ಮಂಗಳವಾರ, ಜೂನ್ 22, 2021
29 °C

ಸಂವೇದಿ ಸೂಚ್ಯಂಕ: 53 ಅಂಶ ಚೇತರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಶುಕ್ರವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು 53 ಅಂಶಗಳಷ್ಟು ಚೇತರಿಕೆ ಕಂಡಿದ್ದು, 17,636 ಅಂಶಗಳಿಗೆ ಏರಿಕೆ ಪಡೆದಿದೆ.ಜಾಗತಿಕ ಷೇರುಪೇಟೆಗಳು ಚೇತರಿಸಿಕೊಂಡಿರುವುದು ಮತ್ತು `ಒಎನ್‌ಜಿಸಿ~ ಷೇರು ವಿಕ್ರಯದ ಮೂಲಕ ಮರಳಿರುವ ವಿಶ್ವಾಸವು ಪೇಟೆಗೆ ಬಲ ತುಂಬಿವೆ. ದಿನದ ವಹಿವಾಟಿನಲ್ಲಿ ಐಸಿಐಸಿಐ ಬ್ಯಾಂಕ್ ಮತ್ತು ಲಾರ್ಸನ್ ಅಂಡ್ ಟುಬ್ರೊ ಗರಿಷ್ಠ ಲಾಭ ಮಾಡಿಕೊಂಡವು.  ಬ್ಯಾಂಕಿಂಗ್, ರಿಯಾಲ್ಟಿ, ಫಾರ್ಮಸಿ ಕಂಪೆನಿಗಳ ಷೇರುಗಳ ಖರೀದಿ ಒತ್ತಡ ಕಂಡುಬಂತು.`ಎಲ್‌ಅಂಡ್‌ಟಿ~ ಸುಮಾರು ರೂ.1,300 ಕೋಟಿ ಮೊತ್ತದ ಗುತ್ತಿಗೆ ಪಡೆದುಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಕಂಪೆನಿಯ ಷೇರುಗಳು ಶೇ 1.66ರಷ್ಟು ಏರಿಕೆ ಕಂಡವು. ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ 19 ಅಂಶಗಳಷ್ಟು ಏರಿಕೆ ಪಡೆದು, 5,359 ಅಂಶಗಳಿಗೆ ವಾರಾಂತ್ಯದ ವಹಿವಾಟು ಕೊನೆಗೊಳಿಸಿತು.`ಚುನಾವಣಾ ಫಲಿತಾಂಶ, `ಆರ್‌ಬಿಐ~ ವಿತ್ತೀಯ ಪರಾಮರ್ಶೆ, ಕೇಂದ್ರ ಬಜೆಟ್ ಸೇರಿದಂತೆ ಹಲವು ಸಂಗತಿಗಳು ಈ ತಿಂಗಳು ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಲಿವೆ~ ಎಂದು ತಜ್ಞರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.