ಭಾನುವಾರ, ಮೇ 9, 2021
27 °C

ಸಬ್ಸಿಡಿ ಹೊರೆ ತಗ್ಗಿಸಲು ಕೇಂದ್ರದ ಕ್ರಮ:ಯೂರಿಯಾ ಬೆಲೆ ಏರಿಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಸಬ್ಸಿಡಿ ಹೊರೆತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಯೂರಿಯಾ ಚಿಲ್ಲರೆ ಮಾರಾಟ ಬೆಲೆಯನ್ನು ಶೇ 10ರಷ್ಟು ಹೆಚ್ಚಿಸಲು ಚಿಂತನೆ ನಡೆಸಿದೆ.

ಯೂರಿಯಾ ಮಾತ್ರ ಸಂಪೂರ್ಣವಾಗಿ ಬೆಲೆ ನಿಯಂತ್ರಣಕ್ಕೆ ಒಳಪಟ್ಟ ರಸಗೊಬ್ಬರವಾಗಿದ್ದು, ಪ್ರಸ್ತುತ ಪ್ರತಿ ಟನ್ ಯೂರಿಯಾ ಚಿಲ್ಲರೆ ಮಾರಾಟ ಬೆಲೆರೂ5,310 ಇದೆ.`ಯೂರಿಯಾ ಮೇಲಿನ ಸಬ್ಸಿಡಿಯಿಂದ ಆಗುತ್ತಿರುವ ಹೊರೆ ಇಳಿಸಲು ಅದರ ಚಿಲ್ಲರೆ ಮಾರಾಟ ಬೆಲೆಯನ್ನು ಶೇ 10ರಷ್ಟು ಅಂದರೆ ಪ್ರತಿ ಟನ್‌ಗೆರೂ5,841ಗೆ ಹೆಚ್ಚಿಸಲು ರಸಗೊಬ್ಬರ ಸಚಿವಾಲಯ ಚಿಂತನೆ ನಡೆಸಿದೆ~ ಎಂದು ಮೂಲಗ ತಿಳಿಸಿದೆ.ಬೆಲೆ ಏರಿಕೆ ಕುರಿತಂತೆ ಅಂತಿಮ ನಿರ್ಧಾರವನ್ನು  ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಕೈಗೊಳ್ಳಲಿದೆ.

ಹಣಕಾಸು ಸಚಿವ ಪ್ರಣವ್ ಮುಖರ್ಜಿ ನೇತೃತ್ವದ ಸಮಿತಿಯು  ಕಳೆದ ವರ್ಷ ಯೂರಿಯಾ ಕರಡು ನೀತಿಗೆ ಸಮ್ಮತಿ ಸೂಚಿಸಿತ್ತು. ಯೂರಿಯಾ ಚಿಲ್ಲರೆ ಮಾರಾಟ ಬೆಲೆಗಳನ್ನು ಭಾಗಶಃ ಮುಕ್ತಗೊಳಿಸುವುದು ಮತ್ತು  ನೀತಿ ಜಾರಿಗೆ ಬಂದ ಮೊದಲ ವರ್ಷದಲ್ಲಿ ಯೂರಿಯಾ ಬೆಲೆಯನ್ನು ಶೇ 10ರಷ್ಟು ಹೆಚ್ಚಿಸಲು ಕಂಪೆನಿಗಳಿಗೆ ಅವಕಾಶ ನೀಡುವುದು ಸೇರಿದಂತೆ ಹಲವು ವಿಷಯಗಳನ್ನು ಈ ಕರಡು ನೀತಿಯಲ್ಲಿ ಪ್ರಸ್ತಾಪಿಸಲಾಗಿತ್ತು.2011-12ನೇ ವರ್ಷದಲ್ಲಿ  ಯೂರಿಯಾಗೆ ಅಂದಾಜುರೂ 24,500 ಕೋಟಿ ಸಬ್ಸಿಡಿ ನೀಡಲಾಗಿತ್ತು.

ರಸಗೊಬ್ಬರದಿಂದಾಗಿ ಉಂಟಾಗುತ್ತಿರುವ ಭಾರಿ ಸಬ್ಸಿಡಿ ಹೊರೆಗೆ ಕಳವಳ ವ್ಯಕ್ತಪಡಿಸಿದ್ದ ಯೋಜನಾ ಆಯೋಗದ ಸದಸ್ಯ ಸೌಮಿತ್ರ ಚೌಧರಿ ನೇತೃತ್ವದ  ಕಾರ್ಯದರ್ಶಿಗಳ ಸಮಿತಿಯು ಯೂರಿಯಾ ವಲಯವನ್ನು ಸಂಪೂರ್ಣವಾಗಿ ನಿಯಂತ್ರಣ ಮುಕ್ತಗೊಳಿಸುವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿತ್ತು.ಈ ಪ್ರಸ್ತಾವನೆಯನ್ನು  ಹಣಕಾಸು, ಕೃಷಿ ಮತ್ತು ರಸಗೊಬ್ಬರ ಸಚಿವಾಲಯವು  ಸ್ವೀಕರಿಸಿರಲಿಲ್ಲ.

ವಿತ್ತೀಯ ಕೊರತೆಯು ಹೆಚ್ಚಾಗುತ್ತಿರುವುದರಿಂದ ಸರ್ಕಾರವು ಪ್ರಮುಖ ಸಬ್ಸಿಡಿಗಳ ಮೇಲಿನ ವೆಚ್ಚವನ್ನು ಕಡಿತಗೊಳಿಸಲಿದೆ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಪ್ರಸಕ್ತ ಸಾಲಿನ ಬಜೆಟ್ ಭಾಷಣದಲ್ಲಿ ಹೇಳಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.