ಗುರುವಾರ , ಏಪ್ರಿಲ್ 15, 2021
31 °C

ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ: ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ದೂರು: ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ದೊರಕುತ್ತಿಲ್ಲ ಎಂದು ಗುರುವಾರ ನಡೆದ ತಾಪಂ ಸಭೆಯಲ್ಲಿ ಎಲ್ಲಾ ತಾಪಂ ಸದಸ್ಯರು ಒಕ್ಕೊರಲಿ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆಯಿತು. ಇಲ್ಲಿನ ತಾಪಂ ಸಭಾಂಗಣದಲ್ಲಿ ಅಧ್ಯಕ್ಷೆ ಚೌಡಮ್ಮ ಅವರ ಅಧ್ಯಕ್ಷತೆ ಯಲ್ಲಿ ಸಭೆ ಆರಂಭಗೊಳ್ಳುತ್ತಿದ್ದಂತೆ ತಾಲ್ಲೂಕು ಆಸ್ಪತ್ರೆಯಲ್ಲಿನ ಅವ್ಯವ ಸ್ಥೆಯ ಬಗೆಗೆ ಮಾತನಾಡಿದ ಸದಸ್ಯ ರು, ಬಡರೋಗಿಗಳಿಗೆ ಅಗತ್ಯ ವಾದ ಚಿಕಿತ್ಸೆ ಹಾಗೂ ಸಲಹೆ ದೊರಕದಿರುವ ಬಗೆಗೆ ಆಕ್ಷೇಪ ವ್ಯಕ್ತಪಡಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯಾಧಿಕಾರಿ ಡಾ.ಸಿದ್ದೇಗೌಡ, ಆಸ್ಪತ್ರೆಯಲ್ಲಿ ಸಿಬ್ಬಂದಿ ಸೇರಿದಂತೆ ರಕ್ತನಿಧಿ ಕೇಂದ್ರದ ಸಮಸ್ಯೆ ಇರುವುದರಿಂದ ಹೆರಿಗೆ ಇತರ ಅಪಘಾತ ಸಂದರ್ಭದಲ್ಲಿ ರೋಗಿಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ದಾಖಲಿಸುವಂತೆ ತಿಳಿಸಲಾಗುತ್ತಿದೆ ಹೊರತು ಉತ್ತಮ ಚಿಕಿತ್ಸೆಯನ್ನು ಆಸ್ಪತ್ರೆಯಲ್ಲಿ ನೀಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು. ಅಲ್ಲದೇ ಸರ್ಜನ್ ನಾರಾಯಣಸ್ವಾಮಿ ಅವರ ಬಗೆಗೆ ದೂರುಗಳು ಬಂದಿದ್ದು, ದೂರುಗಳ ಪ್ರತಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಿದೆ ಎಂದರು.ಕೆಸ್ತೂರು, ನವಿಲೆ ಹಾಗೂ ಮುಳ್ಳಹಳ್ಳಿಗಳಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಿಸದಿರುವ ಬಗೆಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ತಾಪಂ ಸದಸ್ಯೆ ಸುನಂದ ಬೆಸಗರಹಳ್ಳಿ ಆಸ್ಪತ್ರೆಯಲ್ಲಿ ಅಂಬುಲೆನ್ಸ್ ಕೊರತೆ ಇರುವ ಬಗೆಗೆ ಸಭೆಯ ಗಮನ ಸೆಳೆದರು. ರೇಷ್ಮೆ ಮಾರುಕಟ್ಟೆಯನ್ನು ತಾಲ್ಲೂಕಿನಲ್ಲಿ ಸ್ಥಾಪಿಸುವ ಬಗೆಗೆ ತಾಪಂ ಸದಸ್ಯ ಸಂದರ್ಶ ಸಲಹೆ ನೀಡಿದರೆ, ಪಶು ವೈದ್ಯಾಧಿಕಾರಿಗಳ ಕೊರತೆ ನೀಗಿಸಬೇಕೆಂದು ಸದಸ್ಯರಾದ ರಾಮಚಂದ್ರ, ನಾಗೇಗೌಡ ಆಗ್ರಹಿಸಿದರು.ಅರಣ್ಯ ಇಲಾಖೆಯಲ್ಲಿನ ಅವ್ಯವಸ್ಥೆ ಬಗೆಗೆ ಸದಸ್ಯ ಕೆ.ಆರ್.ಮಹೇಶ್ ಆರೋಪಿಸಿದರೆ, ಗ್ರಾಮಗಳಿಗೆ ಆರೋಗ್ಯ ಇಲಾಖೆ ಸಹಾಯಕಿಯರು ಸರಿಯಾಗಿ ಭೇಟಿ ನೀಡದಿರುವ ಬಗೆಗೆ ಸದಸ್ಯ ರಾಜೀವ್ ದೂರಿದರು.  ಮಧ್ಯಾಹ್ನದ ನಂತರ ಸೆಸ್ಕ್ ಇಲಾಖೆಯ ಅವಾಂತರಗಳು ಹಾಗೂ ಸಮಸ್ಯೆಗಳ ಬಗೆಗೆ ಚರ್ಚಿಸಿದ ಸದಸ್ಯರು, ಬೇಸಿಗೆ ಹತ್ತಿರವಾಗು ತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಅಧಿಕಾರಿಗಳನ್ನು ಆಗ್ರಹಿಸಿದರು.ತಾಪಂ ಉಪಾಧ್ಯಕ್ಷ ನಗರಕೆರೆ ಸಿದ್ದಪ್ಪ, ತಾಪಂ ಇಓ ಶಮಂತ್ ಕುಮಾರ್, ಬಿಇಓ ಕಾಂತರಾಜು, ತಾಪಂ ಸದಸ್ಯರಾದ ಸುಜಾತ ಮರಿಲಿಂಗಯ್ಯ, ಗೀತಾ, ಲಕ್ಷ್ಮಮ್ಮ, ನಾರಾಯಣಸ್ವಾಮಿ, ನೀಲಮ್ಮ, ಲಲಿತಾ, ಪ್ರಕಾಶ್, ಧನಂಜಯ, ಮಂಜುಳ, ಜ್ಯೋತಿ, ಗೌರಮ್ಮ, ಪುಟ್ಟಸ್ವಾಮಿಗೌಡ, ಇಂದ್ರಾಣಿ, ನಾಗರತ್ನಮ್ಮ ಇತರ ಅಧಿಕಾರಿಗಳು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.