‘ಸಚಿನ್ ಶತಕ ಗಳಿಸಿದಾಗಲೆಲ್ಲಾ ಭಾರತ ಸೋಲುತ್ತೆ, ಸಚಿನ್ ಮ್ಯಾಚ್ ವಿನ್ನರ್ ಅಲ್ಲ, ಅವರು ಆಡಿದರೆ ಉಳಿದವರು ವಿಫಲರಾಗುತ್ತಾರೆ’ಕ್ಯಾಬ್ ಡ್ರೈವರ್ ಮಾತನಾಡಿಸಿ ನೋಡಿ. ಆಟೋ ಚಾಲಕರ ನುಡಿಗಳನ್ನು ಸುಮ್ಮನೇ ಆಲಿಸಿ. ದರ್ಶಿನಿ, ಆಫೀಸ್, ಬಸ್ ನಿಲ್ದಾಣಗಳಲ್ಲಿ ಕ್ರಿಕೆಟ್ ಬಗ್ಗೆ ಚರ್ಚೆ ಮಾಡುವವರತ್ತ ಒಮ್ಮೆ ಕಿವಿಕೊಡಿ...!

‘ಇವತ್ತು ಸಚಿನ್ ಶತಕ ಹೊಡೆದಿದ್ದರಿಂದಲೇ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೋತು ಹೋಯಿತು’ ಎಂಬಂತಹ ಮಾತುಗಳು ಅವರ ನಡುವೆ ಹರಿದಾಡುತ್ತಿರುತ್ತವೆ.ಸಚಿನ್ ಬಗ್ಗೆ ಅವರಿಗೇನು ಅಭಿಮಾನ ಇಲ್ಲ ಎನ್ನುವುದು ಇದರ ಅರ್ಥವಲ್ಲ. ಅವರನ್ನು ತುಂಬಾ ಪ್ರೀತಿಸುತ್ತಾರೆ.ಸಚಿನ್ ಬಾರಿಸುವ ಪ್ರತಿ ಬೌಂಡರಿಗಳನ್ನು ಖುಷಿಯಿಂದ ಸವಿದಿರುತ್ತಾರೆ. ಸಿಕ್ಸರ್ ಎತ್ತಿದಾಗ ಜಿಗಿದಾಡಿರುತ್ತಾರೆ. ಶತಕ ಗಳಿಸಿದಾಗ ಚಪ್ಪಾಳೆ ತಟ್ಟಿರುತ್ತಾರೆ!

ಆದರೆ ಭಾರತ ತಂಡ ಸೋತಾಗ ಮಾತ್ರ ಸಚಿನ್ ಶತಕ ಗಳಿಸಿದ್ದೇ ತಪ್ಪು ಎನ್ನುವಂತೆ ಮಾತನಾಡುತ್ತಾರೆ. ಈಗ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೈ ಆದ ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನೇ ತೆಗೆದುಕೊಳ್ಳಿ, ನಾಗಪುರದಲ್ಲಿ ಸೋಲುಕಂಡ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯವನ್ನೇ ಗಮನಿಸಿ...

ಈ ಎರಡೂ ಪಂದ್ಯಗಳಲ್ಲಿ ಚಾಂಪಿಯನ್ ಬ್ಯಾಟ್ಸ್ಮನ್ ಶತಕ ಹೊಡೆದಿದ್ದರು. ಆದರೆ ಅಭಿಮಾನಿಗಳಲ್ಲಿ ಕ್ರಿಕೆಟ್ ಬಗ್ಗೆ ಇರುವ ಪರಮ ಅಭಿಮಾನವೋ? ಭ್ರಮೆಯೋ? ಸೋಲಿನ ನಿರಾಶೆಯಿಂದ ಉದ್ಭವಿಸುವ ಪ್ರತಿಕ್ರಿಯೆಯೋ? ಗೊತ್ತಾಗುತ್ತಿಲ್ಲ. ‘ಸಚಿನ್ ಶತಕ ಗಳಿಸಿದಾಗಲೆಲ್ಲಾ ಭಾರತ ಸೋಲುತ್ತೆ’ ಎಂಬ ಟೀಕೆಗಳು ಕೇಳಿಬಂದವು.

ಇರಲಿ, ಕ್ರಿಕೆಟ್ ಬಗ್ಗೆ ಅವರಿಗೆ ಇರುವ ಅದಮ್ಯ ಪ್ರೀತಿಯಿಂದ ಈ ರೀತಿ ಮಾತನಾಡುತ್ತಿರಬಹುದು ಎಂದುಕೊಳ್ಳೋಣ. ಆದರೂ ನಿಜ ಏನು ಎಂಬುದು ಗೊತ್ತಾಗಬೇಕಲ್ಲವೇ?
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸಚಿನ್ ಔಟಾದಾಗ ಭಾರತ 39.4 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 267 ರನ್ ಗಳಿಸಿತ್ತು. ಆದರೆ 48.4 ಓವರ್ಗಳಲ್ಲಿ 296 ರನ್ಗಳಿಗೆ ಆಲೌಟಾಯಿತು. ಹಾಗೇ, ಇಂಗ್ಲೆಂಡ್ ವಿರುದ್ಧ 338 ರನ್ ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಟೈ ಆದ ಈ ಪಂದ್ಯದಲ್ಲಿ ದೋನಿ ಪಡೆ ಬ್ಯಾಟಿಂಗ್ ವೇಳೆ 37 ರನ್ಗಳ ಅಂತರದಲ್ಲಿ ಕೊನೆಯ 8 ವಿಕೆಟ್ ಕಳೆದುಕೊಂಡಿತ್ತು.ಇದಕ್ಕೆ ಯಾರು ಹೊಣೆ? ಈ ಪಂದ್ಯಗಳಲ್ಲಿ ಭಾರತ ಗೆಲ್ಲಲು ವಿಫಲವಾಗಿದ್ದಕ್ಕೆ ಸಚಿನ್ ಶತಕ ಕಾರಣವೇ? ಅಕಸ್ಮಾತ್ ತೆಂಡೂಲ್ಕರ್ ಶತಕ ಗಳಿಸದಿದ್ದರೆ ಭಾರತದ ಗತಿ ಏನಾಗಿರುತಿತ್ತು ಎಂದು ಯಾರಾದರೂ ಯೋಚಿಸಿದ್ದಾರೆಯೇ?

‘ಈ ಪ್ರೇಕ್ಷಕರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ’ ಎಂದು ಢಾಕಾದಲ್ಲಿ ವಿಂಡೀಸ್ ಆಟಗಾರರಿದ್ದ ಬಸ್ಸಿನ ಮೇಲೆ ಕಲ್ಲು ಬಿದ್ದಿದ್ದಾಗ ಎಂ.ಎಸ್.ದೋನಿ ಪ್ರತಿಕ್ರಿಯಿಸಿದ್ದರು. ಅದು ನಿಜ ಎನಿಸುತ್ತಿದೆ.ದಶಕ ಕಾಲ ಭಾರತ ತಂಡ ಸಚಿನ್ ಅವರ ಮೇಲೆ ಅವಲಂಬಿತವಾಗಿತ್ತು. ಸಚಿನ್ ಔಟ್ ಆದರೆ ಭಾರತ ತಂಡದ ಕಥೆಯೇ ಮುಗಿದು ಹೋಯಿತು ಎನ್ನುವ ಕಾಲವಿತ್ತು. 1991ರಿಂದ 2011ರ ಅವಧಿಯಲ್ಲಿ ಭಾರತ 13 ಟ್ರೋಫಿ ಜಯಿಸಿದೆ. 11 ಟ್ರೋಫಿಗಳಲ್ಲಿ ಸಚಿನ್ ಕೊಡುಗೆ ಇದೆ.

ನಿಮಗೆ ಗೊತ್ತಿರಬಹುದು. ಅವರ 48 ಏಕದಿನ ಶತಕಗಳಲ್ಲಿ 33 ಬಾರಿ ಭಾರತ ಗೆಲುವು ಸಾಧಿಸಿದೆ. ಒಮ್ಮೆ ಟೈ, ಮತ್ತೊಮ್ಮೆ ಫಲಿತಾಂಶ ಬಂದಿಲ್ಲ. ಕ್ರಿಕೆಟ್ ಇತಿಹಾಸದಲ್ಲಿ ಯಾರಾದರೂ 33 ಶತಕ ಗಳಿಸಿ ತಂಡವನ್ನು ಗೆಲ್ಲಿಸಿ ಕೊಟ್ಟ ಮತ್ತೊಂದು ಉದಾಹರಣೆ ಕೊಡಿ. ಅಷ್ಟು ಶತಕಗಳನ್ನು ಗಳಿಸಿದ ಮತ್ತೊಬ್ಬ ಆಟಗಾರನೇ ಇಲ್ಲ. ಇನ್ನೆಲ್ಲಿ ಆ ಪ್ರಶ್ನೆಗೆ ಉತ್ತರ ಸಿಗುತ್ತೆ!
ಏಕದಿನ ಕ್ರಿಕೆಟ್ನಲ್ಲಿ ಸಚಿನ್ ಬಿಟ್ಟರೆ ಅತಿ ಹೆಚ್ಚು ಶತಕ ಗಳಿಸಿದ ಎರಡನೇ ಆಟಗಾರ ಪಾಂಟಿಂಗ್. ಅವರು ಗಳಿಸಿರುವ ಶತಕ 29. ಅಂದರೆ ಎಲ್ಲಿಯಾ 48, ಎಲ್ಲಿಯಾ 29?
37 ವರ್ಷ ವಯಸ್ಸಿನ ಸಚಿನ್ ತಮ್ಮ ಕ್ರಿಕೆಟ್ ಜೀವನದ 22ನೇ ಸಂವತ್ಸರದಲ್ಲೂ ಎಲ್ಲರನ್ನು ಮೀರಿಸಿ ನಿಲ್ಲುತ್ತಿದ್ದಾರೆ. ಅವರೊಂದಿಗೆ ಕ್ರಿಕೆಟ್ ಆಡಲು ಶುರು ಮಾಡಿದವರು ಏನೇನಾಗಿದ್ದಾರೋ ಗೊತ್ತಿಲ್ಲ.

ತೆಂಡೂಲ್ಕರ್ ಪ್ರತಿಬಾರಿ ಕಣಕ್ಕಿಳಿದಾಗ ಅವರಿಂದ ಶತಕ ನಿರೀಕ್ಷೆ ಮಾಡುತ್ತೇವೆ. ಪ್ರತಿ ಬಾರಿ ಪಂದ್ಯ ಗೆದ್ದುಕೊಡಬೇಕು ಎಂಬ ಒತ್ತಡ ಹಾಕುತ್ತೇವೆ. ಆದರೆ ಉಳಿದ 10 ಮಂದಿ ತಂಡದಲ್ಲಿದ್ದಾರೆ ಎಂಬುದನ್ನು ಮರೆತುಬಿಡುತ್ತೇವೆ. ಏಕೆ ಹೀಗೆ?ಕ್ರಿಕೆಟ್ ಎಂಬುದು ತಂಡದ ಆಟ. 11 ಮಂದಿಯ ಕೊಡುಗೆ ಇದ್ದಾಗ ಮಾತ್ರ ಗೆಲ್ಲಲು ಸಾಧ್ಯ. ಅಕಸ್ಮಾತ್ ಒಬ್ಬ ಆಟಗಾರ ಪಂದ್ಯ ಗೆದ್ದುಕೊಡಬಹುದು ಎಂದರೆ ಉಳಿದ 10 ಮಂದಿ ಏಕೆ ಬೇಕು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.