ಹುಬ್ಬಳ್ಳಿ: ಪ್ರತಿ ವರ್ಷ ರೈತ ಮೇಳ, ಬೀಜ ಮಾರಾಟ, ಕೃಷಿ ತಾಂತ್ರಿಕತೆ ವರ್ಗಾವಣೆ ಕುರಿತಾದ

ತರಬೇತಿ ಶಿಬಿರಗಳ ಮೂಲಕ ರೈತಾಪಿ ವರ್ಗದ ನೆರವಿಗೆ ನಿಲ್ಲುತ್ತಿದ್ದ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಈ ಬಾರಿ ಮುಂಗಾರು ಹಂಗಾಮು ಆರಂಭವಾಗುತ್ತಿದ್ದಂತೆಯೇ `ಸಮಗ್ರ ಕೃಷಿ ಪದ್ಧತಿ' ಯೋಜನೆಯ ಜಾರಿಗೆ ಸಣ್ಣ ರೈತರ ಮನೆಯ ಅಂಗಳದಲ್ಲಿ ನಿಂತಿದೆ.

ಆರ್ಥಿಕವಾಗಿ ಹಿಂದುಳಿದಿರುವ ರೈತ ಕುಟುಂಬಗಳಿಗೆ ನೆರವು ನೀಡಲು ಕೃಷಿ ವಿಶ್ವವಿದ್ಯಾಲಯ ಪ್ರಸಕ್ತ ವರ್ಷ ದಿಂದ `ಸಮಗ್ರ ಕೃಷಿ ಪದ್ಧತಿ' ಅನುಷ್ಠಾನ ಕೈಗೆತ್ತಿಕೊಂಡಿದೆ. ಮಳೆ ಆರಂಭವಾಗುತ್ತಿದ್ದಂತೆಯೇ ವಿವಿ ಆಡಳಿತ ಸಿದ್ಧತೆ ಆರಂಭಿಸಿದೆ.

ವಿವಿ ವ್ಯಾಪ್ತಿಯ ಧಾರವಾಡ, ಗದಗ, ಹಾವೇರಿ, ಉತ್ತರಕನ್ನಡ, ವಿಜಾಪುರ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದ್ದು, ಇದಕ್ಕೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಲಿದೆ.

ಏನಿದು ಸಮಗ್ರ ಕೃಷಿ ಪದ್ಧತಿ: ಸಣ್ಣ ರೈತರು ಬೇಸಾಯದೊಂದಿಗೆ ಹೈನುಗಾರಿಕೆ, ಮೇವು ಬೆಳೆಯುವುದು, ಜೇನು ಸಾಕಣೆ, ಅರಣ್ಯೀಕರಣ, ಎರೆಹುಳು ಗೊಬ್ಬರ ತಯಾರಿಕೆ, ಪುಷ್ಪೋದ್ಯಮ, ತರಕಾರಿ ಬೆಳೆಯುವುದು, ವಿಶೇಷ ಸಂದರ್ಭಗಳಲ್ಲಿ ಮೀನುಗಾರಿಕೆಯಂತಹ ಉಪ ಆದಾಯ ಮೂಲ ಕಂಡುಕೊಳ್ಳುವುದು ಸಮಗ್ರ ಕೃಷಿ ಪದ್ಧತಿಯಲ್ಲಿ ಅಡಕವಾಗಿದೆ.

ಜೊತೆಗೆ ಬಂಜರು ಭೂಮಿ ಅಭಿವೃದ್ಧಿ, ಮಳೆ ನೀರು ಇಂಗಿಸುವುದು, ಮಣ್ಣಿನ ಸವಕಳಿ ತಡೆಯುವುದರ ಕುರಿತು ರೈತರಿಗೆ ಮಾಹಿತಿ ನೀಡುವುದರೊಂದಿಗೆ ಹನಿ ನೀರಾವರಿ ಅಳವಡಿಸಲು ನೆರವು ನೀಡಲಾಗುತ್ತದೆ. ರೋಗ, ಬರ, ಪ್ರವಾಹ ಸೇರಿದಂತೆ ಪ್ರಾಕೃತಿಕ ವಿಕೋಪಗಳ ಕಾರಣಕ್ಕೆ ರೈತರು ಕೃಷಿಯಲ್ಲಿ ನಷ್ಟ ಮಾಡಿಕೊಂಡರೆ ಬೇರೆ ಮೂಲಗಳಿಂದ ಆದಾಯ ಕಂಡುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕದಿರಲಿ ಎಂಬುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಯೋಜನೆಯ ಅನುಷ್ಠಾನದಿಂದ ಸಣ್ಣ ರೈತರಿಗೆ ವರ್ಷವಿಡೀ ಆದಾಯ ದೊರೆಯಲಿದೆ.

ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿ: ಯೋಜನೆ ಅನುಷ್ಠಾನಕ್ಕೆ ರೈತ ಸಂಪರ್ಕ ಕೇಂದ್ರವೊಂದರ ವ್ಯಾಪ್ತಿಯ 100 ರೈತ ಕುಟುಂಬಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಪ್ರತಿ ಕುಟುಂಬಕ್ಕೆ 27 ಸಾವಿರ ರೂಪಾಯಿವರೆಗೆ ಧನ ಸಹಾಯ ನೀಡಲಾಗುತ್ತದೆ.

ಪ್ರತಿ ಜಿಲ್ಲೆಯಿಂದ ಮೂರು ರೈತ ಸಂಪರ್ಕ ಕೇಂದ್ರಗಳನ್ನು ಆಯ್ಕೆ ಮಾಡಿಕೊಂಡು ಒಂದು ವರ್ಷದ ಗುರಿ ನಿಗದಿಪಡಿಸಿ ಮುಂಗಾರು ಹಾಗೂ ಹಿಂಗಾರು ಹಂಗಾಮು ಮುಗಿಯುವುದರೊಳಗಾಗಿ ಯೋಜನೆ ಜಾರಿಗೊಳಿಸಲಾಗುತ್ತದೆ.

ಪ್ರತಿ ರೈತ ಸಂಪರ್ಕ ಕೇಂದ್ರಕ್ಕೆ 27 ಲಕ್ಷ ರೂಪಾಯಿಯಂತೆ ಜಿಲ್ಲೆಯೊಂದಕ್ಕೆ 81ಲಕ್ಷ ರೂಪಾಯಿ ಯೋಜನೆಯಡಿ ವ್ಯಯಿಸಲಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿ ಹಾಗೂ ಕಲಘಟಗಿ ತಾಲ್ಲೂಕಿನ ಹಿಂಡಸಗೇರಿ ರೈತ ಸಂಪರ್ಕ ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ.

ಇನ್ನೊಂದು ಕೇಂದ್ರದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎನ್ನುತ್ತಾರೆ ಜಿಲ್ಲೆಯಲ್ಲಿ ಯೋಜನೆಯ ಮುಖ್ಯಸ್ಥರಾಗಿರುವ ಕೃಷಿ ವಿಶ್ವವಿದ್ಯಾಲಯದ ಡೀನ್ ಡಾ.ಜಿ.ಎಸ್.ದಾಸೋಗ್.

ಕೃಷಿ ವಿವಿ ಪಾತ್ರ: ಯೋಜನೆಯ ಅನುಷ್ಠಾನದ ಹೊಣೆ ಹೊತ್ತಿರುವ ಕೃಷಿ ವಿಶ್ವವಿದ್ಯಾಲಯ ರೈತರಿಗೆ ತಾಂತ್ರಿಕ ಹಾಗೂ ಆರ್ಥಿಕ ನೆರವು ನೀಡಲಿದೆ. ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಗ್ರಾಮ ಸಭೆ ನಡೆಸಿ ಎರಡು ಹೆಕ್ಟೇರ್ (ಐದು ಎಕರೆ) ಜಮೀನು ಹೊಂದಿರುವ ರೈತರನ್ನು ಗುರುತಿಸಿ ಫಲಾನುಭವಿಗಳಾಗಿ ಆಯ್ಕೆ ಮಾಡಲಾಗುತ್ತದೆ.

ಉಪ ಕಸುಬುಗಳನ್ನು ನಿರ್ವಹಿಸಲು ರೈತ ಕುಟುಂಬಗಳಿಗೆ ತರಬೇತಿ, ಪ್ರಾತ್ಯಕ್ಷಿಕೆ ನೀಡಲಿದ್ದು, ಆರ್ಥಿಕ ನೆರವು ಕಲ್ಪಿಸಲಿದೆ. ಗ್ರಾಮಮಟ್ಟದಲ್ಲಿ, ರೈತ ಸಂಪರ್ಕ ಕೇಂದ್ರ ಹಾಗೂ ವಿಶ್ವವಿದ್ಯಾಲಯ ಹೀಗೆ ಮೂರು ಹಂತದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ.

ಸಮಗ್ರ ಕೃಷಿ ಯೋಜನೆ ಅನುಷ್ಠಾನಗೊಂಡ ಗ್ರಾಮಗಳಿಗೆ ತೆರಳಿ ಕೃಷಿ ವಿವಿ ತಜ್ಞರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ರೈತರಿಗೆ ನೆರವು ನೀಡಲಿದ್ದಾರೆ. ಪ್ರತಿ ರೈತ ಸಂಪರ್ಕ ಕೇಂದ್ರಗಳ ಉಸ್ತುವಾರಿಗೆ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಲಾಗುತ್ತಿದೆ. ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಯೋಜನೆ ಜಾರಿಗೆ ನೆರವಾಗಲಿದ್ದಾರೆ.

ಏಳು ಜಿಲ್ಲೆಗಳ ನಿರ್ವಹಣೆಯ ಹೊಣೆ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರಿಗೆ ವಹಿಸಲಾಗಿದೆ. ವಿವಿಯ ವಿಸ್ತರಣಾ ವಿಭಾಗದ ನಿರ್ದೇಶಕ ಡಾ.ಕೃಷ್ಣ ನಾಯಕ್ ಯೋಜನೆಯ ನೋಡಲ್ ಅಧಿಕಾರಿಯಾಗಿದ್ದು, ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿ ಅನುಷ್ಠಾನದ ಜವಾಬ್ದಾರಿ ಹೊತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.