ಬುಧವಾರ, ಜೂನ್ 23, 2021
28 °C

ಸತ್ತವನು ಎದ್ದು ಬಂದಾಗ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಷಿಕಾಗೊ(ಪಿಟಿಐ): ಮರಣ ಹೊಂದಿ­ದ್ದಾನೆ ಎಂದು ಘೋಷಿ­ಸ­­ಲಾ­ಗಿದ್ದ ಮಿಸಿ­ಸಿಪ್ಪಿ ಪ್ರಾಂತ್ಯದ ವಾಲ್ಟರ್ ವಿಲಿಯಮ್ಸ್ (೭೮) ಎಂಬ ರೈತ­ನೊಬ್ಬ ಅಂತ್ಯಸಂಸ್ಕಾರಕ್ಕೆ ಮೊದಲು ಎದ್ದು ಕುಳಿತ ವಿಸ್ಮಯ­ಕಾರಿ ಘಟನೆ ವರದಿಯಾಗಿದೆ.ವಾಲ್ಟರ್ ಸತ್ತಿರುವ ಸುದ್ದಿಯನ್ನು ಅವರ   ಕುಟುಂಬದ ಸದಸ್ಯರು ಅಂತ್ಯ­ಸಂಸ್ಕಾರ ನೆರವೇರಿಸುವ ‘ಪೋರ್ಟರ್‌ ಆ್ಯಂಡ್‌ ಸನ್ಸ್‌’ ಸಂಸ್ಥೆಗೆ ತಿಳಿಸಿ­ದರು.  ಹೋ­ವರ್ಡ್ ಎಂಬ ತನಿಖಾ­ಧಿಕಾರಿ   ಶವ ಪರೀಕ್ಷೆ ನಡೆಸಿ, ವಾಲ್ಟರ್ ಮೃತಪಟ್ಟಿರುವುದನ್ನು ಖಚಿತ­ಪಡಿಸಿ­ದ್ದರು ಎಂದು ಸಿಎನ್ಎನ್ ವರದಿ ತಿಳಿಸಿದೆ.ತನಿಖಾಧಿಕಾರಿ ಹೋವರ್ಡ್ ಮಾಮೂಲಿ ವಿಧಿ­ಗಳನ್ನು ಮುಗಿಸಿದ ಮೇಲೆ  ಚೀಲದಲ್ಲಿ ಹಾಕಿದ  ಶವ­ವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ  ಅಂತ್ಯ­ಕ್ರಿಯೆಯ ಸಿದ್ಧತೆ ಮಾಡಿ­­ಕೊಳ್ಳುತ್ತಿರುವಾಗ ವಾಲ್ಟರ್ ಕಾಲು ಚಲಿಸು­ತ್ತಿ­ರು­ವುದು,  ಮೆಲು ಉಸಿ­ರಾಟ ನಡೆಸು­ತ್ತಿ­ರುವುದು  ಗಮನಕ್ಕೆ ಬಂತು.ವಾಲ್ಟರ್‌ನನ್ನು ಆಸ್ಪತ್ರೆಗೆ ಸಾಗಿಸಿ ತುರ್ತು ನೆರವು ನೀಡ­ಲಾಯಿತು. ‘ಈ ಘಟನೆ­ಯಿಂದ ನಾನು ಸೇರಿದಂತೆ ಎಲ್ಲ­ರಿಗೂ ಆಘಾತವಾಗಿದೆ’ ಎಂದು ಹೋವರ್ಡ್ ತಿಳಿಸಿದ್ದಾರೆ. ಹೋವರ್ಡ್ ಆಯ್ಕೆಯಾದ ಒಬ್ಬ ತನಿಖಾ­ಧಿ­ಕಾರಿ­ಯೇ ಹೊರತೂ ವೈದ್ಯನಲ್ಲ. ಅಮೆರಿಕದ ಕೌಂಟಿ­ಗಳಲ್ಲಿ 1,500 ತನಿಖಾಧಿಕಾರಿ­ಗಳಿ­ದ್ದಾರೆ. ಇವರು ವೈದ್ಯಕೀಯ ಪ್ರಮಾಣಪತ್ರ ಹೊಂದಿರುವುದಿಲ್ಲ.ವಾಲ್ಟರ್ ಕುಟುಂಬದ ಸದಸ್ಯರು ಈ ವಿಚಿತ್ರ ಘಟನೆ ಬಳಿಕ ಸಂತೋಷ­ದಲ್ಲಿದ್ದಾರೆ. ಹೋವರ್ಡ್ ಈ  ಘಟನೆಯನ್ನು ವಿಸ್ಮಯ ಎಂದು ಕರೆದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.