ಸಂತೇಮರಹಳ್ಳಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸಾವಯವ ಕೃಷಿಯಿಂದ ಬೆಳೆದ ಪದಾರ್ಥಗಳನ್ನು ಇಲ್ಲಿನ ಬಸ್ ನಿಲ್ದಾಣದಲ್ಲಿ ಶನಿವಾರ ಪ್ರದರ್ಶಿಸಲಾಯಿತು.

ಹಸಿರು ಸೇನೆ ಜಿಲ್ಲಾಧ್ಯಕ್ಷ ಮಹೇಶ್ಕುಮಾರ್ ಮಾತನಾಡಿ, `ರೈತರು ಕುಲಾಂತರಿ ಬೀಜವನ್ನು ವಿರೋಧಿಸಬೇಕು. ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ ಬಳಸಿದರೆ ರಾಸಾಯನಿಕ ಔಷಧಿಗಳ ಅವಶ್ಯ ಇರುವುದಿಲ್ಲ. ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಲು ಹೈಬ್ರಿಡ್ ತಳಿಗಳನ್ನು ರೈತರು ಬಳಸಬಾರದು~ ಎಂದರು.

`ಹೈಬ್ರಿಡ್ ತಳಿಗಳಿಂದ ದೇಹದ ಆರೋಗ್ಯ ಮತ್ತು ಪ್ರಾಣಿ ಸಂಕುಲದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಂದು ಉಪ್ಪಿಗಾಗಿ ಸತ್ಯಾಗ್ರಹ ನಡೆಯಿತು. ಇಂದು ಬೀಜಕ್ಕಾಗಿ ಸತ್ಯಾಗ್ರಹ ನಡೆಸಲಾಗುತ್ತಿದೆ. ವಿದೇಶಿ ಕಂಪೆನಿಗಳನ್ನು ದೇಶದಿಂದ ದೂರ ಇಡಬೇಕು~ ಎಂದು ರೈತರಿಗೆ ಸಲಹೆ ನೀಡಿದರು. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನೂರು ಪ್ರಕಾಶ್, ಮಾಲಂಗಿ ರೇಚಣ್ಣ, ವಿ.ಜಿ.ಕೆ.ಕೆ.ಹರೀಪ್, ಗುರುಸ್ವಾಮಿ, ಶಿವಕುಮಾರ್, ಬಸವರಾಜು, ಪ್ರಭು ಹಾಜರಿದ್ದರು.

ಚುಟುಕು ಕವಿಮೇಳ: ಆಹ್ವಾನ
ಮೈಸೂರು: ಹುಣಸೂರಿನ ಸ್ಪಂದನ ಸಾಂಸ್ಕೃತಿಕ ಪರಿಷತ್ತು ಹಾಗೂ ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆಯ ಸಂಯುಕ್ತಾಶ್ರಯದಲ್ಲಿ ರಾಜ್ಯ ಮಟ್ಟದ ಚುಟುಕು ಕವಿಮೇಳವನ್ನು ಪಟ್ಟಣದ ರೋಟರಿ ಭವನದಲ್ಲಿ ಏ.1 ರಂದು ಆಯೋಜಿಸಲಾಗುವುದು ಎಂದು ಪರಿಷತ್ತಿನ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ: 98802 64678, 98807 50100 ಸಂಪರ್ಕಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.