ಭಾನುವಾರ, ಮೇ 16, 2021
26 °C

`ಸತತ ಅಭ್ಯಾಸದಿಂದ ಅಧಿಕ ಅಂಕ ಗಳಿಕೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಮಂಗಲ: `ತರಗತಿಗಳಲ್ಲಿ ಗಮನವಿಟ್ಟು ಪಾಠ-ಪ್ರವಚನ ಕೇಳಿ, ಸತತ ಅಭ್ಯಾಸ ಮತ್ತು ಪಾಲಕರ ಪ್ರೋತ್ಸಾಹದಿಂದ ಅಧಿಕ ಅಂಕ ಗಳಿಸಲು ಸಾಧ್ಯವಾಯಿತು' ಎಂದು ಎಸ್ಸೆಸ್ಸೆಲ್ಸಿ ಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ವಿಶಾಲ್ ಶಾಲೆಯ ವಿದ್ಯಾರ್ಥಿನಿ ಬಿ.ಎಸ್. ಪರಿಣಿತ ಅನುಭವ ಹಂಚಿಕೊಂಡರು.ಪಟ್ಟಣದ ವಿಶಾಲ್ ಆಂಗ್ಲ ಶಾಲೆಯಲ್ಲಿ ಈಚೆಗೆ ಏರ್ಪಡಿಸಿದ್ದ ಶಾಲಾ ಪ್ರಾರಂಭೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಶಾಲೆಯ ಸಂಸ್ಥಾಪಕ ಟಿ.ಕೆ.ನರಸೇಗೌಡ ಸನ್ಮಾನಿಸಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿಯೂ ಶೇ 100 ಫಲಿತಾಂಶದೊಂದಿಗೆ ಅತ್ಯುತ್ತಮ ಶ್ರೇಣಿ ಪಡೆಯುವ   ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.