ಶಿಡ್ಲಘಟ್ಟ: ಬಡ ಮತ್ತು ನಿರ್ಗತಿಕ ಸ್ಥಿತಿಯಲ್ಲಿನ ಗ್ರಾಮಸ್ಥರ ವಲಸೆ ತಡೆಯಲು, ಗ್ರಾಮದ ಅಭಿವೃದ್ಧಿಗಾಗಿ ಜಾರಿಗೆ ತಂದಿರುವ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎನ್ಆರ್ಇಜಿಎಸ್)ಗೆ ಈಗ ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಗ್ರಾಮಸ್ಥರಿಗೆ ಕೆಲಸ, ಆರ್ಥಿಕ ಭದ್ರತೆ ಮತ್ತು ಗ್ರಾಮಗಳ ಅಭಿವೃದ್ಧಿ ಸಾಧಿಸುವುದು ಯೋಜನೆಯ ಮೂರು ಪ್ರಮುಖ ಗುರಿಗಳು. ಆದರೆ ಕೆಲ ಗ್ರಾಮಗಳಲ್ಲಿನ ಯೋಜನೆಯು ವಿಫಲವಾಗಿರುವ ಬಗ್ಗೆ ಆರೋಪ ಕೇಳಿ ಬರುತ್ತಿದ್ದು, ಅದಕ್ಕೆ ಕಾರಣಗಳನ್ನು ಪತ್ತೆ ಮಾಡಲು ಯತ್ನಿಸಿದ ‘ಪ್ರಜಾವಾಣಿ’ಗೆ ಮಹತ್ವದ ಸಂಗತಿಗಳ ಬಗ್ಗೆ ಮಾಹಿತಿ ದೊರೆತಿದೆ. ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಸ್ಥರಿಗೆ ಯೋಜನೆಯ ಫಲ ಇನ್ನೂ ಸಿಕ್ಕಿಲ್ಲ.

ನಿರುದ್ಯೋಗಿಗಳಿಗೆ ವರ್ಷಕ್ಕೆ ಕನಿಷ್ಠ 100 ದಿನಗಳ ಕೆಲಸ ನೀಡುವುದರ ಬದಲು ಜೆಸಿಬಿ ವಾಹನಗಳನ್ನು ಬಳಸಿಕೊಂಡು ಕಾಮಗಾರಿ ನಡೆಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ. ಕಾಮಗಾರಿಯನ್ನು ಆರಂಭಿಸದೇ ಹಲವರಿಗೆ ಉದ್ಯೋಗ ನೀಡಲಾಗಿರುವ ಬಗ್ಗೆ ಕಾಗದಪತ್ರಗಳನ್ನು ತಯಾರಿಸಲಾಗಿದೆ ಎಂದು ಅವರು ದೂರುತ್ತಾರೆ. ನಕಲಿ ಜಾಬ್ ಕಾರ್ಡ್ಗಳನ್ನು ಸೃಷ್ಟಿಸಿ ನಿಜವಾದ ನಿರುದ್ಯೋಗಿಗಳಿಗೆ ಕೆಲಸವೇ ಇಲ್ಲದಂತೆ ಮಾಡಲಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

ಪಟ್ಟಣಕ್ಕೆ ಗುಳೆ ಹೋಗುವುದರ ಬದಲು ಗ್ರಾಮದಲ್ಲೇ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಬದುಕಲು ಪ್ರಯತ್ನಿಸುತ್ತಿದ್ದೇವೆ. ಆದರೆ ನಮ್ಮ ಸಂಕಷ್ಟಗಳಿಗೆ ಅಧಿಕಾರಿಗಳ ಮನಸ್ಸು ಕರಗುವುದಿಲ್ಲ. ನಮಗೆ ಕೆಲಸ ಕೊಡಿ ಎಂದು ಕೇಳಿದರೆ, ನಾಳೆ ಬಾ ಎಂದು ಅಲೆದಾಡಿಸುತ್ತಾರೆ. ಆದರೆ ಕೆಲಸ ಯಾವಾಗ, ಎಲ್ಲಿ ಎಂಬುದರ ಬಗ್ಗೆ ಮಾಹಿತಿ ನೀಡುವುದಿಲ್ಲ. ಯೋಜನೆ ಸಫಲಗೊಂಡಿರುವ ಬಗ್ಗೆ ಟಿವಿ,ಪತ್ರಿಕೆಗಳಲ್ಲಿ ನೋಡುತ್ತೇವೆ. ಆದರೆ ನಮ್ಮ ಗ್ರಾಮದಲ್ಲೇ ಸಮರ್ಪಕವಾಗಿ ಅನುಷ್ಠಾನಗೊಳ್ಳದಿರುವುದು ಬೇಸರ ಮೂಡಿಸುತ್ತದೆ’ ಎಂದು ಗ್ರಾಮದ ನಿವಾಸಿ ಕೃಷ್ಣಪ್ಪ ನೊಂದು ನುಡಿಯುತ್ತಾರೆ.

‘ದುಡಿಮೆಯ ಹಣ ಗ್ರಾಮಸ್ಥರಿಗೆ ತಲುಪಬೇಕೆ ಹೊರತು ಗುತ್ತಿಗೆದಾರರಿಗೆ ಹೋಗಬಾರದು ಎಂಬ ಉದ್ದೇಶದಿಂದ ಕೆಲಸಗಾರರ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ. ಆದರೆ ‘ಚಾಪೆ ಕೆಳಗೆ ನುಗ್ಗಿದರೆ ರಂಗೋಲಿಯ ಕೆಳಗೆ ನುಸುಳಬಹುದು’ ಎಂಬ ಮಾತಿನಂತೆ ನಕಲಿ ಜಾಬ್ಕಾರ್ಡ್ಗಳನ್ನು ಸೃಷ್ಟಿಸಲಾಗಿದೆ. ಕೆಲಸ ಮಾಡದಿದ್ದರೂ ಕೆಲಸ ಪೂರ್ಣಗೊಂಡಿದೆ ಎಂಬಂತೆ ಕಾಗದಪತ್ರಗಳನ್ನು ತಯಾರಿಸಲಾಗಿದೆ. ಅಕ್ರಮವಾಗಿ ಹಣ ಗಳಿಸಲು ಬಗೆಬಗೆಯ ಅವ್ಯವಹಾರದ ತಂತ್ರಗಳನ್ನು ಪ್ರಯೋಗಿಸಲಾಗುತ್ತಿದೆ’ ಎಂದು ಅವರು ದೂರುತ್ತಾರೆ.

‘ನನಗೂ ನನ್ನ ಹೆಂಡತಿಗೂ ಜಾಬ್ ಕಾರ್ಡ್ ನೀಡಿ ಮೂರು ವರ್ಷಗಳಾಗಿವೆ. ಆದರೆ ಪಂಚಾಯಿತಿ ವತಯಿಂದ ನಮಗೆ ಇದುವರೆಗೂ ಕೆಲಸ ನೀಡಲಾಗಿಲ್ಲ.ನಮ್ಮ ಗ್ರಾಮ ಬ್ರಾಹ್ಮಣರಹಳ್ಳಿಯಲ್ಲಿ ಒಂದೂ ಮುಕ್ಕಾಲು ಲಕ್ಷ ರೂಪಾಯಿ ವೆಚ್ಚದ ಎರಡು ಚರಂಡಿ ಕೆಲಸಗಳು ನಡೆದಿರುವಂತೆ ಪಂಚಾಯಿತಿಯವರು ದಾಖಲೆಪತ್ರ ತಯಾರಿಸಿದ್ದಾರೆ. ನಾವುಗಳು ಕೆಲಸ ಮಾಡದೆಯೇ ಮಾಡಿರುವಂತೆ ತೋರಿಸಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಮಗೆ ಮೋಸ ಮಾಡಿದ್ದಾರೆ’ ಎಂದು ಬ್ರಾಹ್ಮಣರಹಳ್ಳಿಯ ದೇವರಾಜ್ ಆರೋಪಿಸುತ್ತಾರೆ.‘ಲಕ್ಕೇನಹಳ್ಳಿ ಗ್ರಾಮದಿಂದ ಚಿಂತಾಮಣಿ ಮುಖ್ಯ ರಸ್ತೆಯವರೆಗೆ ರಸ್ತೆ ಅಭಿವೃದ್ಧಿ ಕೆಲಸವನ್ನು ಜೆಸಿಬಿ ಯಂತ್ರೋಪಕರಣವನ್ನು ಬಳಸಿ ಮಾಡಿದ್ದಾರೆ. ಛಾಯಾಚಿತ್ರ ಸಮೇತ ಲಿಖಿತ ದೂರನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಣಾಧಿಕಾರಿಗಳಿಗೆ ದೂರು ನೀಡಿದ್ದೇವೆ’ ಎನ್ನುತ್ತಾರೆ ಲಕ್ಕೇನಹಳ್ಳಿ ಗ್ರಾಮದ ವೆಂಕಟೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.