ಚಿಕ್ಕಜಾಜೂರು: ಹೊಳಲ್ಕೆರೆ ತಾಲ್ಲೂಕು ಹನುಮನಕಟ್ಟೆ-ಕೇಶವಾಪುರ ಗ್ರಾಮ ದೇವತೆ ಕೆಂಚಮ್ಮ ದೇವಿಯ ರಥೋತ್ಸವ ಶುಕ್ರವಾರ ಅದ್ದೂರಿಯಾಗಿ ನಡೆಯಿತು.

ಬೆಳಿಗ್ಗೆ ದೇವಿ ಜತೆ ಬಸವಾಪುರ ಯಾನೆ ಬಿಜ್ಜನಾಳ್ ಆಂಜನೇಯ ಸ್ವಾಮಿ ಮತ್ತು ನೆಲ್ಲಿಕಟ್ಟೆಯ ಕರಿಯಮ್ಮ ದೇವಿಯರ ಉತ್ಸವ ಮೂರ್ತಿಗಳನ್ನು ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ರಥೋತ್ಸವಕ್ಕೂ ಮುನ್ನ ಕೆಂಚಮ್ಮ ದೇವಿ ಹಾಗೂ ಬಿಜ್ಜನಾಳ್ ಆಂಜನೇಯ ಸ್ವಾಮಿ ಮತ್ತು ನೆಲ್ಲಿಕಟ್ಟೆಯ ಕರಿಯಮ್ಮ ದೇವಿಯರ ಉತ್ಸವ ಮೂರ್ತಿಗಳನ್ನು ಧಾರ್ಮಿಕ ವಿಧಿಯಂತೆ ದೇವಾಲಯದ ಮುಂಭಾಗದಲ್ಲಿರುವ ಕಲ್ಲಿನ ಬೃಹತ್ ಉಯ್ಯಾಲೆ ಕಂಬದಲ್ಲಿ ಕೂರಿಸಿ ವಿಶೇಷ ಪೂಜೆ ಮಾಡಿ, ಪುರೋಹಿತರು ಹಾಗೂ ಭಕ್ತರು ಉತ್ಸಾಹದಿಂದ ತೂಗಿದರು.

ನಂತರ ಮೂರೂ ಮೂರ್ತಿಗಳನ್ನು ಹೂನಿಂದ ಅಲಂಕರಿಸಲ್ಪಟ್ಟ ರಥದಲ್ಲಿ ಕೂರಿಸಿ ರಥಕ್ಕೆ ದೊಡ್ಡೆಡೆ ಸೇವೆ ಮಾಡಲಾಯಿತು. ಈ ರೀತಿ ಒಂದೇ ರಥದಲ್ಲಿ ಒಂದಕ್ಕಿಂತ ಹೆಚ್ಚು ದೇವತೆಗಳನ್ನಿರಿಸಿ ರಥೋತ್ಸವ ನಡೆಯುವುದು ಇಲ್ಲಿನ ಸಂಪ್ರದಾಯ. ನಂತರ ಮಹಾಮಂಗಳಾರತಿ ಮಾಡುತ್ತಲೇ ನೆರೆದಿದ್ದ ಭಕ್ತರು ರಥವನ್ನು ಎಳೆದರು.

ರಥೋತ್ಸವಕ್ಕೆ ಬರುವ ಭಕ್ತರಿಗಾಗಿ ಪಾನಕದ ವ್ಯವಸ್ಥೆಯನ್ನು ಕೆಲ ಭಕ್ತರು ಆಯೋಜಿಸಿದ್ದರು. ರಾಜ್ಯದ ವಿವಿಧೆಡೆಗಳಿಂದ ಬಂದ ದೇವಿಯ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಚಿಕ್ಕಜಾಜೂರು ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಮಾಡಿದ್ದರು. ಶನಿವಾರ ಸಂಜೆ ದೇವಿಯ ಸಿಡಿ ಉತ್ಸವ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.