ಶುಕ್ರವಾರ, ಮೇ 7, 2021
27 °C

ಸಂಸ್ಕೃತಿಯ ಹರಿಕಾರರು ಜಾನಪದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾರೂಗೇರಿ (ರಾಯಬಾಗ): ಜನಪದ ಕಲೆಗಳು ಅಪಾಯದಲ್ಲಿವೆ, ಜಾನಪದ ಕಲಾವಿದರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಸಮಾಜ ಜನಪದ ಕಲೆಗಳನ್ನು ಪ್ರೋತ್ಸಾಹಿಸಿದರೆ ಜಾನಪದ ಕಲಾವಿದರು ಬದುಕಲು ಸಾಧ್ಯ. ಅವರು ಈ ನೆಲದ ಸಂಸ್ಕೃತಿಯ ಹರಿಕಾರರು ಎಂದು ವಿಜಾಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.ಇಲ್ಲಿಯ ಆದಿನಾಥ ಜಿನಮಂದಿರದಲ್ಲಿ ಜರುಗಿದ ಡಾ. ಸಿದ್ದು ಹುಲ್ಲೋಳಿಯವರ `~ಬಾಗೆನಾಡಿನ ಜನಪದ ಕಲಾವಿದರು~~  ಗ್ರಂಥವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.ಕಲಾವಿದರಿಗೆ ಸರಕಾರ ಆರ್ಥಿಕ ನೆರವು ನೀಡುವುದರಿಂದ ಮಾತ್ರ ಜನಪದ ಕಲೆಗಳು ಬದುಕುವುದಿಲ್ಲ. ಜನರು ಕಲಾಸ್ವಾದನೆ ಮಾಡಬೇಕು. ಕಲೆಗಳಿಗೆ ಪ್ರೋತ್ಸಾಹ ಸಿಕ್ಕರೆ ಕಲಾವಿದರು ಬೆಳೆಯುತ್ತಾರೆ ಎಂದು ಹೇಳಿದ  ಶ್ರೀಗಳು,  ಜನಪದ ಕಲೆಗಳನ್ನು ಉಳಿಸಿಕೊಳ್ಳುವಂತೆ ಕರೆ ನೀಡಿದರು.ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಗಳಿಸಿದ ಡಾ.ಸಿದ್ದು ಹುಲ್ಲೋಳಿಯವರ ಮಹಾಪ್ರಬಂಧವನ್ನು ಖ್ಯಾತ ಕಣಿ ಕಲಾವಿದ ವಿಷ್ಣು ಕಂಚಕಾರ ಸಮಾಜಕ್ಕೆ ಸಮರ್ಪಿಸಿದರು.ಜಾನಪದ ತಜ್ಞ ಡಾ. ಶ್ರೀರಾಮ ಇಟ್ಟಣ್ಣವರ ಗ್ರಂಥವನ್ನು ಪರಿಚಯಿಸುತ್ತ `ಹುಲ್ಲೋಳಿಯವರ ಮಹಾಪ್ರಬಂಧವು ಜನಪದ ಕಲಾವಿದರ ಅಧ್ಯಯನಕ್ಕೆ ಮಾದರಿಯಾಗಿದೆ~ ಎಂದರು.ಕಲಾವಿದರ ಸಾಮಾಜಿಕ ಸ್ಥಾನ-ಮಾನ, ಆರ್ಥಿಕ ಸ್ಥಿತಿ-ಗತಿ ಹಾಗೂ ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ದಾಖಲಿಸುವ ಪ್ರಯತ್ನ ಹೊಸತು. ತುಂಬ ಶಿಸ್ತು-ಶ್ರಮಗಳು ಗಮನಸೆಳೆಯುತ್ತಿದ್ದು ಇದೊಂದು ವತಾಲಿಕ ಕೃತಿಯೆಂದು ಹೇಳಿದರು.ಜಮಖಂಡಿ ಶಾಸಕ ಶ್ರೀಕಾಂತ ಕುಲಕರ್ಣಿ, ಉಪ ವಿಭಾಗಾಧಿಕಾರಿ ಕ್ಯಾ.ರಾಜೇಂದ್ರ, ಮಾಜಿ ಶಾಸಕರಾದ ಬಾಬುರೆಡ್ಡಿ ತುಂಗಳ, ಕಲ್ಲಪ್ಪಣ್ಣ ಮಗೆಣ್ಣವರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಜಮಖಂಡಿ ಶಾಸಕ ಶ್ರೀಕಾಂತ ಕುಲಕರ್ಣಿ ಸಿದ್ದು ಹುಲ್ಲೋಳಿಯವರ ಆಡಳಿತ ವೈಖರಿಯನ್ನು ಶ್ಲಾಘಿಸಿದರು. ಶಿವಯೋಗಿ ಸವದಿ, ಡಿ.ಸಿ.ಸದಲಗಿ, ರಾಜಶೇಖರ ಪಾಟೀಲ, ಈಶ್ವರ ಮಂಟೂರ  ವೇದಿಕೆಯಲ್ಲಿದ್ದರು.  ವೃಷಭೇಂದ್ರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಆರ್. ದರೂರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಜಮಖಂಡಿ ತಹಸೀಲ್ದಾರ ಸಿದ್ದು ಹುಲ್ಲೋಳಿ ಅಧ್ಯಯನ ಸಂದರ್ಭದ ಅನುಭವಗಳನ್ನು ಹಂಚಿಕೊಂಡರು.ಬಸಗೌಡ ಆಸಂಗಿ, ಆರ್.ಎಸ್.ಯಲಶೆಟ್ಟಿ, ಘೋಡಗೇರಿ ಮಲ್ಲಯ್ಯ ಸ್ವಾಮೀಜಿ, ಅಥಣಿ ತಹಸೀಲ್ದಾರ ಶರಣಬಸಪ್ಪ ಕೋಟ್ಯಾಪ್ಪಗೋಳ, ಬಾಗಲಕೋಟೆಯ  ಶ್ರೀಶೈಲ ಕಂಕಣವಾಡಿ, ಎಸ್.ಆರ್. ಮಾಳಿ ಹಾಗೂ ರಾಯಬಾಗ ಮತ್ತು ಜಮಖಂಡಿ ತಾಲ್ಲೂಕುಗಳ ಸಾಹಿತಿಗಳು  ಭಾಗವಹಿಸಿದ್ದರು.ಬಿ.ಆರ್.ದರೂರ ಸಂಶೋಧನ ಕೇಂದ್ರದ ನಿರ್ದೇಶಕ ಡಾ.ವಿ.ಎಸ್. ಮಾಳಿ ಸ್ವಾಗತಿಸಿದರು. ಶರಣ ವಿಚಾರ ವಾಹಿನಿಯ ಸಂಚಾಲಕ ಈರಣ್ಣ ಮಠಪತಿ ಕಾರ್ಯಕ್ರಮ ನಿರೂಪಿಸಿದರು.  ಕ.ಸಾ.ಪ. ರಾಯಬಾಗ ತಾಲ್ಲೂಕು ಕಾರ್ಯದರ್ಶಿ ಬಿ.ಎ.ಜಂಬಗಿ ವಂದಿಸಿದರು.  ಕಸಾಪ ತಾಲ್ಲೂಕು ಘಟಕ  ಕಾರ್ಯಕ್ರಮ ಸಂಯೋಜಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.