2012ರ ಜೂನ್ ತಿಂಗಳಿನಲ್ಲಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಜೀವಶಾಸ್ತ್ರ ಉಪನ್ಯಾಸಕರ ಹುದ್ದೆಗೆ ಸಸ್ಯಶಾಸ್ತ್ರ ಹಾಗೂ ಪ್ರಾಣಿಶಾಸ್ತ್ರ ಕುರಿತಂತೆ ಪ್ರತ್ಯೇಕ ಪರೀಕ್ಷೆ ನಡೆಸಲಾಯಿತು, ಆದರೆ ಆಯ್ಕೆ ಪ್ರಕ್ರಿಯೆಯಲ್ಲಿ ಎರಡನ್ನು ಸೇರಿಸಿ ಫಲಿತಾಂಶ ಪ್ರಕಟಿಸಲಾಗಿದೆ. ಆಯ್ಕೆ ಪಟ್ಟಿಯನ್ನು ಗಮನಿಸಿದಾಗ ಪ್ರಾಣಿಶಾಸ್ತ್ರದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದು ಕಂಡು ಬರುತ್ತದೆ.

ಸುಮಾರು 220 ಹುದ್ದೆಗಳಿಗೆ ಪರೀಕ್ಷೆ ನಡೆದಿದ್ದು ಆಯ್ಕೆಯಾದವರಲ್ಲಿ 185 ಅಭ್ಯರ್ಥಿಗಳು ಪ್ರಾಣಿಶಾಸ್ತ್ರದವರೇ ಆಗಿದ್ದಾರೆ. ಉಳಿದಂತೆ ಬಯೋಸೈನ್ಸ್ 10, ಲೈಫ್ಸೈನ್ಸ್10 (ಈ ಅಭ್ಯರ್ಥಿಗಳು ಐಚ್ಛಿಕ ವಾಗಿ ಪ್ರಾಣಿಶಾಸ್ತ್ರವನ್ನೂ ತೆಗೆದುಕೊಂಡಿರಬಹುದು).

ಸಸ್ಯ ಶಾಸ್ತ್ರದಲ್ಲಿ ಆಯ್ಕೆಯಾದವರು ಕೇವಲ 15 ಜನ ಮಾತ್ರ. ಒಟ್ಟು ಹುದ್ದೆಗಳಲ್ಲಿ ಎರಡೂ ವಿಷಯಗಳಿಗೆ 50-50 ಸಮಾನವಾಗಿ ಹಂಚಿಕೆಯಾಗಿದ್ದರೆ ಸಸ್ಯಶಾಸ್ತ್ರ ಹಾಗು ಪ್ರಾಣಿಶಾಸ್ತ್ರ ಅಭ್ಯರ್ಥಿಗಳಿಗೆ ಸಮಾನ ಅವಕಾಶ ದೊರೆಯುತ್ತಿತ್ತು.

ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಆಯ್ಕೆಯಾದವರು ಸಸ್ಯಶಾಸ್ತ್ರ ಹಾಗೂ ಪ್ರಾಣಿಶಾಸ್ತ್ರ ಎರಡೂ ವಿಷಯವನ್ನು ಬೋಧಿಸಬೇಕಾಗಿರುವುದರಿಂದ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಸಸ್ಯಶಾಸ್ತ್ರ ಅಭ್ಯರ್ಥಿಗಳು ಅವಕಾಶ ವಂಚಿತರಾಗದಂತೆ ಕ್ರಮ ಕೈಗೊಳ್ಳುತ್ತಾರೆಂದು ಆಶಿಸುತ್ತೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.