ಶುಕ್ರವಾರ, ಜೂನ್ 18, 2021
28 °C

ಸಪ್ತಕ ಸಂಗೀತೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಪ್ತಕ ಸಂಗೀತೋತ್ಸವ

ಬಸವೇಶ್ವರ ನಗರದ ಶ್ರೀ ಸಪ್ತಕ ಸಂಗೀತ ಅಕಾಡೆಮಿ ಇತ್ತೀಚೆಗೆ `ಸಪ್ತಕ ಸಂಗೀತೋತ್ಸವ~ ಕಾರ್ಯಕ್ರಮ ಆಯೋಜಿಸಿತ್ತು. ಕೃಷ್ಣರಾಜ ಪರಿಷನ್ಮಂದಿರ ಸಭಾಂಗಣದಲ್ಲಿ ಎರಡು ದಿನ ನಡೆದ ಕಾರ್ಯಕ್ರಮದಲ್ಲಿ ಸಂಗೀತೋತ್ಸವ, ಜಾನಪದ, ಸಮೂಹ ಗಾಯನ ಗೋಷ್ಠಿಗಳು ಮನಸೆಳೆದವು.ಮೊದಲ ದಿನ ಯಶವಂತ ಹಳಿಬಂಡಿ ಹಾಡಿದ `ಹೋಗು ಮನಸೇ ಹೋಗು~, ಉಪಾಸನಾ ಮೋಹನ್ (ಮುನಿಯ ಬೇಡವೇ ಗೆಳತಿ), ಪಂಚಮ್ ಹಳಿಬಂಡಿ (`ಶಾನುಭೋಗರ ಮಗಳು~), ನಾಗಚಂದ್ರಕಾ ಭಟ್ (`ಪ್ರೀತಿ ಕೊಟ್ಟ ರಾಧೆಗೆ~) ಗೀತೆಗಳ ಜೊತೆಗೆ ಸಪ್ತಕದ ವಿದ್ಯಾರ್ಥಿಗಳ ಸಮೂಹ ಗಾಯನ ದಿನದ ರಂಗನ್ನು ಹಿಮ್ಮಡಿಗೊಳಿಸಿತ್ತು.ಎರಡನೇ ದಿನ ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಅವರಿಗೆ  ಕವಿ ದೊಡ್ಡರಂಗೇಗೌಡ `ಶ್ರೀ ಸಪ್ತಕ ವಾರ್ಷಿಕ ಪ್ರಶಸ್ತಿ~ ಪ್ರದಾನ ಮಾಡಿದರು.ನಂತರ ನಡೆದ ಸಂಗೀತೋತ್ಸವದಲ್ಲಿ ಮೈಸೂರು ಮಹಾದೇವಪ್ಪ, ಬಾನಂದೂರು ಕೆಂಪಯ್ಯ, ಲಕ್ಷ್ಮಣದಾಸ್, ರಮೇಶ್ಚಂದ್ರ, ಕೆ.ಎಸ್.ಸುರೇಖಾ, ಗಾಯತ್ರಿ ಕೇಶವ್ ಸೇರಿದಂತೆ ಇತರೆ ಗಾಯಕರು ಜಾನಪದ, ಭಕ್ತಿ ಗೀತೆಗಳ ಗಾಯನ ಸಂಗೀತಾಸಕ್ತರ ಮನಸೂರೆಗೊಂಡಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.