ಬುಧವಾರ, ಜೂನ್ 23, 2021
29 °C

ಸಕಾಲ: 2 ದಿನದ್ಲ್ಲಲಿ 1,242 ಅರ್ಜಿ ಇತ್ಯರ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿಗದಿತ ಸಮಯದೊಳಗೇ ವಿವಿಧ ಸರ್ಕಾರಿ ಸೇವೆಗಳನ್ನು ಪಡೆಯುವ `ಸಕಾಲ~ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯೋಜನೆ ಚಾಲನೆಗೊಂಡ ಎರಡು ದಿನದಲ್ಲೇ 11 ಇಲಾಖೆಗಳ ವಿವಿಧ ಸೇವೆಗಳಿಗಾಗಿ 3,957 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅವುಗಳಲ್ಲಿ 1,242 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ.ಎಲ್ಲಾ ಇಲಾಖೆಗಳು ತಾವು ಒದಗಿಸುವ ಸೇವೆಗಳ ಪಟ್ಟಿ ಮತ್ತು ಅರ್ಜಿ ಇತ್ಯರ್ಥಕ್ಕೆ ನಿಗದಿಪಡಿಸಿರುವ ಅವಧಿ, ಪಾವತಿಸುವ ದಂಡ ಮತ್ತು ಕಾಲಮಿತಿಯ ವಿವರಗಳನ್ನು ಈಗಾಗಲೇ ಪ್ರಕಟಿಸಿವೆ. ಸಾಧ್ಯ ಇರುವ ಕಡೆ ಅರ್ಜಿ ನಮೂನೆಗಳನ್ನು ಕಂಪ್ಯೂಟರೀಕರಣಗೊಳಿಸಲಾಗಿದ್ದು, ಉಳಿದೆಡೆ ಕೈಬರಹ ಅಥವಾ ಬೆರಳಚ್ಚು ಪ್ರತಿಗಳ ಮೂಲಕವೂ ಅರ್ಜಿ ಸಲ್ಲಿಸಬಹುದು. `ಸಕಾಲ~ ಸೇವೆ ಪಡೆಯಲು ಅನುವಾಗುವಂತೆ ಕಾಲ್‌ಸೆಂಟರ್ ಅನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದ್ದು,080-44554455 ದೂರವಾಣಿ ಸಂಖ್ಯೆಯ ಮೂಲಕ ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.