ಶುಕ್ರವಾರ, ಏಪ್ರಿಲ್ 16, 2021
31 °C

ಸವಿತಾ ಸಾವು: ಇಂದು ತಜ್ಞರ ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ದಂತ ವೈದ್ಯೆ ಸವಿತಾ ಹಾಲಪ್ಪನವರ ದುರಂತ ಸಾವಿಗೆ ಕಾರಣವಾದ ಐರ‌್ಲೆಂಡ್ ಸರ್ಕಾರದ `ಗರ್ಭಪಾತ ನಿಷೇಧ~ ಕಾನೂನಿಗೆ ಸಂಬಂಧಸಿದಂತೆ ತಜ್ಞರ ತಂಡ ಸಿದ್ಧಪಡಿಸಿರುವ ವರದಿ ಮಂಗಳವಾರ ಸಂಪುಟದ ಮುಂದೆ ಬರಲಿದೆ.ವ್ಯಾಪಕ ಟೀಕೆಗೆ ಒಳಗಾಗಿರುವ ದೇಶದ ಕಾನೂನು ಕುರಿತು ತಜ್ಞರು ಸಿದ್ಧಪಡಿಸಿರುವ ವರದಿಯನ್ನು ಸಂಪುಟದ ಗಮನಕ್ಕೆ ತರುವುದಾಗಿ ಐರ‌್ಲೆಂಡ್ ಸರ್ಕಾರದ ಆರೋಗ್ಯ ಸಚಿವ ಜೇಮ್ಸ ರೇಲಿ ಸೋಮವಾರ ತಿಳಿಸಿದ್ದಾರೆ.

ವೃತ್ತಿಯಲ್ಲಿ ದಂತ ವೈದ್ಯೆಯಾಗಿದ್ದ ಸವಿತಾ ಹಾಲಪ್ಪನವರ ದುರಂತ ಸಾವು ಮತ್ತು ಗರ್ಭಪಾತ ನಿಷೇಧ ಕಾನೂನಿನ ವಿರುದ್ಧ ವಿಶ್ವದಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.ಕೂಡಲೇ ಎಚ್ಚೆತ್ತುಕೊಂಡ ಐರ‌್ಲೆಂಡ್ ಸರ್ಕಾರ ಈ ಕುರಿತು ಪರಿಶೀಲಿಸಿ     ವರದಿ ನೀಡಲು ತಜ್ಞರ ತಂಡವನ್ನು ನೇಮಿಸಿತ್ತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.