ಸರ್ಕಾರಿ ಶಾಲಾ ಮಕ್ಕಳಿಗೆ 10 ಲಕ್ಷ ಪುಸ್ತಕ ಪೂರೈಕೆ

ಯಾದಗಿರಿ: ಜಿಲ್ಲೆಯಾದ್ಯಂತ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿದ್ದು, ಪುಸ್ತಕಗಳ ವಿತರಣೆಯೂ ನಡೆಯುತ್ತಿದೆ. ಜಿಲ್ಲೆಯ ಸರ್ಕಾರಿ ಶಾಲೆ, ಅನುದಾನಿತ, ಅನುದಾನರಹಿತ ಶಾಲೆಗಳ ಮಕ್ಕಳಿಗೆ ವಿತರಿಸಲು ಈಗಾಗಲೇ ಆಯಾ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಪುಸ್ತಕಗಳ ವಿತರಣೆ ಮಾಡಲಾಗುತ್ತಿದೆ.
ಶಾಲೆ ಆರಂಭವಾಗುವ ದಿನವೇ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಸಮ ವಸ್ತ್ರಗಳ ವಿತರಣೆ ಮಾಡಲಾಗಿದೆ. ಇನ್ನು ಕೆಲವೆಡೆ ಪುಸ್ತಕಗಳ ವಿತರಣೆ ಕಾರ್ಯ ಕ್ರಮ ನಡೆಯುತ್ತಿದೆ. ಇದರಿಂದಾಗಿ ಪುಸ್ತ ಕಗಳಿಗೆ ಈ ವರ್ಷ ವಿದ್ಯಾರ್ಥಿಗಳು ತೊಂದರೆ ಅನುಭವಿಸುವುದು ತಪ್ಪಿದಂತಾಗಿದೆ.
ಶಾಲಾ ಪ್ರಾರಂಭೋತ್ಸವದ ದಿನ ದಂದೇ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ತಲುಪಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದ್ದು, ಜಿಲ್ಲೆಯಲ್ಲಿ ಇದು ವರೆಗೆ ಶೇ 94 ರಷ್ಟು ಪುಸ್ತಕಗಳನ್ನು ಪೂರೈಸಲಾಗಿದೆ.
ಕಳೆದ ವರ್ಷ ಶಾಲೆಗಳು ಆರಂಭ ವಾದ ನಂತರವೂ ವಿದ್ಯಾರ್ಥಿಗಳು ಪುಸ್ತ ಕಗಳಿಗಾಗಿ ಪರದಾಡುವಂತಾಗಿತ್ತು. ಬಹು ತೇಕ ಶಾಲಾ ಮಕ್ಕಳು ಪುಸ್ತಕಗಳಿ ಲ್ಲದೇ 2–3 ತಿಂಗಳು ವಿದ್ಯಾಭ್ಯಾಸ ಮಾಡು ವಂತಾಯಿತು. ಇದೆಲ್ಲವನ್ನು ನಿವಾರಿಸಲು ಮುಂದಾಗಿರುವ ಶಿಕ್ಷಣ ಇಲಾಖೆ, ಈ ಬಾರಿ ಸರಿಯಾದ ಸಮಯದಲ್ಲಿ ಪುಸ್ತಕ ಗಳು ವಿದ್ಯಾರ್ಥಿಗಳ ಕೈಸೇರುವಂತೆ ಮಾಡುತ್ತಿದೆ.
ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಉಚಿತ ವಾಗಿ ನೀಡಲು 11,33,034 ಪಠ್ಯ ಪುಸ್ತಕಗಳ ಬೇಡಿಕೆ ಇದೆ. ಅನು ದಾನ ರಹಿತ ಶಾಲೆಗಳಿಗೆ ಮಾರಾಟ ಮಾಡಲು 1,27,808 ಪುಸ್ತಕಗಳ ಬೇಡಿಕೆ ಬಂದಿದೆ. ಉಚಿತ ಹಾಗೂ ಮಾರಾಟ ಸೇರಿ ಒಟ್ಟು 12,67,585 ಪುಸ್ತಕಗಳ ಬೇಡಿಕೆ ಇದೆ.
ಇದರಲ್ಲಿ ಉಚಿತವಾಗಿ ನೀಡಲು 10, 22,236 ಪುಸ್ತಕಗಳು ಹಾಗೂ ಮಾರಾಟ ಕ್ಕಾಗಿ 1,20,278 ಪುಸ್ತಕಗಳು ಸೇರಿದಂತೆ 11,42,514 ಪುಸ್ತಕಗಳು ಪೂರೈಕೆಯಾ ಗಿವೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಶಹಾಪುರ ತಾಲ್ಲೂಕಿನಲ್ಲಿ 4,01, 146 ಪುಸ್ತಕಗಳ ಬೇಡಿಕೆಯಿದ್ದು, 3,65,746 ಪುಸ್ತಕಗಳು ಪೂರೈಸಲಾ ಗಿದೆ. ಯಾದಗಿರಿ ತಾಲ್ಲೂಕಿನಲ್ಲಿ 4,43, 175 ಪುಸ್ತಕಗಳ ಬೇಡಿಕೆ ಇದ್ದು, 3,92, 979 ಪುಸ್ತಕಗಳು ಪೂರೈಸಲಾ ಗಿದೆ. ಸುರಪುರ ತಾಲ್ಲೂಕಿನಲ್ಲಿ 4,23, 264 ಬೇಡಿಕೆಯಿದೆ. ಇದರಲ್ಲಿ 3,85, 477 ಪುಸ್ತಕಗಳನ್ನು ಪೂರೈಸಲಾಗಿದೆ.
ಮಾನ್ಯತೆ ಪಡೆದ ಅನುದಾನರಹಿತ ಶಾಲೆಗಳಲ್ಲಿ ದಾಖಲಾದ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೊಸ ಪಠ್ಯ ಪುಸ್ತಕ ಗಳನ್ನು ಖರೀದಿಸುವಂತೆ ಇಲಾಖೆ ನಿಯ ಮವಿದೆ. ಯಾವುದೇ ಶಾಲೆಯವರು ಹಳೆಯ ಪುಸ್ತಕಗಳನ್ನು ನೀಡಿದ ಬಗ್ಗೆ ಪಾಲಕರಿಂದ ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಡಿಪಿಐ ಕೆಂಚೇಗೌಡ ತಿಳಿಸಿದ್ದಾರೆ.
ಶಾಲಾ ಪ್ರಾರಂಭೋತ್ಸವದಂದೇ ಶಾಲೆಗೆ ಹಾಜರಾಗುವ ಮಕ್ಕಳಿಗೆ ಪುಸ್ತಕ ವಿತರಿಸಲು ಸೂಚನೆ ನೀಡಲಾಗಿದೆ. ವಿಳಂಬವಾದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಕೆಂಚೇಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.