ನವದೆಹಲಿ: ಸಲಿಂಗರತಿ ಅಪರಾಧ ಎಂದು ಸುಪ್ರೀಂಕೋರ್ಟ್ ನೀಡಿರುವ ಮಹತ್ವದ ತೀರ್ಪಿನ ಕುರಿತು ಎಲ್ಲೆಡೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿರುವ ಬೆನ್ನಲ್ಲೆ, ಈ ಸಂಬಂಧ ವಿಶ್ವಸಂಸ್ಥೆಯ ಏಡ್ಸ್ ನಿಯಂತ್ರಣ ಸಂಸ್ಥೆ (ಯುಎನ್ಏಡ್ಸ್) ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್ಸಿ) ಸಹ ತೀವ್ರ ಕಳವಳ ವ್ಯಕ್ತಪಡಿಸಿದೆ.

ಭಾರತೀಯ ದಂಡಸಂಹಿತೆಯ 377ನೇ ಸೆಕ್ಷನ್ ಸಂವಿಧಾನಬದ್ಧತೆಯ ಕುರಿತು ತೀರ್ಪು ನೀಡುವ ಮೂಲಕ ಸುಪ್ರೀಂಕೋರ್ಟ್ ವಯಸ್ಕರ ನಡುವಿನ ಸಮ್ಮತಿಯ ಸಂಬಂಧದ ವಿಷಯವನ್ನು ಪುನರ್ಅಪರಾಧಗೊಳಿಸಿದೆ ಎಂದು ವಿಶ್ವಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ತೀರ್ಪಿನಿಂದಾಗಿ ಭಾರತದಲ್ಲಿಯ ಸಲಿಂಗಿ, ದ್ವಿಲಿಂಗಿ ಇಲ್ಲವೆ ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಅಪರಾಧ ಕೃತ್ಯಗಳಿಗೆ ಇಳಿಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

‘ಭಾರತದ ಲಕ್ಷಾಂತರ ಜನರ ಗೌರವವನ್ನು ದೆಹಲಿ ಹೈಕೋರ್ಟ್ ನ 2009ರ ತೀರ್ಪು ಎತ್ತಿಹಿಡಿದಿತ್ತು. ಏಡ್ಸ್ ನಂತಹ ರಾಷ್ಟ್ರೀಯ ಕಾರ್ಯಕ್ರಮದ ಯಶಸ್ವಿಗೆ ಇಂತಹ ತೀರ್ಪು ಸಹಕಾರಿ ಎನಿಸಿದೆ’ ಎಂದು ಯುಎನ್ಏಡ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಮೈಕೆಲ್ ಸಿಡಿಬ್ ಹೇಳಿದ್ದಾರೆ.

ಎಚ್ಐವಿ ನಿಯಂತ್ರಣ ಕಾರ್ಯಕ್ರಮಗಳನ್ನು ಕೈಗೊಳ್ಳುವಲ್ಲಿ ಡಿ.11ರ ಸುಪ್ರೀಂಕೋರ್ಟ್ ತೀರ್ಪು ಅಡ್ಡಿಯಾಗಿದೆ ಎಂದು ಆರೋಗ್ಯ ಕಾರ್ಯರ್ತರು ಹಾಗೂ ಅಧಿಕಾರಿಗಳು ಆತಂಕಗೊಂಡಿದ್ದಾರೆ ಎಂದಿದ್ದಾರೆ.

ಎನ್ಎಚ್ಆರ್ಸಿ: ಸಲಿಂಗಿ ಇಲ್ಲವೆ ದ್ವಿಲಿಂಗಿಗಳು ಪರಸ್ಪರ ಸಮ್ಮತದ ಲೈಂಗಿಕ ಸಂಬಂಧ ಹೊಂದುವುದಕ್ಕೆ ಇದರಿಂದ ಅಡ್ಡಿಯಾಗಿದೆ ಎಂದಿರುವ ಎನ್ಎಚ್ಆರ್ಸಿ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಸರ್ಕಾರ ತುರ್ತಾಗಿ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡಿದೆ.

‘ಮಾನವ ಹಕ್ಕುಗಳ ಉಲ್ಲಂಘನೆ ಯಾಗದಂತೆ ಐಪಿಸಿ 377ನೇ ಸೆಕ್ಷನ್ಗೆ ಸೂಕ್ತ ತಿದ್ದುಪಡಿ ತರುವುದು ಅಗತ್ಯ’ ಎಂದು ಎನ್ಎಚ್ಆರ್ಸಿ ಪ್ರಕಟಣೆ ಯಲ್ಲಿ ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.