ಸೋಮವಾರ, ಜೂನ್ 21, 2021
21 °C

ಸಂಭ್ರಮದ ಮಸಣೀಕಮ್ಮ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಿರಿಯಾಪಟ್ಟಣ: ಪಟ್ಟಣದ ಗ್ರಾಮ ದೇವತೆ ಮಸಣೀಕಮ್ಮ ದೇವತೆಯ ರಥೋತ್ಸವ ಗುರುವಾರ ಸಂಭ್ರಮದಿಂದ ಜರುಗಿತು.

ರಥೋತ್ಸವದ ಪ್ರಯುಕ್ತ ಮುಂಜಾನೆಯಿಂದ ವಿವಿಧ ದೇವತಾ ಕಾರ್ಯಗಳು ಜರುಗಿದವು. ಜಾತ್ರಾ ಮಹೋತ್ಸವ ಅಂಗವಾಗಿ ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಬಿ.ಎಂ. ರಸ್ತೆಯಲ್ಲಿ ಎಳೆದು ತರಲಾಯಿತು. ತಾಲ್ಲೂಕಿನ ಸುತ್ತಮುತ್ತಲಿನ ಹಲವು ಗ್ರಾಮಗಳಿಂದ  ಭಕ್ತರು ಭಾಗವಹಿಸಿದ್ದರು.ಹಣ್ಣು ಜವನ ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. ಜಾತ್ರೆಯ ಪ್ರಯುಕ್ತ ಭಕ್ತರಿಗೆ ವಿವಿಧ ಸಂಘ ಸಂಸ್ಥೆಗಳಿಂದ 40ಕ್ಕೂ ಹೆಚ್ಚು ಕಡೆಗಳಲ್ಲಿ ಮಜ್ಜಿಗೆ, ಪಾನಕ ಮತ್ತು ಪ್ರಸಾದ ವಿನಿಯೋಗ ನಡೆಯಿತುವಚನ ಸಾಹಿತ್ಯ: ಬರಗೂರು ಉಪನ್ಯಾಸ ನಾಳೆ

ಮೈಸೂರು: ಇಲ್ಲಿಯ ರಂಗಾಯಣದ ವನರಂಗದಲ್ಲಿ ಮಾರ್ಚ್‌ 15ರಂದು ಸಂಜೆ 5 ಗಂಟೆಗೆ  ಮಾನಸಗಂಗೋತ್ರಿಯ ಬಸವೇಶ್ವರ ಸಾಮಾಜಿಕ ಪರಿಷ್ಕರಣ ಸಂಶೋಧನ ಹಾಗೂ ವಿಸ್ತರಣಾ ಕೇಂದ್ರದ ಸಂದರ್ಶನ ಪ್ರಾಧ್ಯಾಪಕ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ‘ವಚನ ಸಾಹಿತ್ಯ ಮತ್ತು ಮೂಢನಂಬಿಕೆಯ ಪ್ರಶ್ನೆ’ ಕುರಿತು ಉಪನ್ಯಾಸ ನೀಡುವರು. ಇದು ವಚನ ಸಾಹಿತ್ಯದ ಪ್ರಚಾರೋಪನ್ಯಾಸ ಮಾಲೆಯಡಿ ನಡೆಯಲಿದೆ. ರಂಗಾಯಣ ನಿರ್ದೇಶಕ ಎಚ್‌. ಜನಾರ್ದನ್ ಅಧ್ಯಕ್ಷತೆ ವಹಿಸುವರು. ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ರಂಗಾಯಣ ಹಾಗೂ ಬಸವೇಶ್ವರ ಸಾಮಾಜಿಕ ಪರಿಷ್ಕರಣ ಸಂಶೋಧನ ಮತ್ತು ವಿಸ್ತರಣ ಕೇಂದ್ರದಡಿ ಆಯೋಜಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.