ಶುಕ್ರವಾರ, ಮೇ 14, 2021
32 °C
ಕಾಂಗ್ರೆಸ್ ಮುಖಂಡರ ಪರಸ್ಪರ ವಾಗ್ವಾದ

ಸಚಿವರ ಎದುರೇ ಕಾರ್ಯಕರ್ತರ ತಳ್ಳಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಭವನದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸಮ್ಮುಖದಲ್ಲೇ ಕಾರ್ಯಕರ್ತರು ಪರಸ್ಪರ ವಾಗ್ವಾದ, ತಳ್ಳಾಟದಲ್ಲಿ ತೊಡಗಿದ ಘಟನೆ ನಡೆಯಿತು. ಇದೇ ವೇಳೆ ಕೆಲವರು ಜಿಲ್ಲಾ ಕಾಂಗ್ರೆಸ್ ಸಮಿತಿ ಮುಖಂಡರ ವಿರುದ್ಧ ತಮ್ಮ ಸಿಟ್ಟನ್ನು ಹೊರಹಾಕಿದರು.ಮಧ್ಯಾಹ್ನ 12 ಗಂಟೆ ವೇಳೆಗೆ ಸಚಿವರು ಭವನಕ್ಕೆ ಬಂದು ವೇದಿಕೆ ಏರಿದ ಸಂದರ್ಭದಲ್ಲಿ ಅವರಿಗೆ ಅಭಿನಂದನೆ ಹೇಳುವ ಸಲುವಾಗಿ ಹಲವರು ಸ್ಥಳೀಯ ಮುಖಂಡರು ವೇದಿಕೆ ಏರಿದರು. ಆ ಸಂದರ್ಭದಲ್ಲಿ ರಾಜ್ಯ ಮತ್ತು ಜಿಲ್ಲಾ ಮುಖಂಡರನ್ನು ಹೊರತುಪಡಿಸಿ ಎಲ್ಲರೂ ವೇದಿಕೆಯಿಂದ ಇಳಿಯಬೇಕು ಎಂದು ಧ್ವನಿವರ್ಧಕ ಮೂಲಕ ಸೂಚಿಸಲಾಯಿತು.ಅದಕ್ಕೆ ಆಕ್ಷೇಪಿಸಿದ ಮುಖಂಡರಾದ ಅಬ್ದುಲ್ ಖಯ್ಯೂಂ, ಚಂಗೋಲಿ ನಾರಾಯಣಸ್ವಾಮಿ ತಮ್ಮ ಅಸಮಾಧಾನವನ್ನು ಹೊರಹಾಕಿದರು. ತಾರತಮ್ಯ ಮಾಡುತ್ತಿರುವ ಜಿಲ್ಲಾ ಕಾಂಗ್ರೆಸ್ ಸಮಿತಿಯ ಎಲ್ಲರೂ ಕೆಳಗಿಳಿಯಬೇಕು ಎಂದು ಕೂಗಿದರು. ಅವರ ಮಾತಿಗೆ ಇನ್ನಷ್ಟು ಮಂದಿ ದನಿಗೂಡಿಸಿದ್ದನ್ನು ವೇದಿಕೆಯ ಮೇಲಿದ್ದ ಮುಖಂಡರು ವಿರೋಧಿಸಿ ವಾಗ್ವಾದಕ್ಕೆ ಮುಂದಾದ ಸಂದರ್ಭ ಬಿರುಸು ನುಡಿಗಳು ಕೇಳಿಬಂದವು. ವೇದಿಕೆ ಮೇಲಿದ್ದವರನ್ನು ಕೆಳಕ್ಕೆ ತಳ್ಳುವ ಪ್ರಯತ್ನ ನಡೆದಾಗ ತಳ್ಳಾಟ ಏರ್ಪಟ್ಟಿತ್ತು. ವಾಗ್ವಾದ ತಾರಕಕ್ಕೆ ಏರುತ್ತಿದ್ದ ಕ್ಷಣದಲ್ಲೇ ಭವನವನ್ನು ಪ್ರವೇಶಿಸಿದ ಡಿಎಸ್‌ಪಿ ಶ್ರೀಹರಿ ಬರಗೂರು ನೇತೃತ್ವದ ತಂಡದವರು ಕಾರ್ಯಕರ್ತರನ್ನು ನಿಯಂತ್ರಿಸಿದರು. ಕೆಲವೇ ನಿಮಿಷಗಳಲ್ಲಿ ಸಚಿವರು ಸಭೆಯಿಂದ ನಿರ್ಗಮಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.