ಶುಕ್ರವಾರ, ಏಪ್ರಿಲ್ 16, 2021
21 °C

ಸಂಸದರಿಂದ ಹೋಳಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪರಸ್ಪರ ಆರೋಪ-ಪ್ರತ್ಯಾರೋಪ, ವಾಗ್ವಾದಗಳಿಂದ ಕೆಲಕಾಲ ದೂರವಾಗಿ ಪಕ್ಷಭೇದ ಮರೆತ ಸಂಸದರು ಸಂಸತ್ ಭವನದ ಮುಂಭಾಗ ಶುಕ್ರವಾರ ಹೋಳಿ ಹಬ್ಬ ಆಚರಿಸಿದರು.ಚಲನಚಿತ್ರ ನಟಿ, ಸಂಸದೆ ಜಯಪ್ರದಾ ಅವರು ಇತರೆ ಸಂಸದರೊಂದಿಗೆ ‘ರಂಗ್ ಬರಸೇ’ ಹಿಂದಿ ಚಿತ್ರಗೀತೆಯ ಹಾಡಿಗೆ ಸಂಸತ್ ದ್ವಾರದ ಎದುರು ಹೆಜ್ಜೆ ಹಾಕಿದರು.ಕಾಂಗ್ರೆಸ್, ಸಮಾಜವಾದಿ, ಬಿಎಸ್‌ಪಿ, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳ ಸದಸ್ಯರು ಪಕ್ಷಭೇದ ಮರೆತು ಹೋಳಿ ಸಂಭ್ರಮದಲ್ಲಿ ಭಾಗವಹಿಸಿದ್ದರು. ಜಯಪ್ರದಾ ಸಮೂಹ ಗಾನ ಕಾರ್ಯಕ್ರಮ ನಡೆಸಿಕೊಟ್ಟರು. ದೆಹಲಿಯ ಕಾಂಗ್ರೆಸ್ ಸಂಸದ ಮಹಾಬಲ್ ಮಿಶ್ರಾ ಅವರು ‘ಹೋಳಿ ಖೇಲೆ ರಘುವೀರಾ’ ಹಾಡಿಗೆ ಇತರೆ ಸದಸ್ಯರು ಧ್ವನಿಗೂಡಿಸಿದ್ದು ವಿಶೇಷವಾಗಿತ್ತು. ವಿಕಿಲೀಕ್ಸ್ ಬಹಿರಂಗಪಡಿಸಿದ ವಿಷಯಗಳ ಹಿನ್ನೆಲೆಯಲ್ಲಿ ಹಲವು ಬಾರಿ ಮುಂದೂಡಲ್ಪಟ್ಟಿದ್ದ ಸಂಸತ್ತಿನ ಅಧಿವೇಶನದಿಂದ ಮಂಕಾಗಿದ್ದ ಸದಸ್ಯರಲ್ಲಿ ಹೋಳಿ ಚೈತನ್ಯ ಮೂಡಿಸಿತ್ತು.ತನ್ನ ಪತಿಯೊಂದಿಗೆ ಕಾಂಗ್ರೆಸ್ ಸಂಸದೆ ಜಗದಂಬಿಕಾ ಪಾಲ್ ಅವರು ಮಾಧ್ಯಮ ಸ್ನೇಹಿತರು ಮತ್ತು ಸಹದ್ಯೋಗಿಗಳೊಂದಿಗೆ ಕೂಡಿ ಹೋಳಿ ಸಂಭ್ರಮಕ್ಕೆ ಮೊದಲು ಚಾಲನೆ ನೀಡಿದರು. ಅನಂತರ ಇತರೆ ಸದಸ್ಯರು ಇದರಲ್ಲಿ ಭಾಗವಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.