ಮಂಗಳವಾರ, ಜೂನ್ 22, 2021
24 °C
ಸಮಗ್ರ ಕೃಷಿಗೆ ಅರಸಿ ಬಂದ ‘ಕೃಷಿ ಪಂಡಿತ’ ಪ್ರಶಸ್ತಿ

ಸದ್ದಿಲ್ಲದೇ ಸಾಧನೆ ಮಾಡಿದ ಅನ್ನದಾತರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಜಿಲ್ಲೆಯ ರೈತರು ಕೃಷಿಯಲ್ಲಿ ಸದ್ದಿಲ್ಲದೇ ತಮ್ಮದೇ ಆದ ಸಾಧನೆ ಮಾಡುತ್ತಿದ್ದಾರೆ. ಅವರ ಸಾಧನೆ ಗುರುತಿಸಿ ಕೃಷಿ ಇಲಾಖೆ ಕೃಷಿ ಪ್ರಶಸ್ತಿ/ ಕೃಷಿ ಪಂಡಿತ ಪ್ರಶಸ್ತಿ ನೀಡಿದೆ. ಈಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ವಿತರಣೆ ಮಾಡಿದ್ದು, ಅದರ ವಿವರ ಇಲ್ಲಿದೆ.

*ಮಲ್ಲೇಶಪ್ಪ, ಹುಣಸೇಕಟ್ಟೆ, ದಾವಣಗೆರೆ ತಾಲ್ಲೂಕು: ಸಾವಯವ ಕೃಷಿ ಪದ್ಧತಿಯ ಮೂಲಕ ಸಮಗ್ರ ಕೃಷಿ ಪದ್ಧತಿ ಅಳವಡಿಸಿ ಕೊಂಡಿದ್ದಾರೆ. ನೀರಿನ ಸಮರ್ಥ ಬಳಕೆಗೆ ಕೃಷಿ ಹೊಂಡದ ನಿರ್ಮಾಣ ಹಾಗೂ ಮಳೆ ನೀರು ಕೊಯ್ಲು, ಬೋರ್‌ವೆಲ್‌ಗೆ

ಜಲ ಮರುಪೂರಣ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕೃಷಿ ಹೊಂಡದಲ್ಲಿ ಮೀನು ಸಾಕಣೆ, ಹೈನುಗಾರಿಕೆ, ತೋಟಗಾರಿಕೆ ಹಾಗೂ ಕೃಷಿ ಬೆಳೆಗಳ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ.



*ಕೃಷ್ಣಮೂರ್ತಿ, ಕೆ.ಗಾಣದಕಟ್ಟೆ ಚನ್ನಗಿರಿ ತಾಲ್ಲೂಕು: ಸಾವಯವ ಆಧಾರಿತ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಮಾದರಿ ರೈತ. ಸಾವಯವ ಗೊಬ್ಬರ, ಹಸಿರೆಲೆ ಗೊಬ್ಬರ, ಮಣ್ಣಿನ ಫಲವತ್ತತೆ ಕಾಪಾಡಿಕೊಂಡಿದ್ದಾರೆ. ಕೃಷಿ ಜತೆಗೆ ಹೈನುಗಾರಿಕೆ, ಕುರಿ– ಕೋಳಿ ಸಾಕಣೆ, ತೋಟಗಾರಿಕೆ ಹಾಗೂ ಕೃಷಿ ಬೆಳೆಗಳ ಸುಸ್ಥಿರ ಕೃಷಿ ಪದ್ಧತಿ ಅಳವಡಿಸಿಕೊಂಡು ಉತ್ತಮ ಆದಾಯ ಪಡೆಯುತ್ತಿದ್ದಾರೆ.



*ಬಿ.ನಿಂಗಪ್ಪ ಹಾಗೂ ಜಿ.ಜಯಶಂಕರ, ಅರಸನಾಳು, ಹರಪನಹಳ್ಳಿ ತಾಲ್ಲೂಕು: ಇವರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ವೈವಿಧ್ಯ ಅನುಸರಿಸುತ್ತಿರುವ ಮಾದರಿ ರೈತರು. ಎರೆಹುಳು ಘಟಕ, ಬಯೋಡೈಜೆಸ್ಟರ್‌ ಸ್ಥಾಪನೆ, ಉತ್ಪಾದನೆ ಮತ್ತು ಬಳಕೆ, ನೀರಿನ ಸಮರ್ಥ ಹಾಗೂ ಮಿತ ಬಳಕೆಗಾಗಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಹೈನುಗಾರಿಕೆ, ಕೋಳಿ ಸಾಕಣೆಯೂ ಇವರ ಆಸಕ್ತಿ.



*ಬಿ.ನಾಗರಾಜಪ್ಪ, ಎಲೇ ಬೇತೂರು, ದಾವಣಗೆರೆ ತಾಲ್ಲೂಕು: ಮುಸುಕಿನಜೋಳ (ನೀರಾವರಿ) ಬೆಳೆಯನ್ನು ಹೆಕ್ಟೇರ್‌ಗೆ 110.75 ಕ್ವಿಂಟಲ್‌ ಬೆಳೆದು ರಾಜ್ಯಮಟ್ಟದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ.



*ಎನ್‌.ಎಚ್‌. ನಾರಪ್ಪ, ನಾಗರಕಟ್ಟೆ, ದಾವಣಗೆರೆ ತಾಲ್ಲೂಕು: ಕಬ್ಬು (ನೀರಾವರಿ) ಬೆಳೆಯನ್ನು ಹೆಕ್ಟೇರ್‌ 333.40 ಕ್ವಿಂಟಲ್‌

ಬೆಳೆದು ರಾಜ್ಯ ಮಟ್ಟದಲ್ಲಿ  ತೃತೀಯ ಬಹುಮಾನ ಪಡೆದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.