ಸೋಮವಾರ, ಜನವರಿ 27, 2020
15 °C

ಸರ್ಕಾರದ ಹಸ್ತಕ್ಷೇಪ ತಪ್ಪಿಸಲು ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಾಚಿ (ಪಿಟಿಐ): ಕ್ರಿಕೆಟ್ ಆಡಳಿತ ದಲ್ಲಿ ಸರ್ಕಾರದ ಹಸ್ತಕ್ಷೇಪ ತಪ್ಪಿಸಲು ತನ್ನ ಸದಸ್ಯ ರಾಷ್ಟ್ರಗಳ ಸಂವಿಧಾನ ದಲ್ಲಿ ಕೆಲ ತಿದ್ದುಪಡಿ ತರಲು ಅಂತರ ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮುಂದಾಗಿದೆ. ಆದರೆ ಅದಕ್ಕೂ ಮೊದಲು ಸದಸ್ಯ ರಾಷ್ಟ್ರಗಳಿಗೆ ಮಾದರಿ ಸಂವಿಧಾನದ ರೂಪುರೇಶೆ ನೀಡಲು ಅದು ಯೋಜನೆ ರೂಪಿಸುತ್ತಿದೆ.ತಮ್ಮ ದೇಶದ ಪರಿಸ್ಥಿತಿ ಬಗ್ಗೆ ಕೆಲ ಸದಸ್ಯ ರಾಷ್ಟ್ರಗಳು ದೂರು ನೀಡಿರುವ ಹಿನ್ನೆಲೆಯಲ್ಲಿ ಐಸಿಸಿ ಈ ಕ್ರಮಕ್ಕೆ ಮುಂದಾಗಿದೆ. ಸದಸ್ಯ ರಾಷ್ಟ್ರಗಳ ಕ್ರಿಕೆಟ್ ಮಂಡಳಿಗಳ ಸಂವಿಧಾನದಲ್ಲಿ ತಿದ್ದುಪಡಿ ತರಲು ಕಳೆದ ಐಸಿಸಿ ಕಾರ್ಯನಿರ್ವಾಹಕ ಮಂಡಳಿ ಸಭೆ ಯಲ್ಲಿಯೇ ನಿರ್ಧರಿಸಲಾಗಿತ್ತು. ಹೊಸ ಸಂವಿಧಾನವನ್ನು  2013ರೊಳಗೆ ಜಾರಿಗೆ ತರಲು ಅದು ಸೂಚಿಸಿದೆ. ಇದರ ಪ್ರಕಾರ ಕ್ರಿಕೆಟ್ ಆಡಳಿತದಲ್ಲಿ ಸರ್ಕಾರ ಅಥವಾ ರಾಜಕೀಯ ಹಸ್ತಕ್ಷೇಪ ಮಾಡುವಂತಿಲ್ಲ.ಈ ಸಂಬಂಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧಿಕಾರಿಗಳು ಐಸಿಸಿಯೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಐಸಿಸಿ ನಿರ್ದೇಶನ ನೀಡಿದಂತೆ ಸಂವಿಧಾನದ ಕೆಲ ಬದಲಾವಣೆ ಮಾಡಲು ಅಸಾಧ್ಯ ಎಂದು ಪಿಸಿಬಿ ಹೇಳಿರುವುದನ್ನು ಮೂಲಗಳು ತಿಳಿಸಿವೆ.ಏಕೆಂದರೆ ಪಾಕಿಸ್ತಾನದಲ್ಲಿ ಕ್ರಿಕೆಟ್ ಮಂಡಳಿಯ ಅಧ್ಯಕ್ಷರನ್ನು ನೇಮಿಸುವುದು ಆ ದೇಶದ ಮುಖ್ಯಸ್ಥ. ಉಳಿದ ಮುಖ್ಯ ಹುದ್ದೆಗಳಿಗೆ ನೇಮಕ ಮಾಡಲು ಕೂಡ ಅವರ ಸಮ್ಮತಿ ಬೇಕು. ಹಾಗಾಗಿ ಪಿಸಿಬಿ ಈಗ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದೆ.`ಐಸಿಸಿ ಯಾವಾಗ ಈ ನಿರ್ಧಾರ ತೆಗೆದುಕೊಂಡಿದೆ ಎಂಬುದು ನಮಗೆ ಗೊತ್ತಿಲ್ಲ. ಹಾಗಾಗಿ ಇಲ್ಲಿ ಈ ಸಂಬಂಧ ನಡೆದಿರುವ ಬೆಳವಣಿಗೆಗಳ ಬಗ್ಗೆ ನಮಗೆ ಮಾಹಿತಿ ಇಲ್ಲ. ಅಷ್ಟು ಮಾತ್ರವಲ್ಲದೇ, ಈ ವಿಷಯ ಸಂಬಂಧ ನಾನು ಸರ್ಕಾರದೊಂದಿಗೆ ಸಮಾ ಲೋಚನೆ ನಡೆಸಲು ಮುಂದಾ ಗಿದ್ದೇವೆ. ಆದರೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಈ ಬಗ್ಗೆ ಚರ್ಚೆ ಜಾರಿ ಯಲ್ಲಿದೆ~ ಎಂದು ಪಿಸಿಬಿ ಮೂಲಗಳು ಹೇಳಿವೆ.

ಪ್ರತಿಕ್ರಿಯಿಸಿ (+)