನ ವಾಗಿದ್ದನ್ನು ಮರೆಯಬಾರದು ಎಂದರು.ಕನ್ನೂರ ಮಠದ ರೇವಣಸಿದ್ದ ಶಿವಾ ಚಾರ್ಯರು, ಕಟ್ಟೂರು ಬಸವೇಶ್ವರ ಶಿವಾಚಾರ್ಯರು ಹಾಗೂ ಉಪನ್ಯಾಸಕಿ ಜಯಶ್ರೀ ಹೊಸಮನಿ ಉಪನ್ಯಾಸ ನೀಡಿದರು.   ಕೇಂದ್ರದ ಮಾಜಿ ಸಚಿವರಾದ ಬಸನಗೌಡ ಪಾಟೀಲ ಯತ್ನಾಳ, ಸಿದ್ದು ನ್ಯಾಮಗೌಡ, ಬಬ ಲೇಶ್ವರ ಶಾಸಕ ಎಂ.ಬಿ.ಪಾಟೀಲ, ವಿಧಾ ನ ಪರಿಷತ್ ಸದಸ್ಯ ಅರುಣ ಶಹಾಪುರ, ಮಾಜಿ ಶಾಸಕ ಎನ್.ಎಸ್. ಖೇಡ ಮಾತನಾಡಿದರು.ವೇದಿಕೆಯಲ್ಲಿ ಉದ್ಯಮಿ ಶ್ರೀಪತಿಗೌಡ ಬಿರಾದಾರ, ಶಿವ ಯೋಗೆಪ್ಪ ನೇದಲಗಿ, ಬಾಬು ಸಾಹು ಕಾರ ಮೇತ್ರಿ, ರಾಜುಗೌಡ ಪಾಟೀಲ, ಭೀಮರಾಯಗೌಡ ಪಾಟೀಲ, ಮಲ್ಲಿ ಕಾರ್ಜುನ ಕಿವಡೆ, ರಮೇಶ ಅಡ ಗಲ್ಲ, ಶಿವಯೋಗೆಪ್ಪ ಚನಗೊಂಡ, ಅಶೋಕ ಬಗಲಿ, ಗಡ್ಡೆಪ್ಪ ಜೋತ ಗೊಂಡ, ಬಸವರಾಜ ಹಸನಾಪುರ, ದಯಾನಂದ ಹಿರೇಮಠ, ಎಸ್.ಬಿ. ಬರಗುಂಡಿ, ಬಿ.ಎಂ.ಪಾತರ ಉಪಸ್ಥಿತರಿದ್ದರು.

Post Comments (+)