ಶಾಲೆಗಳಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಮವಸ್ತ್ರ ಧರಿಸುವುದು ಈಗ ಸುಮಾರು ನಲವತ್ತು ಐವತ್ತು ವರ್ಷಗಳಿಂದ ಆರಂಭವಾಗಿದೆ ಅಷ್ಟೆ. 50ರ ದಶಕದಲ್ಲಿಯೂ, 60ರ ದಶಕದ ಆರಂಭದಲ್ಲೂ ಇವು ಇರಲಿಲ್ಲ. ಶಾಲೆಗಳಿಗೆ ಮಕ್ಕಳು ತಮ್ಮಿಷ್ಟ ಬಂದ ಉಡುಗೆ ಧರಿಸಿ ಬರುತ್ತಿದ್ದರು.

ಹೆಣ್ಣು ಮಕ್ಕಳಿಗೆ ಅನ್ವಯಿಸಿ ಹೇಳುವುದಾದರೆ, ಆ ಕಾಲದಲ್ಲಿ ಕೆಲವರು ಮೊಣಕಾಲ ತನಕ ಲಂಗ, ಮೇಲೆ ಜಂಪರ್, ಬ್ಲೌಸ್, ಪೋಲಕ ಇತ್ಯಾದಿ ಹೆಸರಿನದೊಂದು ವಸ್ತ್ರ, ಇನ್ನೂ ಕೆಲವರು ಇದರ ಮೇಲೆ ಸೆರಗಿನ ತರಹದ ದಾವಣಿ, ಮತ್ತೆ ಕೆಲವರು ಮೊಣಕಾಲು ಮಾತ್ರ ಮುಟ್ಟುವ ಸ್ಕರ್ಟ್, ಫ್ರಾಕ್ ಇತ್ಯಾದಿ ಧರಿಸುತ್ತಿದ್ದರು.

ಈ ಉಡುಗೆಗಳಲ್ಲಿ ಕೆಲವರದು ರೇಷ್ಮೆ ಬಟ್ಟೆ, ಬಗೆಬಗೆಯ ಸಿಲ್ಕ್, ವಾಯಿಲ್ ಇತ್ಯಾದಿ, ಸ್ವಲ್ಪ ಹೆಚ್ಚು ಬೆಲೆಬಾಳುವಂತಹವು. ಹೆಚ್ಚಿನವರದು ಹತ್ತಿಯ ಬಟ್ಟೆ. ಅವರಲ್ಲಿ ಕೆಲವರದು ಆಕರ್ಷಕ ಬಣ್ಣದ ಪ್ರಿಂಟೆಡ್ ಬಟ್ಟೆ. ಮತ್ತೆ ಕೆಲವರದು ಮಾತ್ರ ಒರಟು ಹತ್ತಿಯ, ಸಾದಾ, ಕಡಿಮೆ ಬೆಲೆ ಬಟ್ಟೆ. ಕೆಲಮಕ್ಕಳು ದಿನಕ್ಕೊಂದರಂತೆ ಆರು ದಿನ ಆರು ಬಗೆ ಉಡುಪು ಧರಿಸಿದರೆ, ಮತ್ತೆ ಕೆಲವರು ಇವತ್ತೊಂದು, ನಾಳೆಯೊಂದು ಎಂದು ಎರಡೇ ಎರಡು ಉಡುಗೆ ಚಪ್ಪಲಿ, ಬೂಟು ಇತ್ಯಾದಿ ಸಾಧಾರಣವಾಗಿ ಹೆಚ್ಚಿನವರಿಗೆ ಇಲ್ಲ.

ಒಟ್ಟಿನಲ್ಲಿ ಈ ಉಡುಗೆಗಳು ಆ ಮಕ್ಕಳ ತಾಯ್ತಂದೆಯರ ಆರ್ಥಿಕ ಪರಿಸ್ಥಿತಿಯನ್ನೂ ಸಾಮಾಜಿಕ ಅಂತಸ್ತನ್ನೂ ಪ್ರತಿಬಿಂಬಿಸುತ್ತಿತ್ತು. ಇದು ಬೆಂಗಳೂರು ನಗರದ ಸಾಮಾನ್ಯ ದೃಶ್ಯ.

ಈ ರೀತಿ ವೈವಿಧ್ಯಮಯ, ಬೆಲೆಬಾಳುವ ಉಡುಗೆ ಧರಿಸಿದ ಮಕ್ಕಳ ಸ್ವಂತಿಕೆ ಎಷ್ಟು ಬೆಳೆಯುತ್ತಿತ್ತೋ ತಿಳಿಯದು; ಆದರೆ ಅವರಲ್ಲಿ ಅಹಮಿಕೆಯ ಬೆಳವಣಿಗೆಯಂತೂ ಎದ್ದು ಕಾಣುತ್ತಿತ್ತು. ಅವರ ಮಾತು, ನಡೆ, ನುಡಿಗಳಲ್ಲಿ ಅವರ ಮೇಲರಿಮೆ, ಧಿಮಾಕು ಸ್ಪಷ್ಟವಾಗಿಯೇ ವ್ಯಕ್ತವಾಗುತ್ತಿತ್ತು. ಅದರಂತೆಯೇ ಕಡಿಮೆ ದರ್ಜೆಯ ಉಡುಪು ಧರಿಸಿ ಬರುವವರಲ್ಲಿ ಕೀಳರಿಮೆ ಬೆಳೆಯುತ್ತಿತ್ತು; ನಡೆನುಡಿಗಳಲ್ಲಿ ಅನಗತ್ಯ ಸಂಕೋಚ.

ಜೊತೆಗೇ ತಮ್ಮ ಸಹಪಾಠಿಗಳ ಆಕರ್ಷಕ ಉಡುಗೆಗಳತ್ತ ಆಸೆಗಣ್ಣಿನ ನೋಟ; ತಮಗೂ ಅಂಥದೇ ಉಡುಪು ಬೇಕೆಂದು ತಂದೆ ತಾಯಿಗಳ ಬಳಿ ಹಟ; ಆ ಪೋಷಕರಿಗೆ ಕಾಟ. ಕೊನೆಗೆ ಆ ಅಸಹಾಯಕ ಪಾಲಕರಿಂದ ಪೆಟ್ಟು, ಬೈಗಳು. ಎಷ್ಟೋ ಸಲ ಈ ಉಡುಗೆಗಳಿಂದಾಗಿಯೇ, ತರಗತಿಗಳಲ್ಲಿ ಜಗಳಗಳೂ ಆಗಿ ಕ್ಲಾಸ್ಟೀಚರ್ವರೆಗೂ ತಲುಪುತ್ತಿದ್ದುದೂ ಉಂಟು.

ಆದರೆ ಯಾವಾಗ ಸಮವಸ್ತ್ರ ಸಂಹಿತೆ ಆರಂಭವಾಯಿತೊ ಆಗ ಇಂತಹದಕ್ಕೆಲ್ಲಾ ಇತಿಶ್ರೀ ಆಯಿತು. ಸಿರಿವಂತ ಮಕ್ಕಳ ಮೇಲರಿಮೆ, ಬಡಮಕ್ಕಳ ಕೀಳರಿಮೆ ಕ್ರಮೇಣ ಕಡಿಮೆಯಾಗುತ್ತ, ಉಡುಪು ಉಂಟು ಮಾಡುತ್ತಿದ್ದ ಒಂದು ದೊಡ್ಡಪೀಡೆ ನಿವಾರಣೆ ಆಯಿತು.

ದಿವಾನನ ಮಗನಿಗೂ, ಜವಾನನ ಮಗನಿಗೂ ಶಾಲೆಯಲ್ಲಿ ಯಾವ ಭೇದವೂ ಇಲ್ಲ; ಮಂತ್ರಿ ಮಗಳಿಗೂ, ಮನೆಗೆಲಸದವಳ ಮಗಳಿಗೂ ಯಾವ ವ್ಯತ್ಯಾಸವೂ ಇಲ್ಲ, ಶಾಲೆಯಲ್ಲಿ ಎಂದು ಸಾರುತ್ತಿದ್ದುವು, ಸಮವಸ್ತ್ರಗಳು! ಈ ಸಮವಸ್ತ್ರಗಳ ಧರಿಸುವಿಕೆ, ಕಲಿಕೆಯಲ್ಲಿ ತಲ್ಲೆನತೆ ಕಡಿಮೆ ಮಾಡಲಿಲ್ಲ.

ಸುಲಭವಾಗಿ ಒಗೆಯಬಹುದಾದುದು, ನಮ್ಮ ನೆಲದ ಹವಾಮಾನಕ್ಕೆ ಹಿತವಾದ ಹತ್ತಿಯ ಈ ಸಮವಸ್ತ್ರ. ಮಕ್ಕಳು ಶಾಲೆಯಲ್ಲಿ ಇರುವುದು ಆರೇಳು ಘಂಟೆಗಳು ಮಾತ್ರವೇ ನಿಜ. ಆದರೆ ಆ ಹೊತ್ತಿನಲ್ಲಿ ಬೋಧಕರು ಹೇಳಿದ್ದರಿಂದ ಮಾತ್ರವೇ ಅಲ್ಲ, ತಮ್ಮ ಸಹಪಾಠಿಗಳ ಒಡನಾಟದಿಂದಲೂ ಮಕ್ಕಳ ವ್ಯಕ್ತಿತ್ವದ ಬೆಳವಣಿಗೆ ಆಗುತ್ತದೆ. ಸಾಮಾಜಿಕ ಸಮಾನತೆಯ ಪಾಠಕ್ಕೆ ಸಮವಸ್ತ್ರವೇ ಮೊದಲ ಮೆಟ್ಟಿಲು.

ಆದರೆ ಈ ಸಮವಸ್ತ್ರಗಳು ಐದು ವರ್ಷಕ್ಕಿಂತ ಕಡಿಮೆ ವಯೋಮಾನದ ನರ್ಸರಿ, ಪ್ರೀ ಪ್ರೈಮರಿ ಮಕ್ಕಳಿಗೆ ಬೇಕಿಲ್ಲ. ಏಕೆಂದರೆ ಅವುಗಳಿಗೆ ವಸ್ತ್ರ ವಿಭಿನ್ನತೆಯಿಂದ ತಮ್ಮ ತಮ್ಮಲ್ಲಿ ಭೇದಭಾವ ಬೆಳಸಿಕೊಳ್ಳುವ ಮನಸ್ಥಿತಿ ಬೆಳೆದಿರುವುದಿಲ್ಲ. ಇನ್ನು ಟೈ, ಬೂಟ್ ಇತ್ಯಾದಿಗಳ ಬಗ್ಗೆ ಹೇಳುವುದಾದರೆ, ಟೈ ಒಂದು ಅಲಂಕಾರ ಅಷ್ಟೆ.

ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರು ಚರ್ಚಿಸಿ ಇವು ಬೇಕೇ ಬೇಡವೇ ನಿರ್ಧರಿಸಬಹುದು. ಆದರೆ ಕಾಲುಚೀಲ, ಬೂಟ್ ಇತ್ಯಾದಿ ಮಕ್ಕಳ ಎಳೆಪಾದಗಳ ರಕ್ಷಣೆಗೆ ಬೇಕಲ್ಲವೇ? ಬೇಸಿಗೆಗೆ ಭಾರವಾದದ್ದು ಬೇಡ. ಇಷ್ಟಕ್ಕೂ ಬೇಸಿಗೆಯಲ್ಲಿ ಹೆಚ್ಚು ದಿನ ರಜಾಕಾಲ ತಾನೇ?

ಇಂಥ ಶಾಲೆಯ ಮಕ್ಕಳು ಎಂದು ಗುರ್ತಿಸುವ, ತಿಳಿಯುವ ಪ್ರಸಂಗ ನಿತ್ಯ ಬರುವುದಿಲ್ಲ ನಿಜ. ಆದರೆ, ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಇಂತಹ ಸಂದರ್ಭಗಳಲ್ಲಿ ಹಲವಾರು ಶಾಲೆಗಳ ಮಕ್ಕಳು ಸೇರುತ್ತಾರಲ್ಲವೇ? ಹಾಗೆಯೇ ಮಕ್ಕಳನ್ನು ಶಾಲಾ ಪ್ರವಾಸಗಳಿಗೆ ಕರೆದುಕೊಂಡು ಹೋದಾಗ, ಅದೇ ಸ್ಥಳಕ್ಕೆ ಇತರ ಶಾಲೆಗಳ ಮಕ್ಕಳು ಬಂದಿರುವುದುಂಟಲ್ಲವೇ? ಅಂಥಹ ಸಂದರ್ಭಗಳಲ್ಲಿ ಇವರು ನಮ್ಮ ಶಾಲೆಯವರು ಎಂದು ಗುರುತಿಸಲು ಸಮವಸ್ತ್ರ ಸಹಕಾರಿಯಲ್ಲವೇ?

ವೈವಿಧ್ಯಮಯ ದಿರಿಸುಧಾರಿಗಳಾದ ಮಕ್ಕಳನ್ನು ನೋಡುವುದು ಒಂದು ಹಬ್ಬ, ನಿಜ. ಹಾಗೆಯೇ ನೀಟಾಗಿ, ಒಂದೇ ಬಗೆಯ ಉಡುಗೆ ಧರಿಸಿ ಶಿಸ್ತಿನಿಂದ ಬರುವ ಮಕ್ಕಳನ್ನು ನೋಡುವುದೂ ಒಂದು ಹಬ್ಬವೇ. ವಸ್ತುವಿನಲ್ಲಿ ಅಲ್ಲ, ಸೌಂದರ್ಯ ನೋಡುವ ಕಣ್ಣಲ್ಲಿದೆ ಎನ್ನುತ್ತಾರಲ್ಲವೇ?

ಈ ಸಮವಸ್ತ್ರ ಬೇರೆಡೆ ಧರಿಸಲಾರದ್ದು ನಿಜ. ಆದರೆ ಶಾಲೆಗಾಗಿ ಮನೆಗಾಗಿ, ಸಮಾರಂಭಗಳಿಗಾಗಿ ಎಂದು ಎಲ್ಲರೂ ಬೇರೆ ಬೇರೆ ಉಡುಪುಗಳನ್ನೇ ಬಳಸುವುದು ವಾಡಿಕೆ. ಈ ವರ್ಷ ಬಳಸಿ ಹಳತಾದ ಸಮವಸ್ತ್ರ, ಮುಂದಲ ವರ್ಷ ಮನೆಯಲ್ಲಿ ಬಳಸಿದರೆ ಹಣದ ಮಿಗುತಾಯ ಆಗುತ್ತದೆ.

ಈ ವಿಷಯದಲ್ಲಿ ಸರ್ಕಾರ ಮತ್ತೊಂದು ಹೆಜ್ಜೆ ಇಡಬಹುದು; ಶಾಲಾ ಸಮವಸ್ತ್ರಗಳು ಖಾದಿಯದೇ ಆಗಿರಬೇಕೆಂಬ ನಿಯಮ ತರಬಹುದು. ಅಗತ್ಯಕ್ಕೆ ತಕ್ಕಂತೆ ಖಾದಿಯಲ್ಲಿ ಹೊಸ ನಮೂನೆಯ, ಉತ್ತಮ ನೂಲಿನ ಬಟ್ಟೆ ತಯಾರಿಸಿ, ಅದಕ್ಕೆ ಅನುಗುಣವಾದ ಬೆಲೆ ದೊರಕಿಸಿಕೊಟ್ಟರೆ ಆಗ ಹಳ್ಳಿಗಳಲ್ಲಿ ಖಾದಿ ತಯಾರಿಕೆಯನ್ನೇ ನೆಚ್ಚಿ ಬಾಳುತ್ತಿರುವವರ ಬದುಕೂ ಹಸನಾಗುತ್ತದೆ.

ಆ ಮೂಲಕ ಮಕ್ಕಳಿಗೆ ಶಾಲಾ ಹಂತದಲ್ಲೇ ಖಾದಿ, ಗ್ರಾಮೋದ್ಯೋಗಗಳು, ಗ್ರಾಮೀಣ ಬದುಕು ಇವುಗಳ ಸ್ಥೂಲ ಪರಿಚಯವೂ ಆಗುತ್ತದೆ. ಆಗ ಒಂದು ಸಾಮಾಜಿಕ ಪರಿವರ್ತನೆ ನಿಧಾನವಾಗಿಯಾದರೂ ಆಗುತ್ತದೆ. ನಾವೆಲ್ಲ ಒಂದೇ ಎಂಬ ಭಾವನೆ ಬೆಳಸಿಕೊಳ್ಳುತ್ತ, ಸದ್ದಿಲ್ಲದೆ ಸಮಾನತೆಯತ್ತ ಸಾಗಲು ಸಾಧನ ಶಾಲಾ ಸಮವಸ್ತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.