ಗುರುವಾರ , ಫೆಬ್ರವರಿ 25, 2021
24 °C
ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ಸಮಯದಿಂದ ಸಂಚಾರ ಕಿರಿಕಿರಿ

ಸಮಸ್ಯೆ ಮೆಲ್ಕಾರ್‌ಗೆ ವರ್ಗ

ಪ್ರಜಾವಾಣಿ ವಾರ್ತೆ/ ಮೋಹನ್ ಕೆ.ಶ್ರೀಯಾನ್ Updated:

ಅಕ್ಷರ ಗಾತ್ರ : | |

ಸಮಸ್ಯೆ ಮೆಲ್ಕಾರ್‌ಗೆ ವರ್ಗ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ಸಮಯದಿಂದ ಪದೇ ಪದೇ ಕಾಡುತ್ತಿದ್ದ ಸಂಚಾರ ಸ್ಥಗಿತ ಸಮಸ್ಯೆ ಇದೀಗ ಇಲ್ಲಿಗೆ ಸಮೀಪದ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿಗೆ ವರ್ಗಾವಣೆಗೊಂಡಿದೆ.ಇನ್ನೊಂದೆಡೆ ರಿಕ್ಷಾ ಮತ್ತು ಸರ್ಕಾರಿ ಬಸ್ ರಸ್ತೆಯ ನಡುವೆ ಸಿಲುಕಿಕೊಂಡು ಟ್ರಾಫಿಕ್ ಸಮಸ್ಯೆಯನ್ನು ಮತ್ತಷ್ಟು ಬಿಗಡಾ ಯಿಸಿತ್ತು. ಸರ್ಕಾರಿ ಬಸ್ ಚಾಲಕರೊಬ್ಬ ರಿಗೆ ಇಲ್ಲಿನ ಸಂಚಾರ ಪೊಲೀಸರು ದಂಡ ವಿಧಿಸುವಂತೆ ರಶೀದಿ ನೀಡಿರು ವುದನ್ನು ಪ್ರತಿಭಟಿಸಿ ಬಸ್ಸನ್ನು ಹೆದ್ದಾರಿ ಯಲ್ಲೇ ನಿಲ್ಲಿಸಿ ಪ್ರತಿಭಟನೆ ನಡೆಸಿದ ಪರಿಣಾಮ ಸಂಚಾರ ಅಸ್ತವ್ಯಸ್ತ ಗೊಂಡಿತು.ಪೊಲೀಸರು ಖಾಸಗಿ ಬಸ್ ಚಾಲಕರಿಗೆ ವಿನಾಯಿತಿ ನೀಡಿ ಸರ್ಕಾರಿ ಬಸ್ ಚಾಲಕರಿಗೆ ಮಾತ್ರ ನೋಟಿಸ್‌ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿ ಪೊಲೀಸ್ ಸಿಬ್ಬಂದಿ ಜತೆಗೆ ಪರಸ್ಪರ ಮಾತಿನ ಚಕಮಕಿ ನಡೆಯು ತ್ತಿದ್ದಂತೆಯೇ ಹೆದ್ದಾರಿಯಲ್ಲಿ ವಾಹನಗಳ ಸಾಲು ಮತ್ತಷ್ಟು ಉದ್ದಕ್ಕೆ ಬೆಳೆಯಿತು.ಬಂಟ್ವಾಳ ಇನ್‌ಸ್ಪೆಕ್ಟರ್ ಕೆ.ಯು. ಬೆಳ್ಳಿಯಪ್ಪ, ಬಂಟ್ವಾಳ ನಗರ ಠಾಣಾಧಿ ಕಾರಿ ನಂದ ಕುಮಾರ್, ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಕುಮಾರ್, ಸಂಚಾರಿ ಠಾಣಾಧಿಕಾರಿ ಚಂದ್ರ ಶೇಖರಯ್ಯ ಮತ್ತಿತರರು ಸ್ಥಳಕ್ಕೆ ಬಂದು ಸಂಚಾರ ಅಡಚಣೆ ತೆರವುಗೊಳಿಸಿದರು.ಪ್ರಯಾಣಿಕರಿಗೆ ತಂಗಲು ಸೂಕ್ತ ಬಸ್‌ನಿಲ್ದಾಣ ಇಲ್ಲದೆ ಅದೆಷ್ಟೋ ವರ್ಷಗಳು ಸಂದರೂ ಪುರಸಭೆಯಿಂದ ಅದನ್ನು ಒದಗಿಸಲೂ ಸಾಧ್ಯವಾಗಿಲ್ಲ. ಇತ್ತೀಚೆಗೆ ಖಾಸಗಿ ಸಂಸ್ಥೆಯೊಂದು ಬಸ್‌ ಪ್ರಯಾಣಿಕರ ತಂಗುದಾಣ ನಿರ್ಮಿಸಿ ಕೊಟ್ಟಿದ್ದರೂ ಅದು ಬಳಕೆಯಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಇಲ್ಲಿನ ಸಂಚಾರ ಸಮಸ್ಯೆಯಿಂದ ಮಂಗಳೂರು, ಪುತ್ತೂರು, ಕೊಣಾಜೆ, ಬಿ.ಸಿ.ರೋಡ್ ಮತ್ತಿತರ ಕಡೆಗೆ ಸಂಚರಿ ಸುವ ವಾಹನಗಳಿಗೆ ತೊಡಕಾಗುತ್ತಿದೆ ಎಂಬುದು ಪ್ರಯಾಣಿಕರ ಅಳಲು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.