‘ವಚನ ಸಾಹಿತ್ಯದ ಎರಡು ಸಾವಿರ ಸೆಟ್ಗಳು ಎಲ್ಲಿ ಹೋದವು?’ (ವಾ ವಾ ಮಾ. 23) ಎಂಬ ಹಿರಿಯ ವಿದ್ವಾಂಸರಾದ ಡಾ. ಎಸ್. ವಿದ್ಯಾಶಂಕರ್ ಅವರ ಪತ್ರಕ್ಕೆ ಸ್ಪಷ್ಟೀಕರಣ.

1993 ರಲ್ಲಿ ಸಮಗ್ರ ವಚನ ಸಾಹಿತ್ಯ ಸಂಪುಟ ಪ್ರಕಟವಾಗಿ ನಂತರ 2001 ರಲ್ಲಿ 15 ಸಂಪುಟಗಳ ಐದು ಸಾವಿರ ಸೆಟ್ಗಳನ್ನು ಮರು ಮುದ್ರಿಸಲು ಕ್ರಮಕೈಗೊಳ್ಳಲಾಯಿತು. ಅಂದಿನ ಅಧ್ಯಕ್ಷರ ಅವಧಿಯಲ್ಲಿ 3000 ಸೆಟ್ಗಳನ್ನು ಅಂದರೆ 45000 ವಚನ ಸಂಪುಟಗಳ ಪ್ರತಿಗಳನ್ನು ಈಗಾಗಲೆ ನೀಡಿದ ಆದೇಶದ ಮೇರೆಗೆ ಪ್ರಾಧಿಕಾರ ಮುದ್ರಣಾಲಯದಿಂದ ಪಡೆದಿರುವುದಕ್ಕೆ ಪ್ರಾಧಿಕಾರದಲ್ಲಿ ದಾಖಲೆ ಇರುತ್ತದೆ.

ನಂತರ ಬಂದ ಅಧ್ಯಕ್ಷರ ಅವಧಿಯಲ್ಲಿ ಈ ವಚನ ಸಂಪುಟಗಳನ್ನು ಕೇಸ್ ಬೈಂಡಿಂಗ್ಗೆ ನೀಡಿದಾಗ ಕರ್ನಾಟಕ ಪಾರದರ್ಶಕ ಅಧಿನಿಯಮವನ್ನು ಪಾಲಿಸಿಲ್ಲ ಎಂಬುದನ್ನು ಗಮನಿಸಿ, ಮುದ್ರಣಾಲಯದವರಿಗೆ ನೀಡಿದ ಆದೇಶವನ್ನು 25-8-2005 ರಂದು ಪ್ರಾಧಿಕಾರ ಹಿಂಪಡೆದು, 2000 ಸೆಟ್ಗಳನ್ನು ಪ್ರಾಧಿಕಾರಕ್ಕೆ ಹಿಂತಿರುಗಿಸಲು ಸೂಚಿಸಲಾಗಿದೆ.

ಆದರೆ ಸದರಿ ಮುದ್ರಣಾಲಯದವರು ತಾವು ಇಟ್ಟುಕೊಂಡಿರುವ ಕೇಸ್ ಬೈಂಡಿಂಗ್ ಆಗದ 30,000 ಪ್ರತಿಗಳಿಗೆ ಮಾಹೆಯಾನ ಹತ್ತು ಸಾವಿರ ಬಾಡಿಗೆ ಅಥವಾ ಆ ಕೃತಿಗಳಿಗೆ ಕೇಸ್ ಬೈಂಡಿಂಗ್ ಕೆಲಸವನ್ನು ತಮಗೇ ನೀಡುವಂತೆ ಕೋರಿರುತ್ತಾರೆ. ಈ ಮೊತ್ತ ಸುಮಾರು ರೂ. 6 ಲಕ್ಷವಾಗುವುದರಿಂದ ಹಾಗೆ ಮಾಡಿದಲ್ಲಿ, ಮತ್ತೊಮ್ಮೆ ಪಾರದರ್ಶಕ ಕಾಯ್ದೆಯ ಉಲ್ಲಂಘನೆಯಾಗುತ್ತದೆ.

ನಿಯಮಾವಳಿಗಳಲ್ಲಿ ಇದಕ್ಕೆ ಅವಕಾಶವಿರುವುದಿಲ್ಲವಾದ್ದರಿಂದ ಈ ವಿಷಯವನ್ನು ಆಗಿನ ಅಧ್ಯಕ್ಷರ ಅವಧಿಯ ಆಡಳಿತ ಮಂಡಳಿ ಹಾಗೂ ಜೂನ್ 2008ರ ನಂತರ ಅಧಿಕಾರ ವಹಿಸಿಕೊಂಡ ನಾನೂ ಕೂಡ ಸರ್ಕಾರದ ಗಮನಕ್ಕೆ ತಂದಿದ್ದು, ಸೂಕ್ತ ಮಾರ್ಗದರ್ಶನ ಮಾಡಲು ಕೋರಲಾಗಿದೆ.

ಸರ್ಕಾರವು ಈ ಸಂಬಂಧ ಪ್ರಾಧಿಕಾರದಿಂದ ಮಾಹಿತಿಯನ್ನು ಕೋರಿತ್ತು. ಸರ್ಕಾರದ ಸೂಚನೆಯಂತೆ ಈ ವಿಷಯದ ಬಗ್ಗೆ ಪೂರ್ಣ ಮಾಹಿತಿಯನ್ನು ಮುಂದಿನ ಕ್ರಮಕ್ಕಾಗಿ ಸಲ್ಲಿಸಲಾಗಿದೆ. ಸರ್ಕಾರದಿಂದ ಸೂಕ್ತ ನಿರ್ದೇಶನ ಬಂದ ನಂತರ ಅಗತ್ಯ ಕ್ರಮಕೈಗೊಳ್ಳಬಹುದಾಗಿದೆ. ಹೀಗಾಗಿ ಕಾನೂನು ತೊಡಕಿನಿಂದಾಗಿ ಪ್ರಾಧಿಕಾರದ 2000 ಸೆಟ್ಗಳನ್ನು ಹಿಂಪಡೆಯಲು ಸಾಧ್ಯವಾಗಿರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.