ಹುಬ್ಬಳ್ಳಿ: ಅಧಿಕಾರಿಗಳೆಲ್ಲ ಇನ್ನೂ ಸವಿ ನಿದ್ದೆಯಲ್ಲಿ ಇದ್ದಾಗಲೇ ಅವರ ದಿನಚರಿ ಶುರುವಾಗುತ್ತದೆ. ನೀರು ಬಾರದ ವಾರ್ಡು, ಸ್ವಚ್ಛತೆ ಕಾಣದ ಬೀದಿಯನ್ನು ಹುಡುಕಿಕೊಂಡು ಅವರು ತಮ್ಮ ಬೈಕ್ನಲ್ಲಿ ಸಂಚರಿಸುತ್ತಾರೆ. ಎದುರಿಗೆ ಸಿಕ್ಕ ಜನರ ದೂರು-ದುಮ್ಮಾನಗಳನ್ನು ಆಲಿಸಿ, ಅಗತ್ಯ ಟಿಪ್ಪಣಿಗಳನ್ನೂ ಮಾಡಿಕೊಳ್ಳುತ್ತಾರೆ.

ಮೂರ್ನಾಲ್ಕು ಗಂಟೆ ಕಳೆಯುವುದೇ ತಡ ಸಮಸ್ಯೆ ಬಗೆಹರಿದ ಖುಷಿಯಲ್ಲಿ ಜನ ಆ ವ್ಯಕ್ತಿಗೆ ಧನ್ಯವಾದ ಅರ್ಪಿಸುತ್ತಾರೆ.ಹುಬ್ಬಳ್ಳಿ-ಧಾರವಾಡದ ಹೊಸ ಮೇಯರ್ ಡಾ. ಪಾಂಡುರಂಗ ಪಾಟೀಲ ಅವರ ಕಾರ್ಯವೈಖರಿಗೊಂದು ಮಾದರಿ ಇದು!

ಬೆಳ್ಳಂಬೆಳಿಗ್ಗೆ ಆರರ ಹೊತ್ತಿಗೆ ಮೇಯರ್ ಸುತ್ತಾಟ ಶುರು. ಜನಸಾಮಾನ್ಯರು ಅವರ ಮೊಬೈಲ್ಗೆ ಯಾವಾಗ ಬೇಕಾದರೂ ಕರೆಮಾಡಿ ದೂರು ಕೊಡಲು ಅವರಿಂದ ಮುಕ್ತ ಆಹ್ವಾನವಿದೆ. ದೂರು ಬಂದ ಬಡಾವಣೆಗಳಿಗೆ ಅವರ ಸವಾರಿ ಹೊರಡುತ್ತದೆ. ಜನ ಅನುಭವಿಸುವ ತೊಂದರೆಗಳನ್ನು ಟಿಪ್ಪಣಿ ಮಾಡಿಕೊಂಡು ಬಂದು, ತಕ್ಷಣ ಬಗೆಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ರವಾನಿಸುತ್ತಾರೆ. ಸಮಸ್ಯೆ ಬಗೆಹರಿದ ವಿಷಯವಾಗಿ ಜನರಿಂದಲೇ ಕ್ರಿಯೆ ಜರುಗಿದ ವರದಿಯನ್ನು (ಎಟಿಆರ್) ಪಡೆಯುತ್ತಾರೆ.

ಪ್ರತಿದಿನ ಒಂದೊಂದು ವಾರ್ಡ್ನಲ್ಲಿ ಆಯಾ ವಾರ್ಡ್ ಸದಸ್ಯರು, ಅಧಿಕಾರಿಗಳನ್ನು ಕರೆದುಕೊಂಡು ಬೆಳಿಗ್ಗೆ 8.30ರಿಂದ 10ರವರೆಗೆ ಜನಸ್ಪಂದನ ಪಾದಯಾತ್ರೆ ನಡೆಸುತ್ತಾರೆ. ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ವ್ಯಕ್ತವಾದ ಅಭಿಪ್ರಾಯ ಕ್ರೋಡೀಕರಿಸಿ ಯಾವ ಸಮಸ್ಯೆಗೆ ಏನು ಪರಿಹಾರ ಎಂಬುದನ್ನು ಅವರು ಸ್ಥಳದಲ್ಲೇ ನಿರ್ಧರಿಸುತ್ತಾರೆ. ಕಾಮಗಾರಿ ಪೂರೈಸಲು ಆಗಲೇ ಕಾಲಮಿತಿಯೂ ನಿರ್ಧಾರವಾಗುತ್ತದೆ.

`ನೀರು, ನೈರ್ಮಲ್ಯ, ಬೀದಿದೀಪ ಹಾಗೂ ರಸ್ತೆಯನ್ನು ಸಮರ್ಪಕವಾಗಿ ಒದಗಿಸಿದರೆ ಸಾಕು, ಸ್ಥಳೀಯ ಆಡಳಿತ ತನ್ನ ಕರ್ತವ್ಯದಲ್ಲಿ ಸಂಪೂರ್ಣ ಯಶಸ್ವಿಯಾದಂತೆ~ ಎಂಬ ಬಲವಾದ ನಂಬಿಕೆ ಇಟ್ಟುಕೊಂಡಿರುವ ಡಾ. ಪಾಟೀಲ, ಪಾಲಿಕೆ ಅಂಗಳದಲ್ಲಿ ಸದ್ದಿಲ್ಲದೆ ಸಂಚಲನ ಮೂಡಿಸಿದ್ದಾರೆ. `ಸಮಸ್ಯೆಗಳೆಂದರೆ ಸೆರಗಿನ ಕೆಂಡ. ಅವುಗಳನ್ನು ಜೀವಂತ ಇಟ್ಟುಕೊಂಡಷ್ಟೂ ತಲೆನೋವು ಜಾಸ್ತಿ. ಪರಿಹಾರ ಒದಗಿಸಿಕೊಟ್ಟರೆ ಜನ ನಿಮ್ಮನ್ನು ಸದಾ ನೆನೆಯುತ್ತಾರೆ~ ಎಂದು ಅಧಿಕಾರಿಗಳನ್ನು ಹುರಿದುಂಬಿಸುತ್ತಾರೆ.

`ಆಡಳಿತವನ್ನು ಜನರ ಮಧ್ಯೆ ಕೊಂಡೊಯ್ಯಬೇಕು; ಅವರಿಗೆ ಬೇಕಾದ ಸೌಕರ್ಯಗಳನ್ನು ಅವರೇ ನಿರ್ಧರಿಸಬೇಕು~ ಎಂಬುದು ಸಮಾಜವಾದಿ ಹಿನ್ನೆಲೆಯ ಈ `ಡಾಕ್ಟ್ರು~ ಪ್ರತಿಪಾದಿಸಿಕೊಂಡು ಬಂದ ಧ್ಯೇಯ. ಅಂತಹ ಆಡಳಿತಕ್ಕೇ ಅವರೀಗ ಒತ್ತು ನೀಡುತ್ತಿದ್ದಾರೆ. ಎಂಬಿಬಿಎಸ್ ಓದಿರುವ ಈ ವೈದ್ಯ, ನಾಗರಿಕರ ಸಮಸ್ಯೆಗಳಿಗೆ `ಚುಚ್ಚುಮದ್ದು~ ನೀಡಲು ಆರಂಭಿಸಿದ್ದಾರೆ.

ನಾಗರಿಕರಿಗೆ ಅಗತ್ಯವಾದ ತಿಳಿವಳಿಕೆ ನೀಡುವಂತಹ ಕೆಲಸವನ್ನೂ ಅವರು ಮಾಡುತ್ತಿದ್ದಾರೆ. ಧಾರವಾಡದ ದಾನೇಶ್ವರಿ ಕಾಲೊನಿಗೆ ರಸ್ತೆ ನಿರ್ಮಾಣಕ್ಕಾಗಿ ಹಣ ಮಂಜೂರಾಗಿತ್ತು. ರಸ್ತೆಗಿಂತ ಒಳಚರಂಡಿ ಮುಖ್ಯ. ನೈರ್ಮಲ್ಯ ಇಲ್ಲದೆ ಬದುಕುವುದು ಹೇಗೆ ಎಂಬ ಪ್ರಶ್ನೆಯನ್ನು ಮುಂದಿಟ್ಟರು ಮೇಯರ್. ಬಡಾವಣೆ ಜನಕ್ಕೂ ಅವರ ಪ್ರಶ್ನೆಯಲ್ಲಿ ಅರ್ಥ ಇದೆ ಎನಿಸಿತು. ಈಗ ಮಾದರಿ ಎನಿಸುವಂತಹ ಒಳಚರಂಡಿ ವ್ಯವಸ್ಥೆ ನಿರ್ಮಾಣವಾಗಲು ವೇದಿಕೆ ಸಜ್ಜಾಗಿದೆ.

ಬಳಸಿದ ನೀರು, ಕಸ ಸಮರ್ಪಕವಾಗಿ ವಿಲೇವಾರಿ ಆಗಬೇಕು. ಅದರಿಂದ ಅನಿಲವನ್ನೂ ಉತ್ಪಾದಿಸಬೇಕು. ಮಿಕ್ಕ ತ್ಯಾಜ್ಯದಿಂದ ಸಾವಯವ ಗೊಬ್ಬರವನ್ನು ತೆಗೆಯಬೇಕು. ಇದರಿಂದ ತ್ಯಾಜ್ಯದ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಬೇಕು ಎಂಬ ಡಾಕ್ಟ್ರ ಕನಸು ಶೀಘ್ರವೇ ದಾನೇಶ್ವರಿ ಕಾಲೊನಿಯಲ್ಲಿ ನನಸಾಗಲಿದೆ.

`ನಗರದ ಶೇ 30ರಷ್ಟು ಪ್ರದೇಶದಲ್ಲಿ ಜನಸಾಂದ್ರತೆ ತುಂಬಾ ಇದೆ. ಶೇ 15ರಷ್ಟು ಪ್ರದೇಶ ಗ್ರಾಮೀಣ ಭಾಗವಾಗಿದೆ. ಉಳಿದ ಶೇ 55ರಷ್ಟು ಪ್ರದೇಶ ವಿಸ್ತರಿತ ಬಡಾವಣೆಗಳಲ್ಲಿ ಹರಿದು ಹಂಚಿಹೋಗಿದೆ. ಅವುಗಳ ಸಮಸ್ಯೆ ಸ್ವರೂಪ ವಿಭಿನ್ನವಾಗಿದ್ದು, ಅದಕ್ಕೆ ತಕ್ಕಂತೆ ಕಾರ್ಯ ಯೋಜನೆ ಸಿದ್ಧಪಡಿಸಬೇಕಿದೆ~ ಎನ್ನುತ್ತಾರೆ ಡಾ. ಪಾಟೀಲ.

`ನೈರ್ಮಲ್ಯದ ಪ್ರಮಾಣ ಹೆಚ್ಚಿದಷ್ಟೂ ಹಂದಿಗಳ ಸಂಖ್ಯೆ ಇಳಿಮುಖವಾಗುತ್ತದೆ. ಮೂಲದಲ್ಲೇ ಸಮಸ್ಯೆಯನ್ನು ಚಿವುಟಿಹಾಕುವ ಯತ್ನ ಆರಂಭಿಸಲಿದ್ದೇವೆ~ ಎಂದೆನ್ನುವ ಅವರು, ಕಸದಡಬ್ಬಿ ಮುಕ್ತ ಅವಳಿನಗರ ನಿರ್ಮಾಣದ ಕನಸು ಕಾಣುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.