ಬುಧವಾರ, ಏಪ್ರಿಲ್ 21, 2021
32 °C

ಸಮಾಜದ ಸಮಸ್ಯೆಗಳಿಗೆ ಶಿಕ್ಷಣ ರಾಮಬಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಕ್ಕೇರಿ: ಶಿಕ್ಷಣದ ಮೂಲಕ ಸಮಾಜದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಸಾಧ್ಯವೆಂದು ನಂಬಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಆದರೆ ಸಮಾಜದಲ್ಲಿ ಕಲಿತ ಸುಶಿಕ್ಷಿತ ಯುವಕರನ್ನು ಸೇರಿ ಇತರ ಯುವಕರು ದಾರಿ ತಪ್ಪುತ್ತಿರುವುದಕ್ಕೆ ಸಂಸದ ರಮೇಶ್ ಕತ್ತಿ ಆತಂಕ ವ್ಯಕ್ತಪಡಿಸಿದರು.ಬುಧವಾರ ಮದಮಕ್ಕನಾಳ ರಸ್ತೆ ಬದಿಯಲ್ಲಿರುವ ಪ್ರೇಮ ಬಾಳು ಸಂಧ್ಯಾಶ್ರಮದಲ್ಲಿ ಹುಕ್ಕೇರಿ ತಾಲ್ಲೂಕು  ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಪ್ರತಿಭಾವಂತ ಬಡ ಮಕ್ಕಳಿಗೆ ಪುರಸ್ಕಾರ ಹಾಗೂ ನೇತ್ರದಾನ ಅರಿವು ಪ್ರತಿಜ್ಞಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ  ಅವರು ಮಾತನಾಡಿದರು.ಭಾರತದ ಜನಸಂಖ್ಯೆ 121 ಕೋಟಿ ಇದ್ದರೂ ಕೂಡಾ ದೇಹದಾನ ಅಥವಾ ನೇತ್ರದಾನ ಮಾಡುವವರ ಸಂಖ್ಯೆ ಕಡಿಮೆ. ಮರಣಾನಂತರ ಅದನ್ನು ಕೊಡುವದರಿಂದ ಆಗಬಹುದಾದ ಪ್ರಯೋಜ ಕುರಿತು ಜನರಿಗೆ ತಿಳಿವಳಿಕೆ ನೀಡುವ ನಿಟ್ಟಿನಲ್ಲಿ ವಿಜಯ ರವದಿ ಕೈಕೊಂಡ ಕ್ರಮ ಮೆಚ್ಚುವಂತಹದು ಎಂದರು.ಹಳ್ಳಿಗಳಲ್ಲಿ ಅರಿವು ಮೂಡಿಸಿ ಅಂಧತ್ವದ ಸಂಖ್ಯೆ ಕಡಿಮೆ ಮಾಡಲು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿಗಳು, ಸಂಘ- ಸಂಸ್ಥೆಗಳು  ಪ್ರಯತ್ನಿಸಲು ಕರೆ ನೀಡಿದರು.ಜಿಲ್ಲಾ ಆಸ್ಪತ್ರೆಯ ನೇತ್ರ ಸಹಾಯಕ ಶ್ರೀನಿವಾಸ ಮಾತನಾಡಿ ನೇತ್ರದಾನದ ಮಹತ್ವ ಕುರಿತು ವಿವರ ನೀಡಿದರು.  ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿತರಣೆ: ಪ್ರತಿಭಾವಂತ ಬಡ ಮಕ್ಕಳಿಗೆ ಪುರಸ್ಕಾರ ಹಾಗೂ ನಗದು ಬಹುಮಾನ ನೀಡಿ ಅತಿಥಿಗಳು ಗೌರವಿ ಸಿದರು. ಮುರಗೇಶ ಡಫಳಾ ಪೂರೆ ಮತ್ತು ಮಹಾನಂದಾ ಜಾಗನೂರಿ ಮಾತನಾಡಿದರು.ಪ.ಪಂ.ಅಧ್ಯಕ್ಷ ಜಯಗೌಡ ಪಾಟೀಲ, ಸಂಕೇಶ್ವರ ಪುರಸಭೆ ಅಧ್ಯಕ್ಷ ಅಮರ ನಲವಡೆ, ಉದಪುಡಿ ಶಿವಸಾಗರ ಸಕ್ಕರೆ ಕಾರ್ಖಾನೆ ನಿರ್ದೇಶಕ ಕೆ.ಎಲ್.ಜಿನರಾಳಿ, ವಸಂತ ನಿಲಜಗಿ ಮತ್ತಿತರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ 45 ಜನರು ಮರಣೋತ್ತರ ನೇತ್ರದಾನ ಮಾಡುವು ದಾಗಿ ಹೆಸರು ನೊಂದಾಯಿಸಿದರು.

ಸಂಸ್ಥೆಯ ಅಧ್ಯಕ್ಷ ವಿಜಯ ರವದಿ ಸ್ವಾಗತಿಸಿ ಪ್ರಾಸ್ತಾವಿಸಿದರು. ಬಿ.ಎಲ್. ಬಂದಾಯಿ ನಿರೂಪಿಸಿದರು.  ಸಹನಾ ರವದಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.