ಶುಕ್ರವಾರ, ಮೇ 20, 2022
19 °C

ಸಂಭ್ರಮದ ಐನೂರು ಮಾರಮ್ಮ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಭ್ರಮದ ಐನೂರು ಮಾರಮ್ಮ ಜಾತ್ರೆ

ಗುಂಡ್ಲುಪೇಟೆ: ತಾಲ್ಲೂಕಿನ ಮೂಲೆಹೊಳೆ ಅರಣ್ಯದ ನಡುವೆ ಸೋಮವಾರ ಆರಂಭಗೊಂಡ ಐನೂರು ಮಾರಮ್ಮದೇವಿಯ ಜಾತ್ರಾ ಮಹೋತ್ಸವವು ಅರಣ್ಯದಂಚಿನ ಗ್ರಾಮಗಳ ಸಹಕಾರದೊಂದಿಗೆ ಎರಡು ದಿನ ಅದ್ದೂರಿಯಾಗಿ ನಡೆಯಿತು.ಬಂಡೀಪುರ ಅಭಯಾರಣ್ಯದ ವ್ಯಾಪ್ತಿಗೆ ಸೇರಿದ ಮೂಲೆಹೊಳೆ ಅರಣ್ಯದ ಐನೂರು ಮಾರಿಗುಡಿ ಅರಣ್ಯ ಶಿಬಿರದಿಂದ ಸುಮಾರು 2 ಕಿ.ಮೀ. ದೂರದಲ್ಲಿ  ಐನೂರು ಮಾರಮ್ಮ ದೇವತೆಯ ದೇವಸ್ಥಾನವಿದ್ದು, ಐತಿಹಾಸಿಕ ಮಹತ್ವ ಹೊಂದಿದೆ. ಆಷಾಢ ಅಮಾವಾಸ್ಯೆಯ ನಂತರದ ಸೋಮವಾರ ಮತ್ತು ಮಂಗಳವಾರಗಳಂದು  ಪ್ರತಿ ವರ್ಷ ಈ ಜಾತ್ರೆ ನಡೆಯುತ್ತದೆ. ತಾಲ್ಲೂಕಿನ  ಹೊಂಗಹಳ್ಳಿ, ಹಳ್ಳದಮಾದಹಳ್ಳಿ, ಕೊಡಸೋಗೆ, ದುಂದಾಸನಪುರ ಮುಂತಾದ ಗ್ರಾಮಗಳ ಜನರು ಸೋಮವಾರ ಬೆಳಿಗ್ಗೆ ಅರಣ್ಯಕ್ಕೆ ಪ್ರವೇಶಿಸಿದರು.ನಂತರ ತಾವು ಮನೆಯಿಂದ ತಂದಿದ್ದ ಬುತ್ತಿಯನ್ನು ತಿಂದು, ನಂತರ ಕಾಡಿನ ಒಳಭಾಗದಲ್ಲಿ ಸಿಗುವ ಒಣ ಸೌದೆಯನ್ನು ಕೊಂಡೋತ್ಸವಕ್ಕಾಗಿ ಆರಿಸಿ ತಂದರು. ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಸಿದರು.ಇಡೀ ರಾತ್ರಿ ಪೂಜೆ, ಭಜನೆಗಳು, ಸಾಮೂಹಿಕ ಪ್ರಾರ್ಥನೆಗಳು ನಡೆದವು. ಮಂಗಳವಾರ ಬೆಳಗಿನ ಜಾವ 5.30ಕ್ಕೆ ದೇವಿಯ ತಮ್ಮಡಿಯರಾದ ಹೊಂಗಹಳ್ಳಿ ಗ್ರಾಮದ ಸಿದ್ದಪ್ಪನವರು ಕೊಂಡ ಹಾಯ್ದರು.ನಂತರ ಹರಕೆ ಹೊತ್ತ ಭಕ್ತರು ಕೊಂಡ ಹಾಯುವುದು, ಉರುಳುಸೇವೆ ಮಾಡಿ ಹರಕೆ ತೀರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.