ಹಬ್ಬದ ಸಾಲು ಎದುರಾಗುತ್ತಿದ್ದಂತೆ ವಿವಿಧ ರಾಜ್ಯಗಳ ಕರಕುಶಲ ಕಲಾವಿದರು, ನೇಕಾರರು, 60ಕ್ಕೂ ಹೆಚ್ಚಿನ ವಿವಿಧ ಕ್ಷೇತ್ರದ ಕಲಾವಿದರು ಸಫೀನಾ ಪ್ಲಾಜಾದಲ್ಲಿ ಬೀಡು ಬಿಟ್ಟಿದ್ದಾರೆ. 60ಕ್ಕೂ ಹೆಚ್ಚಿನ ಕಲಾವಿದರು ವಿವಿಧ ರಾಜ್ಯಗಳಿಂದ ಬಂದಿಳಿದಿದ್ದಾರೆ.
ಕಾಶ್ಮೀರದಿಂದ ತಮಿಳುನಾಡಿನವರೆಗೂ ಕ್ರಾಫ್ಟ್ ಮೇಳದಲ್ಲಿ ಕರಕುಶಲ ವಸ್ತುಗಳ ಮಾರಾಟಕ್ಕೆ ತಂದಿದ್ದಾರೆ.

ಆರ್ಟ್ಸ್ ಅಂಡ್ ಕ್ರಾಫ್ಟ್ಸ್ ಅಸೋಸಿಯೇಷನ್ ಆಯೋಜಿಸಿರುವ ಮೇಳದಲ್ಲಿ ಕಾಶ್ಮೀರಿ ಕನ್ಯೆಯರು ತಮ್ಮ ಚಿಗುರೆಲೆಯ ಬೆರಳಿನಿಂದ ಹೆಣೆದಿರುವ ಕಸೂತಿ ಉಡುಪುಗಳು, ಕೋಲ್ಕತ್ತಾದ ಕಾಂತಾವರ್ಕ್ ಸೀರೆಗಳು, ರೇಶ್ಮೆ ಹಾಗೂ ಕಾಟನ್ ಸೀರೆಗಳು, ಜೈಪುರದ

ರಜಾಯಿ, ಗುಜರಾತಿ ಟಾಪ್ಗಳು, ಲಖನವಿ ಚಿಕನ್, ಜೈಪುರದ ಚಾನಿಯಾ ಚೋಲಿ, ಖಾದಿ ಕುರ್ತಾ, ಕಣ್ಣೂರಿನ ಹಾಸಿಗೆಗಳು, ರಾಜಸ್ತಾನಿ ಮಧುಬನಿ ಕಲಾಕೃತಿಗಳು, ತಂಜಾವೂರು, ಒಡಿಶಾ, ರಾಜಾರವಿವರ್ಮ ಕಲಾಕೃತಿಗಳು ಇಲ್ಲಿ ಲಭ್ಯ ಇವೆ.

ಜೋಧಪುರದ ಪೀಠೋಪರಕರಣಗಳು, ಜಯಪುರದ ಶಿಲಾಕಲಾಕೃತಿಗಳು, ಬೆಳ್ಳಿ, ಮಿನಾಕರಿ ಹಾಗೂ ಒಂದು ಗ್ರಾಮ್ಚಿನ್ನದ ಲೇಪನವಿರುವ ಆಭರಣ ಸಂಗ್ರಹಗಳೂ ಈ ಮೇಳದಲ್ಲಿ ಲಭ್ಯ.

ಕೈತುಂಬ ಬಳೆ ಇಟ್ಟುಕೊಳ್ಳುವವರಿಗಾಗಿ ಜೈಪುರ ಹಾಗೂ ಬಂಗಾಲಿ ಬಳೆಗಳು ಗಮನ ಸೆಳೆಯಲಿವೆ. ಈ ಪ್ರದರ್ಶನ ಮತ್ತು ಮಾರಾಟ ಮೇಳ ಇದೇ 29ರವರೆಗೆ ನಡೆಯಲಿದೆ.
ಸಫೀನಾ ಪ್ಲಾಜಾ, ಇನ್ಫೆಂಟ್ರಿ ರಸ್ತೆ. ಮಾಹಿತಿಗೆ 74119 70184. ್ಢ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.